Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. 11,157 ಕೋಟಿ ರೂ.ಗಾತ್ರದ BBMP ಬಜೆಟ್...

11,157 ಕೋಟಿ ರೂ.ಗಾತ್ರದ BBMP ಬಜೆಟ್ ಮಂಡನೆ: ಸಾವಿತ್ರಿ ವಸತಿ ಹಾಸ್ಟೆಲ್, ‘ಶೀ’ ಟಾಯ್ಲೆಟ್ ಸೇರಿ ಜನಹಿತಕ್ಕೆ ಒತ್ತು

2 March 2023 6:08 PM IST
share
11,157 ಕೋಟಿ ರೂ.ಗಾತ್ರದ BBMP ಬಜೆಟ್ ಮಂಡನೆ: ಸಾವಿತ್ರಿ ವಸತಿ ಹಾಸ್ಟೆಲ್, ‘ಶೀ’ ಟಾಯ್ಲೆಟ್ ಸೇರಿ ಜನಹಿತಕ್ಕೆ ಒತ್ತು

ಬೆಂಗಳೂರು, ಮಾ.2: ಉದ್ಯಾನನಗರಿ ಬೆಂಗಳೂರು ಅಭಿವೃದ್ಧಿ ದೃಷ್ಟಿಯ ಬಿಬಿಎಂಪಿಯ 2023-24ನೆಸಾಲಿನ ಬರೋಬ್ಬರಿ 11,157 ಕೋಟಿ ರೂ.ಗಾತ್ರದ ಬಜೆಟ್ ಮಂಡನೆಯಾಗಿದ್ದು, ಮಹಿಳೆಯರಿಗೆ ವಿಶೇಷ ಸೌಲಭ್ಯ, ರಸ್ತೆ, ಇಂದಿರಾ ಕ್ಯಾಂಟೀನ್, ತ್ಯಾಜ್ಯ ನಿರ್ವಹಣೆ ಕೆರೆ ಸಂರಕ್ಷಣೆ ಶಿಕ್ಷಣ, ಆರೋಗ್ಯ, ಆಡಳಿತ, ಮೂಲಸೌಕರ್ಯಗಳು ಸೇರಿದಂತೆ ಇನ್ನಿತರೆ ವಿಭಾಗಗಳಿಗೆ ಆದ್ಯತೆ ನೀಡುವ ಮೂಲಕ ಜನಹಿತಕ್ಕೆ ಪಾಲಿಕೆ ಮುಂದಾಗಿದೆ.

ಗುರುವಾರ ನಗರದ ಪುರಭವನ ಸಭಾಂಗಣದಲ್ಲಿ ಬಿಬಿಎಂಪಿ ಆಡಳಿತಗಾರ ರಾಕೇಶ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ಉಪಸ್ಥಿತಿಯಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯಪುರ ಅವರು ಪ್ರಸ್ತುತ ಸಾಲಿನ ಬಜೆಟ್ ಮಂಡನೇ ಮಾಡಿದರು.

ಪ್ರಮುಖವಾಗಿ ಇಂದಿರಾ ಕ್ಯಾಂಟೀನ್ ಉಳಿಸಲು ಬಿಬಿಎಂಪಿ ಕ್ರಮ ಕೈಗೊಂಡಿದ್ದು, ಈ ಬಾರಿಯ ಆಯವ್ಯಯದಲ್ಲಿ 50ಕೋಟಿ ರೂ. ಮೀಸಲಿಡಲಾಗಿದೆ. 1,410 ಕೋಟಿ ರೂ.ವೆಚ್ಚದಲ್ಲಿ 150 ಕಿ.ಮೀ. ರಸ್ತೆಗೆ ವೈಟ್ ಟಾಪಿಂಗ್, ಭೂಸ್ವಾಧೀನ ಪ್ರಕ್ರಿಯೆಗಾಗಿ 100 ಕೋಟಿ ರೂ., ಖಾಲಿ ಜಾಗ ಸಂರಕ್ಷಣೆಗಾಗಿ 40 ಕೋಟಿ, ವಿವಿಧೊದ್ದೇಶ ಇಂಜಿನಿಯರಿಂಗ್ ವಿಭಾಗದ ಕಾಮಗಾರಿಗಳಿಗೆ 25 ಕೋಟಿ ರೂ. ಹೊಸ ಪಾರ್ಕ್‍ಗಳ ಪ್ರಗತಿಗೆ 15 ಕೋಟಿ ರೂ. ಹೊಸ ಚಿತಗಾರ ನಿರ್ಮಾಣಕ್ಕಾಗಿ 30 ಕೋಟಿ ರೂ., ಪ್ರಾಣಿಗಳ ಹೊಸ ಚಿತಗಾರಗಳ ನಿರ್ಮಾಣಕ್ಕಾಗಿ 5 ಕೋಟಿ ರೂ., ಕೆರೆಗಳ ಅಭಿವೃದ್ಧಿಗಾಗಿ 50 ಕೋಟಿ ರೂ.ಗಳನ್ನು ಒದಗಿಸಲಾಗಿದೆ.

