Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಪ್ರಾದೇಶಿಕ ಪಕ್ಷವನ್ನು ಜನ ಬೆಂಬಲಿಸಿದರೆ...

ಪ್ರಾದೇಶಿಕ ಪಕ್ಷವನ್ನು ಜನ ಬೆಂಬಲಿಸಿದರೆ ರಾಜ್ಯವೂ ಸಮೃದ್ಧವಾದೀತು: ಕೆ. ಮಹದೇವ್

ಸಂದರ್ಶನ: ಮಂಜುಳಾ ಮಾಸ್ತಿಕಟ್ಟೆಸಂದರ್ಶನ: ಮಂಜುಳಾ ಮಾಸ್ತಿಕಟ್ಟೆ2 March 2023 3:28 PM IST
share
ಪ್ರಾದೇಶಿಕ ಪಕ್ಷವನ್ನು ಜನ ಬೆಂಬಲಿಸಿದರೆ ರಾಜ್ಯವೂ ಸಮೃದ್ಧವಾದೀತು: ಕೆ. ಮಹದೇವ್

ಮುಂದಿನ ವಿಧಾನಸಭಾ ಚುನಾವಣಾ ಸಿದ್ಧತೆಯ ಬಗ್ಗೆ ಜೆಡಿಎಸ್ ನಾಯಕ, ಪಿರಿಯಾಪಟ್ಟಣ ಶಾಸಕ ಕೆ. ಮಹದೇವ್ ಅವರು ‘ವಾರ್ತಾಭಾರತಿ’ಯೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ರಾಜ್ಯದ ಅಭಿವೃದ್ಧಿಯಾಗಬೇಕು, ಭ್ರಷ್ಟಾಚಾರ ಕಡಿಮೆಯಾಗಬೇಕು ಎಂಬ ಆಲೋಚನೆಯನ್ನು ಮತದಾರರು ಮಾಡಬೇಕಿದೆ. ರಾಷ್ಟ್ರೀಯ ಪಕ್ಷಗಳು ದೇಶದಲ್ಲೆಲ್ಲಾ ಆಡಳಿತ ಹೊಂದಿಲ್ಲ. ಬಹಳಷ್ಟು ಕಡೆ ಪ್ರಾದೇಶಿಕ ಪಕ್ಷಗಳು ಪ್ರಬಲವಾಗಿವೆ. ಅವು ಪ್ರಬಲವಾಗಿರುವ ರಾಜ್ಯಗಳು ಸಮೃದ್ಧವಾಗಿವೆ. ಅದಕ್ಕೋಸ್ಕರವೇ ಕರ್ನಾಟಕದಲ್ಲಿಯೂ ರಾಷ್ಟ್ರೀಯ ಪಕ್ಷಗಳನ್ನು ಅವಲಂಬಿಸದೆ ಪ್ರಾದೇಶಿಕ ಪಕ್ಷ ಬೆಂಬಲಿಸಿ ಎಂಬುದು ನಮ್ಮ ಮನವಿ.

 ಹೇಗಿದೆ ನಿಮ್ಮ ಕ್ಷೇತ್ರದಲ್ಲಿ ಚುನಾವಣೆ ತಯಾರಿ?

ಕೆ. ಮಹದೇವ್: ತಯಾರಿ ಚೆನ್ನಾಗಿಯೇ ಇದೆ. ಮೂಲಭೂತ ಸೌಲಭ್ಯಗಳನ್ನು ಪ್ರತೀ ಗ್ರಾಮಗಳಿಗೆ ಕೊಡುತ್ತಿರುವ ಕೆಲಸದಲ್ಲಿ ನನಗೂ ತೃಪ್ತಿಯಿದೆ. ಜನರು ಅದರ ಬಗ್ಗೆ ಹೇಳುತ್ತಿದ್ದಾರೆ.

