Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕೊಲೆ ಆರೋಪಿ ಮೋನು ಮನೇಸರ್ ಖಾತೆ ಅಮಾನತು:...

ಕೊಲೆ ಆರೋಪಿ ಮೋನು ಮನೇಸರ್ ಖಾತೆ ಅಮಾನತು: 9 ವಿಡಿಯೊಗಳನ್ನು ಕಿತ್ತು ಹಾಕಿದ ಯೂಟ್ಯೂಬ್

2 March 2023 6:29 PM IST
share
ಕೊಲೆ ಆರೋಪಿ ಮೋನು ಮನೇಸರ್ ಖಾತೆ ಅಮಾನತು: 9 ವಿಡಿಯೊಗಳನ್ನು ಕಿತ್ತು ಹಾಕಿದ ಯೂಟ್ಯೂಬ್

ಹೊಸದಿಲ್ಲಿ: ಸ್ವಘೋಷಿತ ಗೋರಕ್ಷಕ ಹಾಗೂ ಕೊಲೆ, ಹಲ್ಲೆ ಆರೋಪಿ ಮೋನು ಮನೇಸರ್ ಖಾತೆಯನ್ನು ತನ್ನ "ಯೂಟ್ಯೂಬ್ ಸಹಭಾಗಿ ಕಾರ್ಯಕ್ರಮ"ದಿಂದ ಅನಿರ್ದಿಷ್ಟಾವಧಿ ಕಾಲ ಅಮಾನತುಗೊಳಿಸಲಾಗಿದೆ ಎಂದು ಯೂಟ್ಯೂಬ್ ದೃಢಪಡಿಸಿದ್ದು, ಇದರರ್ಥ ಆತ ಇನ್ನು ಮುಂದೆ ತಾನು ಪೋಸ್ಟ್ ಮಾಡುವ ವಿಡಿಯೊಗಳಿಂದ ಹಣ ಮಾಡಲು ಸಾಧ್ಯವಿಲ್ಲ ಎಂದು wire.in ವರದಿ ಮಾಡಿದೆ.

ಇದರೊಂದಿಗೆ, "ಸಮುದಾಯ ಪ್ರಮಾಣೀಕರಣವನ್ನು" ಉಲ್ಲಂಘಿಸಲಾಗಿದೆ ಎಂದು ಆತನ ವಾಹಿನಿಯಿಂದ ಒಂಬತ್ತು ವಿಡಿಯೊಗಳನ್ನು ಕಿತ್ತು ಹಾಕಲಾಗಿದ್ದರೆ, ಎರಡು ವಿಡಿಯೊಗಳಿಗೆ ವಯಸ್ಸಿನ ಮಿತಿಯನ್ನು ಹೇರಲಾಗಿದೆ. ಈ ಸಂಗತಿಯನ್ನು ಅಮೆರಿಕಾ ಮೂಲದ ಅಂತರ್ಜಾಲ ಸುದ್ದಿ ತಾಣ Codastoryಗೆ ಇಮೇಲ್ ಮೂಲಕ ಯೂಟ್ಯೂಬ್ ಹಂಚಿಕೊಂಡಿದೆ. 

ಇದಲ್ಲದೆ ಇತ್ತೀಚಿಗೆ  ಗೋವುಗಳ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಆರೋಪದಲ್ಲಿ ಗೋರಕ್ಷಕರಿಂದ ನಡೆದಿದ್ದ ಇಬ್ಬರು ಮುಸ್ಲಿಮರ ಹತ್ಯೆ ಪ್ರಕರಣದಲ್ಲಿ ಹಂತಕರೊಂದಿಗೆ ನಂಟಿದೆ ಎಂದು ಶಂಕಿಸಲಾಗಿರುವ ಮೋನು ಮನೇಸರ್ ನಿರ್ಮಾಪಕರ ನೀತಿಯನ್ನು ಉಲ್ಲಂಘಿಸಿರುವ ಸಂಗತಿಯನ್ನು ಯೂಟ್ಯೂಬ್ ಗಮನಕ್ಕೆ ತೆಗೆದುಕೊಂಡಿದೆ ಎಂದೂ Codastory ಪ್ರಕಟಿಸಿರುವ ಲೇಖನದಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಲಾಗಿದೆ.