ಬಿಬಿಎಂಪಿ ನೌಕರರು, ಸಿಬ್ಬಂದಿಗಳಿಗೆ ವರ್ಷವೂ ‘ನಾಡಪ್ರಭು ಕೆಂಪೇಗೌಡ ಆವಿಷ್ಕಾರ’ ಪ್ರಶಸ್ತಿ ಹಾಗೂ ‘ಬಿಬಿಎಂಪಿ ಪಿಂಚಣಿದಾರರ ಆರೋಗ್ಯ ಕಲ್ಯಾಣ ನಿಧಿ’ ಸ್ಥಾಪಿಸಿ 10 ಕೋಟಿ ರೂ., ವಾರ್ಡ್‍ನ ನಿರ್ವಹಣೆ ಕೆಲಸಗಳಿಗಾಗಿ ಪ್ರತಿ ವಾರ್ಡ್‍ಗೆ 75 ಲಕ್ಷದಂತೆ ಒಟ್ಟಾರೆ 182.25 ಕೋಟಿ ರೂಪಾಯಿ ನೀಡಲಾಗಿದೆ.75 ಜಂಕ್ಷನ್‍ಗಳ ಅಭಿವೃದ್ಧಿಗೆ 150 ಕೋಟಿ ರೂ., ಬೀದಿ ದೀಪಗಳ ನಿರ್ವಹಣೆಗಾಗಿ 38 ಕೋಟಿ, ಕೆರೆಗಳ ನಿರ್ವಹಣೆಗಾಗಿ 35 ಕೋಟಿ ಅನುದಾನ ನೀಡಲಾಗಿದೆ.

ಅದೇ ರೀತಿ, ಪಾಲಿಕೆಯ ಆಸ್ತಿ ಸಂರಕ್ಷಣೆಗೆ ದಾಖಲೆ ಶೇಖರಣೆ, ಚೈನ್-ಲಿಂಕ್ ಬೇಲಿ ಹಾಕುವಿಕೆ ಹಾಗೂ ನಾಮಫಲಕ ಅಳವಡಿಕೆಗೆ 40 ಕೋಟಿ ರೂ. ಮೀಸಲಿಡಲಾಗಿದೆ. ಕಾನೂನುಮತ್ತು ನಿಯಮಾನುಸಾರದ ಪಾರದರ್ಶಕ ಆಡಳಿತಕ್ಕೆ ಅನುಕೂಲವಾಗಲುಎಲ್ಲ್ಲ ವಿಷಯಗಳಲ್ಲಿಯೂ ಕೈಪಿಡಿ ರಚನೆ, ಮಾಹಿತಿ ತಂತ್ರಜ್ಞಾನ ಅಳವಡಿಕೆ ಹಾಗೂ ಇಆಫೀಸ್‍ಗೆ ಒತ್ತು ನೀಡಲಾಗಿದೆ.

ಈ ವರ್ಷದಲ್ಲಿ ಪಾಲಿಕೆಯ ಸಿಬ್ಬಂದಿಗೆ ಹಲವು ತರಬೇತಿ ಆಯೋಜನೆ ಮಾಡಿದ್ದು, 2023-24ನೆ ವರ್ಷದಲ್ಲಿ ಪಾಲಿಕೆಯ ಎಲ್ಲ ಅಧಿಕಾರಿ, ಸಿಬ್ಬಂದಿಗೆ ಕನಿಷ್ಟ 5 ದಿನಗಳ ವಾರ್ಷಿಕ ತರಬೇತಿ ನೀಡುವ ಉದ್ದೇಶ ಹೊಂದಲಾಗಿದೆ. ಹೊಸ ವ್ಯವಸ್ಥೆ, ತಂತ್ರಾಂಶ, ವಿನ್ಯಾಸ, ಸಮಸ್ಯೆ ನಿವಾರಣೆ ಸೂತ್ರಹಾಗೂ ಪಾಲಿಕೆಯ ಅಧಿಕಾರಿ-ಸಿಬ್ಬಂದಿಯಲ್ಲಿ ಗುಣಾತ್ಮಕ ಪರಿವರ್ತನೆಯ ಮನೋಭಾವ ಬೆಳೆಸುವ ಸದುದ್ದೇಶದಿಂದ ಪ್ರತಿ ವರ್ಷವೂ ‘ನಾಡಪ್ರಭು ಕೆಂಪೇಗೌಡ ಆವಿಷ್ಕಾರ’ ಪ್ರಶಸ್ತಿ ನೀಡಲಾಗುವುದು ಎಂದು ಬಿಬಿಎಂಪಿ ಪ್ರಕಟಿಸಿದೆ.

