ಕೋರ್ಟ್‌ಗೆ ಹಾಜರಾದ ಡಿಕೆಶಿ, ಪ್ರಜಾಧ್ವನಿ ಯಾತ್ರೆ ರದ್ದು: BJP ವಿರುದ್ಧ ವಾಗ್ದಾಳಿ ನಡೆಸಿದ ಕೆಪಿಸಿಸಿ ಅಧ್ಯಕ್ಷ
ಬೆಂಗಳೂರು: ''ಸೈದ್ಧಾಂತಿಕವಾಗಿ ಎದುರಿಸಲು ಶಕ್ತಿಯಿಲ್ಲದ BJP ಕುತಂತ್ರಗಳನ್ನು ಮುಂದುವರಿಸಿದೆ'' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ಟ್ವೀಟ್ ಮಾಡಿರುವ ಅವರು, ''BJP ಸರ್ಕಾರ ನನ್ನ ವಿರುದ್ಧ ದಾಖಲಿಸಿರುವ 4 ಪ್ರಕರಣಗಳ ಸಂಬಂಧ ಹೈಕೋರ್ಟ್‌ಗೆ ಹಾಜರಾಗಬೇಕಾದ ಕಾರಣ ಇಂದು ನಿಗದಿಯಾಗಿದ್ದ ಪ್ರಜಾಧ್ವನಿ ಯಾತ್ರೆ ರದ್ದು ಮಾಡಲಾಗಿದೆ ಎಂದು ತಿಳಿಸಲು ವಿಷಾದಿಸುತ್ತೇನ'' ಎಂದು ತಿಳಿಸಿದ್ದಾರೆ.
''ನನ್ನ ವಿರುದ್ಧ ದಾಖಲಾಗಿರುವ ಪ್ರಕರಣಗಳು ಹೀಗಿವೆ. 1) CC. NO.307908/2021 (IT) 2) CC. NO.32628/2021 ರೈಲ್ವೆ ನಿಲ್ದಾಣದಿಂದ ರಾಜಭವನದವರೆಗೆ ಪ್ರತಿಭಟನಾ ಮೆರವಣಿಗೆ. 3) CC. NO.3169/2022 ಕೋವಿಡ್ ಅಸಮರ್ಪಕ ನಿರ್ವಹಣೆ ಸಂಬಂಧ BBMP ವಿರುದ್ಧ ಪ್ರತಿಭಟನೆ. 4) CC. NO.25317/2022 ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಂಧ ಸೋನಿಯಾಗಾಂಧಿ ವಿಚಾರಣೆ ಖಂಡಿಸಿ ಪ್ರತಿಭಟನೆ'' ಎಂದು ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದಾರೆ.
ಸೈದ್ಧಾಂತಿಕವಾಗಿ ಎದುರಿಸಲು ಶಕ್ತಿಯಿಲ್ಲದ BJP ಕುತಂತ್ರಗಳನ್ನು ಮುಂದುವರಿಸಿದೆ. BJP ಸರ್ಕಾರ ನನ್ನ ವಿರುದ್ಧ ದಾಖಲಿಸಿರುವ 4 ಪ್ರಕರಣಗಳ ಸಂಬಂಧ ಹೈಕೋರ್ಟ್‌ಗೆ ಹಾಜರಾಗಬೇಕಾದ ಕಾರಣ ಇಂದು ನಿಗದಿಯಾಗಿದ್ದ ಪ್ರಜಾಧ್ವನಿ ಯಾತ್ರೆ ರದ್ದು ಮಾಡಲಾಗಿದೆ ಎಂದು ತಿಳಿಸಲು ವಿಷಾದಿಸುತ್ತೇನೆ.
— DK Shivakumar (@DKShivakumar) March 2, 2023
ನನ್ನ ವಿರುದ್ಧ ದಾಖಲಾಗಿರುವ ಪ್ರಕರಣಗಳು ಹೀಗಿವೆ.
1/2 pic.twitter.com/VzHqx15AIe
1) CC. NO.307908/2021
— DK Shivakumar (@DKShivakumar) March 2, 2023
(IT)
2) CC. NO.32628/2021
ರೈಲ್ವೆ ನಿಲ್ದಾಣದಿಂದ ರಾಜಭವನದವರೆಗೆ ಪ್ರತಿಭಟನಾ ಮೆರವಣಿಗೆ.
3) CC. NO.3169/2022
ಕೋವಿಡ್ ಅಸಮರ್ಪಕ ನಿರ್ವಹಣೆ ಸಂಬಂಧ BBMP ವಿರುದ್ಧ ಪ್ರತಿಭಟನೆ.
4) CC. NO.25317/2022
ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಂಧ ಸೋನಿಯಾಗಾಂಧಿ ವಿಚಾರಣೆ ಖಂಡಿಸಿ ಪ್ರತಿಭಟನೆ
2/2