 ಈ ಬಾರಿ ಬಿಜೆಪಿ ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಪಡೆಯುವ ಹಠದಲ್ಲಿದೆ. ಏನು ಹೇಳುತ್ತೀರಿ?

ಕೆ. ಮಹದೇವ್: ಬಿಜೆಪಿ ಆ ನಿಟ್ಟಿನಲ್ಲಿ ಸಂಘಟನೆ ಚುರುಕಾಗಿಸಿರುವುದು ನಿಜ. ಆದರೆ ಅದು ಶೂನ್ಯ ಆಗುತ್ತದೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ತನ್ನ ನೆಲೆ ಕಂಡುಕೊಳ್ಳುವುದು ಕಷ್ಟ.

 ಆದರೆ ವಿಶ್ವನಾಥ್ ಅವರಂಥ ಜೆಡಿಎಸ್ ನಾಯಕರಿಗೇ ಗಾಳ ಹಾಕಿದ್ದಾರೆ. ಆ ಮೂಲಕ ಪಕ್ಷ ನೆಲೆಯೂರಿಸುವ ಪ್ರಯತ್ನಗಳಿವೆ ಎಂಬ ಮಾತಿದೆ?

ಕೆ. ಮಹದೇವ್: ಈಗಾಗಲೇ ವಿಶ್ವನಾಥ್ ಅವರು ಮತ್ತೆ ಕಾಂಗ್ರೆಸ್‌ಗೆ ಹೋಗುವ ಮಾತು ಹೇಳುತ್ತಿದ್ದಾರೆ. ಅವರು ವಲಸಿಗ ರಾಜಕಾರಣಿ ಆಗಿಬಿಟ್ಟಿದ್ದಾರೆ. ಅವರಿಗೆ ಸ್ಥಿರವಾದ ರಾಜಕೀಯದ ಮನೆ ಯಾವುದೂ ಇಲ್ಲ.

 ಯಾಕೆ ಜನ ಜೆಡಿಎಸ್‌ಗೆ ಮತ ನೀಡಬೇಕು?

ಕೆ. ಮಹದೇವ್: ರಾಷ್ಟ್ರೀಯ ಪಕ್ಷಗಳು ಯಾವುದೇ ಅಭಿವೃದ್ಧಿ ಕೆಲಸದತ್ತ ಗಮನ ಹರಿಸಿಲ್ಲ. ಈಗಿನದು ಡಬಲ್ ಇಂಜಿನ್ ಸರಕಾರ ಎನ್ನುತ್ತಿದ್ದಾರೆ. ಅಲ್ಲ. ಬಿಜೆಪಿ ಸರಕಾರ ಬಂದು ೪ ವರ್ಷ ಆಗುತ್ತಿದೆ. ಹೇಳುವಂಥ ಅಭಿವೃದ್ಧಿ ಕೆಲಸ ಮಾಡಿಲ್ಲ.

 ಹಿಂದೆಯೂ ಭ್ರಷ್ಟಾಚಾರ ಇತ್ತು. ನಮ್ಮ ಕಾಲದಲ್ಲಿ ಅಷ್ಟಿಲ್ಲ ಎನ್ನುತ್ತಾರೆ. ಇದಕ್ಕೆ ಏನು ಹೇಳುತ್ತೀರಿ?

ಕೆ. ಮಹದೇವ್: ನಾನು ರಾಜಕೀಯಕ್ಕೆ ಬಂದು ೪೦ ವರ್ಷ ಆಯಿತು. ಅಲ್ಪಸ್ವಲ್ಪ ಭ್ರಷ್ಟಾಚಾರ ನಡೆಯುತ್ತಲೇ ಇತ್ತು. ಆದರೆ ಈಗ ಬೃಹದಾಕಾರವಾಗಿ ಬೆಳೆದಿದೆ. ಜನತೆಗೆ ಸಹಿಸಲು ಆಗುತ್ತಿಲ್ಲ. ಈ ಭ್ರಷ್ಟಾಚಾರದಿಂದ ಮುಕ್ತಿ ಹೇಗೆ ಎಂದು ಜನ ಯೋಚಿಸುತ್ತಿದ್ದಾರೆ.