ನಿಧಿ: ಪಾಲಿಕೆಯಲ್ಲಿ ಕೆಲಸ ಮಾಡಿ ನಿವೃತ್ತರಾದ ಪೌರ ಕಾರ್ಮಿಕರು ಹಾಗೂ ಸಿಬ್ಬಂದಿಗೆ ನಿವೃತ್ತಿಯ ನಂತರ ಯಾವುದೇ ಆರೋಗ್ಯ ರಕ್ಷಣೆ ಅಥವಾ ಆರೋಗ್ಯ ವಿಮೆಯ ಸೌಲಭ್ಯವಿಲ್ಲ.ಹೀಗಾಗಿ, ಬಿಬಿಎಂಪಿ ಪಿಂಚಣಿದಾರರ ಆರೋಗ್ಯ ಕಲ್ಯಾಣ ನಿಧಿ’ ಯ ಹೆಸರಿನಲ್ಲಿ ಸೊಸೈಟಿ ಸ್ಥಾಪನೆ ಮಾಡಲಾಗಿದ್ದು, 2023-24ನೆ ಆಯವ್ಯಯದಲ್ಲಿ ಈ ಕಾರ್ಪಸ್ ಫಂಡ್‍ಗೆ ಕೊಡುಗೆಯಾಗಿ 10 ಕೋಟಿ ರೂ ಮೀಸಲಿರಿಸಿದೆ. ಜತೆಗೆ243 ವಾರ್ಡಿಗಳಲ್ಲಿಯೂ ಪಾಲಿಕೆಯ ಕಂದಾಯ ವಿಭಾಗ, ಇಂಜಿನಿಯರಿಂಗ್ ವಿಭಾಗ ಹಾಗೂ ಆರೋಗ್ಯ ವಿಭಾಗದ ಕಾರ್ಯಗಳನ್ನು ವಾರ್ಡ್ ಮಟ್ಟದಲ್ಲಿಯೇ ನಿರ್ವಹಿಸಲು ಸೂಕ್ತ ಸಿಬ್ಬಂದಿಯನ್ನು ನಿಯೋಜಿಸುವುದಾಗಿ ಪ್ರಕಟಿಸಲಾಗಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಘನ ತ್ಯಾಜ್ಯ ನಿರ್ವಹಣೆ ಸಂಸ್ಥೆಗೆ 700 ಕೋಟಿ ರೂ. ಸಹಾಯನುದಾನ ನೀಡಲಾಗಿದೆ. ಬೀದಿ ನಾಯಿಗಳ ನಿರ್ವಹಣೆಗೆ 20 ಕೋಟಿ, ಹೊಸ ವಲಯಗಳ ಉದ್ಯಾನವನಗಳಿಗೆ 35 ಕೋಟಿ, ಹಳೆ ವಲಯಗಳ ಉದ್ಯಾನವನಗಳಿಗೆ 45 ಕೋಟಿ, ಆರೋಗ್ಯ ವ್ಯವಸ್ಥೆಗಾಗಿ 2 ಕೋಟಿ, ಮರಗಳ ಗಣತಿಗಾಗಿ 4 ಕೋಟಿ, ಸಸಿಗಳ ಬೆಳೆಸುವಿಕೆ ಮತ್ತು ನಿರ್ವಹಣೆಗಾಗಿ 7.5 ಕೋಟಿ, ಟ್ರೀಕೋನಾಪಿ ನಿರ್ವಹಣೆಗಾಗಿ 14 ಕೋಟಿ, ಹೈಟೆಕ್ ನರ್ಸರಿಗಳಿಗಾಗಿ 8 ಕೋಟಿ, ಕೊಳಗೇರಿ ಪ್ರದೇಶಗಳ ಅಭಿವೃದ್ಧಿಗೆ 80 ಕೋಟಿ, ಬೃಹತ್ ಮಳೆ ನೀರುಗಾಲುವೆಗಳ ಅಭಿವೃದ್ಧಿಗೆ 45 ಕೋಟಿ, 9 ಮೇಲ್ಸತುವೆಗಳ ಕಾಮಗಾರಿಗಳಿಗೆ 145 ಕೋಟಿ ಅನುದಾನವನ್ನು ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯಪುರ ಘೋಷಣೆ ಮಾಡಿದರು.

