ಮಾನವನ ತಲೆಬುರುಡೆಯಿಂದ ಮಾಡಿದ ಅತ್ಯಂತ ಅಪರೂಪದ ಬಾಚಣಿಗೆ ಪತ್ತೆ

ಲಂಡನ್, ಮಾ.2: ಬ್ರಿಟನ್ ನ ಪುರಾತತ್ವಶಾಸ್ತ್ರಜ್ಞರು ಮಾನವನ ತಲೆಬುರುಡೆಯಿಂದ ಮಾಡಿದ ಅತ್ಯಂತ ಅಪರೂಪದ ಬಾಚಣಿಗೆಯನ್ನು ಉತ್ಖನನ ಮಾಡಿರುವುದಾಗಿ ವರದಿಯಾಗಿದೆ.
ಈ ಹಿಂದೆ ಹಲವಾರು ನಿಗೂಢ ವಸ್ತುಗಳು ಪತ್ತೆಯಾಗಿದ್ದ ಕ್ಯಾಂಬ್ರಿಡ್ಜ್ ಬಳಿಯ ಬಾರ್ಹಿಲ್ ಬಳಿ ಈ ಬಾಚಣಿಗೆಯನ್ನು ಉತ್ಖನನ ಮಾಡಲಾಗಿದೆ. ಇದೇ ಸ್ಥಳದಲ್ಲಿರುವ ಕಂದಕದಿಂದ ಕಬ್ಬಿಣದ ಯುಗದ ಅವಧಿಯ ಕಪ್ಪೆಗಳ 8000ಕ್ಕೂ ಅಧಿಕ ಮೂಳೆಗಳನ್ನು ಪತ್ತೆಹಚ್ಚಲಾಗಿದೆ.
ಆಯತಾಕಾರದ ಕಬ್ಬಿಣದ ಯುಗದ ಮೂಳೆ ಬಾಚಣಿಗೆಯು ದುಂಡಾದ ಅಂಚುಗಳು ಮತ್ತು ಒರಟಾಗಿ ಕತ್ತರಿಸಿದ ಹಲ್ಲುಗಳನ್ನು ಹೊಂದಿದೆ. ಕಬ್ಬಿಣದ ಯುಗದಲ್ಲಿ ಬ್ರಿಟನ್ನಲ್ಲಿ ವಾಸಿಸುತ್ತಿದ್ದ ಜನರು ಪ್ರಾಣಿಗಳ ಚರ್ಮಗಳನ್ನು ಸ್ವಚ್ಛಗೊಳಿಸಲು ಹಾಗೂ ಇತರ ಕಾರ್ಯಕ್ಕೆ ಅಗತ್ಯದ ಸಾಧನಗಳನ್ನು ತಯಾರಿಸಲು ಮಾನವನ ಕಾಲು ಮತ್ತು ಕೈಗಳ ಮೂಳೆಗಳನ್ನು ಬಳಸುತ್ತಿದ್ದರು ಎಂದು ವಿಜ್ಞಾನಿಗಳ ಅಧ್ಯಯನ ವರದಿ ಹೇಳಿದೆ.
Next Story