 ಮೈಸೂರು ಭಾಗಕ್ಕೆ ಬಿಜೆಪಿ ಹಿಂದುತ್ವದ ವಿಚಾರವನ್ನೂ ಇಟ್ಟುಕೊಂಡು ಬರುತ್ತಿದೆ. ಆ ಭಾಗದ ಜನ ಹಿಂದುತ್ವಕ್ಕೆ ಮಣೆ ಹಾಕುವರೇ?

ಕೆ. ಮಹದೇವ್: ಈ ದೇಶ ಜಾತ್ಯತೀತ ದೇಶ. ಒಂದೇ ಧರ್ಮ, ಸಂಸ್ಕೃತಿ ಆಧಾರದ ಮೇಲೆ ಈ ದೇಶ ಸಂಘಟನೆಯಾಗಿಲ್ಲ. ಬಿಜೆಪಿಯ ಉದ್ದೇಶ ಇಲ್ಲಿ ಫಲ ನೀಡದು. ಎಲ್ಲ ಸಮುದಾಯಗಳು ಒಂದಾಗಿಯೇ ಹೋಗುತ್ತವೆ.

 ಎರಡೂ ರಾಷ್ಟ್ರೀಯ ಪಕ್ಷಗಳನ್ನು ಬಿಟ್ಟು ಜೆಡಿಎಸ್ ಅನ್ನೇ ಯಾಕೆ ಜನ ಆಯ್ದುಕೊಳ್ಳಬೇಕು ಎನ್ನುತ್ತೀರಿ?

ಕೆ. ಮಹದೇವ್: ರಾಜ್ಯದ ಅಭಿವೃದ್ಧಿಯಾಗಬೇಕು, ಭ್ರಷ್ಟಾಚಾರ ಕಡಿಮೆಯಾಗಬೇಕು ಎಂಬ ಆಲೋಚನೆಯನ್ನು ಮತದಾರರು ಮಾಡಬೇಕಿದೆ. ರಾಷ್ಟ್ರೀಯ ಪಕ್ಷಗಳು ದೇಶದಲ್ಲೆಲ್ಲಾ ಆಡಳಿತ ಹೊಂದಿಲ್ಲ. ಬಹಳಷ್ಟು ಕಡೆ ಪ್ರಾದೇಶಿಕ ಪಕ್ಷಗಳು ಪ್ರಬಲವಾಗಿವೆ. ಅವು ಪ್ರಬಲವಾಗಿರುವ ರಾಜ್ಯಗಳು ಸಮೃದ್ಧವಾಗಿವೆ. ಅದಕ್ಕೋಸ್ಕರವೇ ಕರ್ನಾಟಕದಲ್ಲಿಯೂ ರಾಷ್ಟ್ರೀಯ ಪಕ್ಷಗಳನ್ನು ಅವಲಂಬಿಸದೆ ಪ್ರಾದೇಶಿಕ ಪಕ್ಷ ಬೆಂಬಲಿಸಿ ಎಂಬುದು ನಮ್ಮ ಮನವಿ.

 ಜೆಡಿಎಸ್‌ಗಂತೂ 113 ಸೀಟು ಬರಲಾರದು ಎನ್ನುವ ಮಾತಿರುವಾಗ, ಯಾವುದಾದರೊಂದು ರಾಷ್ಟ್ರೀಯ ಪಕ್ಷದೊಡನೆ ಸೇರಿಯೇ ಅಧಿಕಾರ ಪಡೆದು ಕುಮಾರಸ್ವಾಮಿಯವರು ಅವಕಾಶವಾದಿ ರಾಜಕಾರಣ ಮಾಡುತ್ತಾರೆ ಎಂಬ ಆರೋಪ ಇದೆಯಲ್ಲವೆ?