-ವಿವೇಚನೆಗೆ ಒಳಪಟ್ಟ ಅನುದಾನ ಒಟ್ಟು 400 ಕೋಟಿ ರೂ.

-ಬೆಂಗಳೂರು ನಗರ ಉಸ್ತುವಾರಿ ಸಚಿವ 250 ಕೋಟಿ 

-ಬಿಬಿಎಂಪಿ ಮೇಯರ್ 100 ಕೋಟಿ

-ಬಿಬಿಎಂಪಿ ಮುಖ್ಯ ಆಯುಕ್ತ 50 ಕೋಟಿ

ಎಷ್ಟು ಹಂಚಿಕೆ?: ಈ ಬಜೆಟ್‍ನಲ್ಲಿ ಸಾರ್ವಜನಿಕ ಕಾಮಗಾರಿಗಳಿಗೆ ಬರೋಬ್ಬರಿ 7103.53 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಘನ ತ್ಯಾಜ್ಯ ನಿರ್ವಹಣೆಗೆ 1643.72 ಕೋಟಿ ರೂ., ಆರೋಗ್ಯ ವೈದ್ಯಕೀಯಕ್ಕೆ 103.32 ಕೋಟಿ ರೂ., ತೋಟಗಾರಿಕೆ 129.85 ಕೋಟಿ ರೂ., ಆಡಳಿತ ವೆಚ್ಚಗಳಿಗೆ 602 ಕೋಟಿ ರೂ., ಕಂದಾಯ 524 ಕೋಟಿ ರೂ. ಸೇರಿದಂತೆ ಒಟ್ಟಾರೆ 11,157 ಕೋಟಿ ರೂ.ಗಳ ಗಾತ್ರದ ಬಜೆಟ್ ಮಂಡಿಸಲಾಗಿದೆ.

-ಒಂಟಿ ಮನೆ ನಿರ್ಮಾಣಕ್ಕಾಗಿ 100 ಕೋಟಿ ರೂ.

-ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಣೆಗಾಗಿ 25 ಕೋಟಿ ರೂ.

-ಹೊಲಿಗೆ ಯಂತ್ರ ವಿತರಣೆಗಾಗಿ 9 ಕೋಟಿ ರೂ.

-ವೃದ್ದಾಶ್ರಮಗಳಿಗಾಗಿ 16 ಕೋಟಿ ರೂ.

-ವಿದ್ಯಾರ್ಥಿ ವೇತನ ನೀಡಲು 5 ಕೋಟಿ ರೂ.

-15ನೆ ಹಣಕಾಸು ಯೋಜನೆಯಡಿ ಕಾಮಗಾರಿಗಳಿಗೆ 461 ಕೋಟಿ

-ಉದ್ಯಾನವನಗಳ ನಿರ್ವಹಣೆಗಾಗಿ 80 ಕೋಟಿ

-ಹೆಚ್ಚುವರಿ ವಿದ್ಯುತ್ ಫಿಟ್ಟಿಂಗ್ ಗಳಿಗಾಗಿ ಒಟ್ಟು 17.25 ಕೋಟಿ

-ದಾಸರಹಳ್ಳಿ ಬಳಿ ರಾಜಕಾಲುವೆ ತಡೆಗೋಡೆ ನಿರ್ಮಾಣಕ್ಕೆ 5 ಕೋಟಿ

-345 ಕೋಟಿ ವೆಚ್ಚದಲ್ಲಿ ಎಲಿವೇಟೆಡ್ ರೋಟರಿ ಮೇಲ್ಸುತುವೆನಿರ್ಮಾಣ

-110 ಹಳ್ಳಿಗಳ ವಿಶೇಷ ಅಭಿವೃದ್ಧಿ ಕಾಮಗಾರಿಗಳಿಗೆ 6 ಕೋಟಿ

-ಅಸಂಘಟಿತ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರ ವಸತಿ ನಿಲಯಗಳಿಗಾಗಿ 24 ಕೋಟಿ

share
Next Story
X