ಸಾಲ ಪಾವತಿ ಮಾಡುವಲ್ಲಿ ವಿಫಲ ಆರೋಪ: 29 ಫ್ಲ್ಯಾಟ್ ಜಪ್ತಿ ಮಾಡಿದ ಬ್ಯಾಂಕ್

ಬೆಂಗಳೂರು, ಮಾ.2: ನಿಗದಿತ ಸಮಯಕ್ಕೆ ಸಾಲ ಪಾವತಿ ಮಾಡದ ಹಿನ್ನೆಲೆ ಅಪಾರ್ಟ್‍ಮೆಂಟ್‍ವೊಂದರ 29 ಫ್ಲ್ಯಾಟ್‍ಗಳನ್ನು ಬ್ಯಾಂಕ್ ಸಿಬ್ಬಂದಿ ಜಪ್ತಿ ಮಾಡಿರುವ ಘಟನೆ ವರದಿಯಾಗಿದೆ.
ರಾಜಾಜಿನಗರದ ಶಿವನಹಳ್ಳಿಯಲ್ಲಿರುವ ಶಿವಣ್ಣ ಎಂಬುವರಿಗೆ ಸೇರಿದ ಐಶ್ವರ್ಯ ಅಪಾರ್ಟ್‍ಮೆಂಟ್‍ನ್ನು ಬ್ಯಾಂಕ್ ಒಂದರಲ್ಲಿ ಅಡವಿಟ್ಟು 15 ಕೋಟಿ ರೂ. ಸಾಲ ಪಡೆದಿದ್ದಾರೆ. ಆದರೆ ಸಾಲ ಮರು ಪಾವತಿಸದ ಕಾರಣ ನ್ಯಾಯಾಲಯದ ಆದೇಶದಂತೆ ಬ್ಯಾಂಕ್ ಸಿಬಂದ್ದಿಗಳು ಗುರುವಾರ 29 ಫ್ಲ್ಯಾಟ್‍ಗಳನ್ನು ಜಪ್ತಿ ಮಾಡಿದ್ದಾರೆ.
ಜಪ್ತಿ ಮಾಡಲು ಬ್ಯಾಂಕ್ ಅಧಿಕಾರಿಗಳು ಆಗಮಿಸುತ್ತಿದ್ದಂತೆ ದಿಕ್ಕು ತೋಚದೆ ಬಾಡಿಗೆದಾರರು ಕಂಗಾಲಾದರು, ಮನೆಯ ಸಾಮಾಗ್ರಿಗಳನ್ನು ಬೀದಿಲ್ಲಿಟ್ಟಿರುವ ಬಾಡಿಗೆ ನಿವಾಸಿಗಳು, ನಮ್ಮ ಹಣ ನಮಗೆ ವಾಪಾಸ್ಸು ಕೊಟ್ಟುಬಿಡಿ ಎಂದು ಮಾಲಕರ ಬಳಿ ಮನವಿ ಮಾಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು
Next Story