ಕೆ. ಮಹದೇವ್: ಅವಕಾಶವಾದಿ ರಾಜಕಾರಣವನ್ನು ಕುಮಾರಸ್ವಾಮಿಯವರು ಮಾಡುತ್ತಿಲ್ಲ. ಕಾಂಗ್ರೆಸ್ ೫ ವರ್ಷ ಆಡಳಿತ ಕೊಟ್ಟಿತು. ಅಭಿವೃದ್ಧಿಯಾಗಿದೆ ಎಂಬ ಭಾವನೆ ಜನರ ಮನಸ್ಸಿನಲ್ಲಿ ಇದ್ದಿದ್ದರೆ ೭೦-೮೦ ಸೀಟುಗಳಿಗೆ ಅದರ ಬಲ ಇಳಿಯುತ್ತಿರಲಿಲ್ಲ. ಈಚಿನ ವರ್ಷಗಳಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಬೇರೆ ಪಕ್ಷಗಳ ಸಹಕಾರದಿಂದಲೇ ಅಧಿಕಾರ ಹಿಡಿಯುತ್ತಿವೆ. ಕಾಲ ಬದಲಾಗಿದೆ. ಒಂದೇ ಪಕ್ಷಕ್ಕೆ ಹೆಚ್ಚಿನ ಮತ ಕೊಡುವ ಕಾಲ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಕಾಲಕ್ಕೇ ಹೊರಟುಹೋಯಿತು.

 ಸಿದ್ದರಾಮಯ್ಯನವರು ಮೈಸೂರಿನಲ್ಲಿ ಎಲ್ಲೇ ನಿಂತರೂ ಗೆಲ್ಲುವುದಿಲ್ಲ ಎಂದು ಜೆಡಿಎಸ್ ಹೇಳುತ್ತಿದೆ. ನಿಮ್ಮ ಜಿಲ್ಲೆಯ ನಾಯಕರ ಬಗ್ಗೆ ಏನೆನ್ನುತ್ತೀರಿ?

ಕೆ. ಮಹದೇವ್: ಸಿದ್ದರಾಮಯ್ಯನವರು ತಮ್ಮ ಕ್ಷೇತ್ರದ ಜನರ ಜೊತೆ ನಿರಂತರ ಸಂಪರ್ಕ ಇಟ್ಟು ಕೊಳ್ಳುವಲ್ಲಿ, ಬೆಳೆಸಿ ಕೊಳ್ಳುವಲ್ಲಿ ಎಲ್ಲೋ ಸ್ವಲ್ಪಎಡವಿದ್ದಾರೆ. ಎಲ್ಲಿ ನಿಂತರೆ ಗೆಲ್ಲಲು ಸಾಧ್ಯ ಎಂಬ ಡೋಲಾಯಮಾನ ಪರಿಸ್ಥಿತಿಯಲ್ಲಿದ್ದಾರೆ. ಹೀಗಾದಾಗ ಯಾವ ಕ್ಷೇತ್ರ ಆರಿಸಿಕೊಳ್ಳಬೇಕು ಎಂಬ ವಿಚಾರದಲ್ಲಿ ಸ್ಥಿರವಾದ ನಿರ್ಧಾರ ಸಾಧ್ಯವಾಗುವುದಿಲ್ಲ.

 ಮತ್ತೆ ಆಯ್ಕೆಯಾದರೆ ನಿಮ್ಮ ಕ್ಷೇತ್ರಕ್ಕೆ ಏನು ಮಾಡಬೇಕು ಎಂದುಕೊಂಡಿದ್ದೀರಿ?