ಭಿವಾನಿಯಲ್ಲಿ ಜೋಡಿ ಕೊಲೆಯಾಗುವುದಕ್ಕೂ ಕೆಲವೇ ದಿನಗಳ ಹಿಂದೆ Alt news ಸುದ್ದಿ ಸಂಸ್ಥೆಯ ವರದಿಗಾರ ಶಿಂಜಿನೀ ಮಜುಂದಾರ್, ಮೋನು ಮನೇಸರ್ ಈ ಹಿಂದೆಯೂ ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ಹಿಂಸಾಪ್ರಚೋದಕ ವಿಡಿಯೊಗಳನ್ನು ಪೋಸ್ಟ್ ಮಾಡಿರುವ ಕುರಿತು ತನಿಖಾ ವರದಿ ಪ್ರಕಟಿಸಿದ್ದರು. ಅಲ್ಲದೆ, ಈ ವಿಡಿಯೊಗಳಿಗೆ ಕಾನೂನು ಜಾರಿ ಪ್ರಾಧಿಕಾರಗಳು ಗಂಭೀರ ಗಮನವನ್ನೇ ನೀಡಿರಲಿಲ್ಲ ಎಂಬ ಸಂಗತಿಯನ್ನು ಪ್ರಸ್ತಾಪಿಸಿದ್ದರು.

ಆದರೆ, ಅಪಾಯಕಾರಿ ಸಂಗತಿಯೆಂದರೆ, ಮೋನು ಮನೇಸರ್ ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಹಿಂಬಾಲಕರನ್ನು ಹೊಂದಿದ್ದು, ಯೂಟ್ಯೂಬ್‌ನಲ್ಲಿ ಎರಡು ಲಕ್ಷ ಹಿಂಬಾಲಕರು ಹಾಗೂ ಫೇಸ್‌ಬುಕ್‌ ಪುಟದಲ್ಲಿ 83,000 ಹಿಂಬಾಲಕರನ್ನು ಹೊಂದಿದ್ದಾನೆ. ಈ ಖಾತೆಗಳಲ್ಲಿ ಮೆಟಾ ಕಂಪನಿಯ ಸುರಕ್ಷತಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ನಿರಂತರವಾಗಿ ದೃಶ್ಯಾವಳಿಗಳನ್ನು ಅಪ್ಲೋಡ್ ಮಾಡಲಾಗುತ್ತಿದೆ.

ಭಿವಾನಿ ಜೋಡಿ ಕೊಲೆ ಪ್ರಕರಣವು ಹರಿಯಾಣದಲ್ಲಿನ ಕಾನೂನು ಜಾರಿ ಪ್ರಾಧಿಕಾರಗಳ ವೈಫಲ್ಯ ಮಾತ್ರವಲ್ಲದೆ, ಯೂಟ್ಯೂಬ್ ಹಾಗೂ ಮೆಟಾದಂತಹ ದೈತ್ಯ ತಂತ್ರಜ್ಞಾನ ಕಂಪನಿಗಳು ಹೇಗೆ ಪದೇ ಪದೇ ದ್ವೇಷ ಹಾಗೂ ಕೋಮು ಧ್ರುವೀಕರಣ ದೃಶ್ಯಾವಳಿಗಳನ್ನು ತಡೆಯಲು ವಿಫಲವಾಗಿವೆ ಎಂಬ ಕುರಿತೂ ಬೆಳಕು ಚೆಲ್ಲಿದೆ. 

ಮೋನು ಮನೇಸರ್‌ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದ ವಿಡಿಯೊ ಒಂದರ ವಿರುದ್ಧ ಪ್ರಾಥಮಿಕ ಮಾಹಿತಿ ವರದಿ ದಾಖಲಾಗುತ್ತಿದ್ದಂತೆಯೆ ಆತ, ದೌರ್ಜನ್ಯ ಆರೋಪಿಗಳ ಪರವಾಗಿ ಬೆಂಬಲವನ್ನು ಸಂಘಟಿಸುವಂತೆ ಜನರನ್ನು ಆಗ್ರಹಿಸಿದ್ದ. ಸಾಮಾಜಿಕ ಮಾಧ್ಯಮಗಳ ನಿಷ್ಕ್ರಿಯತೆಯಿಂದ ಪದೇ ಪದೇ ಹಿಂಸಾಪ್ರಚೋದಕ ದೃಶ್ಯಾವಳಿಗಳನ್ನು ಉಚಿತವಾಗಿ ಅಪ್ಲೋಡ್ ಮಾಡುತ್ತಿರುವ ಆತ, ಅದರಿಂದ ನಿಧಿಯನ್ನು ಸಂಗ್ರಹಿಸುತ್ತಿದ್ದಾನೆ ಎಂದು ವರದಿಯಾಗಿದೆ.

share
Next Story
X