ಕೆ. ಮಹದೇವ್: 2018ರಲ್ಲಿ ಮೊದಲ ಬಾರಿಗೆ ಆಯ್ಕೆಯಾದೆ. ಒಂದು ವರ್ಷ ಅತಿವೃಷ್ಟಿ, ಇನ್ನೆರಡು ವರ್ಷ ಕೊರೋನ ಇತ್ತು. ರಾಜ್ಯ ಸರಕಾರದಲ್ಲಿಯೂ ಹಣವಿರಲಿಲ್ಲ. ಆ ಮೂರು ವರ್ಷ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿತ್ತು. ಬಳಿಕ ನನ್ನ ಶಕ್ತಿಮೀರಿ ನನ್ನ ಕ್ಷೇತ್ರದ ಎಲ್ಲ ಗ್ರಾಮಗಳಿಗೂ ಮೂಲಭೂತ ಸೌಕರ್ಯ ಕಲ್ಪಿಸಿದ್ದೇನೆ. ರಸ್ತೆ, ಚರಂಡಿ, ಶಾಲಾ ಕೊಠಡಿ, ಆಸ್ಪತ್ರೆ ಎಲ್ಲವನ್ನೂ ಮಾಡಿದ್ದೇನೆ. ಕುಡಿಯುವ ನೀರಿನ ಯೋಜನೆಗೆ ಕೆಲಸ ಆರಂಭಿಸುತ್ತಿದ್ದೇವೆ.

 ಜಿ.ಟಿ. ದೇವೇಗೌಡರ ಮೇಲೆ, ಕುಮಾರಸ್ವಾಮಿಯವರ ಮೇಲೆ ನಿಮಗೂ ಸ್ವಲ್ಪಮುನಿಸಿತ್ತು. ಎಲ್ಲ ಬಗೆಹರಿದಿದೆಯಾ?

ಕೆ. ಮಹದೇವ್: ಜಿ.ಟಿ. ದೇವೇಗೌಡರಿಗೂ ನನಗೂ ಮುನಿಸು ಯಾವತ್ತೂ ಇರಲಿಲ್ಲ. ನಾನು ತಪ್ಪು ಮಾಡಲಿ, ಕುಮಾರಸ್ವಾಮಿಯವರು ಮಾಡಲಿ, ತಪ್ಪಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಂಡು ಹೆಜ್ಜೆ ಇಟ್ಟರೆ ಮುನಿಸು ಬರುವುದಿಲ್ಲ. ಎಲ್ಲ ಸರಿಯಿದೆ.

 ಈ ಬಾರಿ ಗೆಲ್ಲುವ ವಿಶ್ವಾಸವಿದೆಯೇ?

ಕೆ. ಮಹದೇವ್: ಖಂಡಿತ ಇದೆ. ನನ್ನ ಕೆಲಸ ಕೈಹಿಡಿಯುತ್ತದೆ. ಬೆಂಗಳೂರಿಗೆ ನಾನು ಹೆಚ್ಚು ಬರುವುದೇ ಇಲ್ಲ. ಕ್ಷೇತ್ರದಲ್ಲಿನ ಅಭಿವೃದ್ಧಿ ಕೆಲಸಗಳಿಗೇ ಹೆಚ್ಚಿನ ಒತ್ತು ಕೊಡುತ್ತೇನೆ.

 ನೀವು ಮತ್ತು ನಿಮ್ಮ ಪುತ್ರ ಭ್ರಷ್ಟಾಚಾರದಲ್ಲಿ ತೊಡಗಿದ್ದೀರಿ ಎಂಬುದು ನಿಮ್ಮ ಕ್ಷೇತ್ರದ ಕಾಂಗ್ರೆಸ್ ನಾಯಕ ವೆಂಕಟೇಶ್ ಆರೋಪ. ಇದಕ್ಕೆ ಏನು ಹೇಳುತ್ತೀರಿ?

ಕೆ. ಮಹದೇವ್: ಬೇರೆಯವರ ಮೇಲೆ ಆರೋಪ ಮಾಡುವವರು ಅವರ ಪಕ್ಷದ ಅಧಿಕಾರಾವಧಿಯಲ್ಲಿ ಏನೆಲ್ಲ ಮಾಡಿದ್ದರು ಎಂದು ನೋಡಿಕೊಳ್ಳಬೇಕು. ಒಂದೇ ವಿಚಾರ ಹೇಳುತ್ತೇನೆ. ಅವರು ಎರಡು ವರ್ಷ ಬಿಡಿಎ ಅಧ್ಯಕ್ಷರಾಗಿದ್ದರು. ಅಲ್ಲಿನ ಸರಕಾರದ ಸ್ವತ್ತಾಗಿರುವ ಎಲ್ಲ ಸಾಮಗ್ರಿಗಳನ್ನೂ ಕೊಂಡುಹೋದ ಒಬ್ಬ ನಾಯಕ. ಅದರ ಬಗ್ಗೆ ಸ್ವಲ್ಪ ಯೋಚಿಸಿದರೆ ಭ್ರಷ್ಟಾಚಾರ ಯಾರು ಮಾಡಿದರು ಎಂಬುದು ಗೊತ್ತಾಗುತ್ತದೆ. ನಾನೆಂದೂ ಯಾವುದೇ ಸರಕಾರಿ ನೌಕರರ ಹತ್ತಿರ ಯಾವ ಇಲಾಖೆಯಲ್ಲಿಯೂ ಒಂದು ನಯಾಪೈಸೆಯನ್ನೂ ಮುಟ್ಟಿಲ್ಲ. ಅವರಾದರೆ ಹಫ್ತಾ ವಸೂಲು ಮಾಡುತ್ತಿದ್ದರು. ನಾನು ಅಂಥದಕ್ಕೆ ಹೋಗಿಲ್ಲ. ನನಗೆ ಆ ವಿಚಾರದಲ್ಲಿ ಆತ್ಮತೃಪ್ತಿ ಇದೆ.

 ಈ ಥರದ ಪ್ರಾಮಾಣಿಕತೆಯೊಂದಿಗೆ ಇಂದಿನ ದುಬಾರಿ ಚುನಾವಣೆ ಎದುರಿಸಲು ಸಾಧ್ಯ ಎನಿಸುತ್ತದೆಯೇ?

ಕೆ. ಮಹದೇವ್: ಜನರ ಕೆಲಸ ಮಾಡಿದ್ದೇವೆ. ಇನ್ನೂ ಕೆಲಸ ಮಾಡುತ್ತೇವೆ ಎಂಬ ನಂಬಿಕೆ ಇದ್ದರೆ ಇನ್ನೊಂದು ಬಾರಿ ಅವಕಾಶ ಕೊಡಿ ಎಂದು ಕೇಳುತ್ತೇವೆ. ನಾವು ಮಾಡಿರುವ ಕೆಲಸಕ್ಕೆ ಕೂಲಿ ಕೊಡಿ ಎಂದು ಕೇಳುತ್ತೇವೆ ಅಷ್ಟೆ. ಕೂಲಿ ಕೊಟ್ಟರೆ ಸಂತೋಷ. ಕೊಡದಿದ್ದರೆ ಮನಯಲ್ಲಿ ನೀರೊ ಅಂಬಲಿಯೊ ಕುಡಿದು ನೆಮ್ಮದಿಯಾಗಿರುತ್ತೇನೆ.

 ಈ ಬಾರಿ ನಿಮ್ಮ ಉದ್ದೇಶವೇನು? ನೀವು ಗೆಲ್ಲುವುದೋ ಅಥವಾ ಜೆಡಿಎಸ್ ಅನ್ನು ಅಧಿಕಾರಕ್ಕೆ ತರುವುದೋ?

ಕೆ. ಮಹದೇವ್: ಜೆಡಿಎಸ್‌ನ ಪಂಚರತ್ನ ಕಾರ್ಯಕ್ರಮದಲ್ಲಿ ಏನೇನೆಲ್ಲ ಅಡಗಿದೆ, ಅದು ಗ್ರಾಮೀಣ ಪ್ರದೇಶಕ್ಕೆ ಹೇಗೆಲ್ಲ ಅನುಕೂಲ ತರಲಿದೆ ಎಂಬುದನ್ನು ಯೋಚಿಸಿ ಮತ ನೀಡಿದರೆ ೧೨೩ ಸೀಟು ಬರುವುದು ದೊಡ್ಡ ವಿಚಾರವಲ್ಲ. ಖಂಡಿತ ಸ್ವತಂತ್ರವಾಗಿ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತದೆ. ಎರಡು ವರ್ಷ ಕೊರೋನ ಸಮಯದಲ್ಲಿ ನಾನು ಮನೆಯಲ್ಲಿ ಕೂತಿರಲಿಲ್ಲ. ಪ್ರತೀ ಪಂಚಾಯತ್ ವ್ಯಾಪ್ತಿಗೆ ಅಧಿಕಾರಿಗಳನ್ನೂ ಜೊತೆಗೂಡಿಸಿಕೊಂಡು ಹೋಗಿ, ಜನರನ್ನು ಕರೆಸಿ ಅವರಿಗೆ ಧೈರ್ಯ ತುಂಬಿ, ನಿಮ್ಮ ರಕ್ಷಣೆಗೆ ಏನು ಬೇಕೋ ಮಾಡುತ್ತೇವೆ ಎಂದು ಭರವಸೆ ಕೊಟ್ಟು, ಆಹಾರ ಕಿಟ್ ನೀಡುವುದರಲ್ಲಿ ತೊಡಗಿದ್ದೆ. ೨೪೩ ಶಾಲಾ ಕೊಠಡಿ ನಿರ್ಮಾಣ ಮಾಡಿಸಿದ್ದೇನೆ. ೫ ಸಾವಿರ ಮನೆಗಳನ್ನು ಒದಗಿಸಿದ್ದೇನೆ. ಪ್ರವಾಹ ಸಂದರ್ಭದಲ್ಲಿ ಒಂದು ಸಾವಿರ ಜನರಿಗೆ ಮನೆ ನಿರ್ಮಾಣಕ್ಕೆ ಸರಕಾರದಿಂದ ಧನಸಹಾಯ ಒದಗಿಸಿಕೊಟ್ಟಿದ್ದೇನೆ. ಹಿಂದೆಂದೂ ಆಗದ ಅಭಿವೃದ್ಧಿ ಕೆಲಸಕ್ಕೆ ಒತ್ತುಕೊಟ್ಟಿದ್ದೇವೆ. ನನ್ನ ಕ್ಷೇತ್ರದಲ್ಲಿ ಬೋರ್‌ವೆಲ್ ನೀರಿನಿಂದ ಜನರ ಆರೋಗ್ಯದ ಮೇಲಾಗುತ್ತಿರುವ ದುಷ್ಪರಿಣಾಮ ತಪ್ಪಿಸುವುದಕ್ಕೆಂದೇ ಕಾವೇರಿ ಕುಡಿಯುವ ನೀರು ಒದಗಿಸುವ ಕೆಲಸಕ್ಕೆ ೨೪೦ ಕೋಟಿ ರೂ. ಯೋಜನೆ ಜಾರಿಗೆ ತಂದಿದ್ದೇನೆ. ನನ್ನ ತಾಲೂಕಿನ ೩೦೩ ಹಳ್ಳಿಗಳಿಗೂ ಆ ಯೋಜನೆ ತಲುಪುತ್ತದೆ.

share
ಸಂದರ್ಶನ: ಮಂಜುಳಾ ಮಾಸ್ತಿಕಟ್ಟೆ
ಸಂದರ್ಶನ: ಮಂಜುಳಾ ಮಾಸ್ತಿಕಟ್ಟೆ
Next Story
X