Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಚುನಾವಣಾ ಆಯೋಗಕ್ಕೆ ನೇಮಕಾತಿಗಳ ರೀತಿ...

ಚುನಾವಣಾ ಆಯೋಗಕ್ಕೆ ನೇಮಕಾತಿಗಳ ರೀತಿ ಕುರಿತು ಆಗಲೇ ಕಳವಳ ವ್ಯಕ್ತಪಡಿಸಿದ್ದ ಅಂಬೇಡ್ಕರ್...

2 March 2023 11:31 PM IST
share
ಚುನಾವಣಾ ಆಯೋಗಕ್ಕೆ ನೇಮಕಾತಿಗಳ ರೀತಿ ಕುರಿತು ಆಗಲೇ ಕಳವಳ ವ್ಯಕ್ತಪಡಿಸಿದ್ದ ಅಂಬೇಡ್ಕರ್...

ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರು 1949ರಷ್ಟು ಹಿಂದೆಯೇ ‘ಅಯೋಗ್ಯ ವ್ಯಕ್ತಿ’ಯೋರ್ವ ಮುಖ್ಯ ಚುನಾವಣಾ ಆಯುಕ್ತನಾಗುವ ಬಗ್ಗೆ ಯೋಚಿಸುವುದು ತನಗೆ ತಲೆನೋವುಂಟು ಮಾಡುತ್ತದೆ ಎಂದು ಸಂವಿಧಾನ ಸಭೆಯಲ್ಲಿ ಹೇಳಿದ್ದರು. ಅಂದರೆ ಚುನಾವಣಾ ಆಯೋಗಕ್ಕೆ ನೇಮಕಾತಿಗಳನ್ನು ಹೇಗೆ ಮಾಡುವುದು ಎನ್ನುವುದು ಆಗಲೂ ಸವಾಲಿನ ಪ್ರಶ್ನೆಯಾಗಿತ್ತು.

‘ರಾಷ್ಟ್ರಪತಿಗಳು ತತ್ಸಂಬಂಧ ಸಂಸತ್ತು ರೂಪಿಸಿದ ಯಾವುದೇ ಕಾನೂನಿನ ನಿಬಂಧನೆಗೊಳಪಟ್ಟು ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರನ್ನು ನೇಮಕಗೊಳಿಸುತ್ತಾರೆ’ ಎಂದಷ್ಟೇ ಸಂವಿಧಾನದ ವಿಧಿ 324(2) ಹೇಳುತ್ತದೆ. ಇದು ಮೂಲಭೂತವಾಗಿ ಚುನಾವಣಾ ಆಯುಕ್ತರನ್ನು ನೇಮಕಗೊಳಿಸುವ ಅಧಿಕಾರವನ್ನು ಕೇಂದ್ರ ಸರಕಾರಕ್ಕೆ ನೀಡುತ್ತದೆ.

ಗುರುವಾರ ಸರ್ವೋಚ್ಚ ನ್ಯಾಯಾಲಯವು, ‘‘ಪ್ರಧಾನಿ, ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಾಧೀಶರನ್ನೊಳಗೊಂಡ ಸಮಿತಿಯ ಸಲಹೆಯ ಮೇರೆಗೆ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಮತ್ತು ಇಬ್ಬರು ಚುನಾವಣಾ ಆಯುಕ್ತ (ಇಸಿ)ರನ್ನು ನೇಮಕ ಮಾಡಬೇಕು’’ ಎಂದು ತನ್ನ ತೀರ್ಪಿನಲ್ಲಿ ಹೇಳುವ ಮೂಲಕ ಸಮಸ್ಯೆಗೆ ಉತ್ತರವನ್ನು ನೀಡಿದೆ.

ಈ ವಿಷಯದಲ್ಲಿ ಸಂಸತ್ತು ಕಾನೂನನ್ನು ಅಂಗೀಕರಿಸುವವರೆಗೂ ಸಮಿತಿಯ ತನ್ನ ವ್ಯವಸ್ಥೆಯು ಅಸ್ತಿತ್ವದಲ್ಲಿರುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿದೆ.

ಅಂಬೇಡ್ಕರ್ ಯಾವ ಕಳವಳಗಳನ್ನು ವ್ಯಕ್ತಪಡಿಸಿದ್ದರು?
1949,ಜೂ.16ರಂದು ರಾಷ್ಟ್ರಪತಿಗಳಿಂದ ಮುಖ್ಯ ಚುನಾವಣಾ ಆಯುಕ್ತರ ನೇಮಕದ ಕುರಿತು ಚರ್ಚಿಸುವಾಗ ಡಾ.ಅಂಬೇಡ್ಕರ್ ಅವರು, ‘‘ನನ್ನ ನಿಬಂಧನೆ-ನಾನು ಒಪ್ಪಿಕೊಳ್ಳಲೇಬೇಕು-ಸಿಇಸಿ ಅಥವಾ ಇಸಿ ಹುದ್ದೆಗೆ ಅಯೋಗ್ಯ ವ್ಯಕ್ತಿಯ ನಾಮಕರಣದ ವಿರುದ್ಧ ಏನನ್ನೂ ಒಳಗೊಂಡಿಲ್ಲ. ಇದು ಅತ್ಯಂತ ಮಹತ್ವದ ಪ್ರಶ್ನೆ ಎನ್ನುವುದನ್ನು ನಾನು ಒಪ್ಪಿಕೊಳ್ಳುತ್ತೇನೆ ಮತ್ತು ಅದು ನನಗೆ ಭಾರೀ ತಲೆನೋವನ್ನು ತಂದಿದೆ ಮತ್ತು ಅದು ಈ ಸದನಕ್ಕೂ ಭಾರೀ ತಲೆನೋವನ್ನು ತರಲಿದೆ ಎನ್ನುವುದರಲ್ಲಿ ನನಗೆ ಶಂಕೆಯಿಲ್ಲ’’ ಎಂದು ಆತಂಕವನ್ನು ವ್ಯಕ್ತಪಡಿಸಿದ್ದರು.

ಅಧ್ಯಕ್ಷರು ಮಾಡುವ ನೇಮಕಾತಿಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಸೆನೆಟನ್ನು ಹೊಂದಿರುವ ಅಮೆರಿಕದ ನಿದರ್ಶನವನ್ನು ನೀಡಿದ್ದ ಅಂಬೇಡ್ಕರ್, ಅಮೆರಿಕದ ಸಂವಿಧಾನದಲ್ಲಿಯ ನಿಬಂಧನೆಗಳು ನೇಮಕಗಳನ್ನು ಮಾಡುವಲ್ಲಿ ಅಧ್ಯಕ್ಷರ ಅತಿರೇಕಗಳ ಪರಿಶೀಲನೆ ನಡೆಸುತ್ತವೆ ಮತ್ತು ಈ ಪರಿಶೀಲನೆಗಳು ಆಡಳಿತಾತ್ಮಕ ಸಮಸ್ಯೆಗಳಿಗೆ ಕಾರಣವಾಗುತ್ತವೆ ಎಂದು ಹೇಳಿದ್ದರು.
ಇದನ್ನು ತಪ್ಪಿಸುವ ಉದ್ದೇಶದಿಂದ ಅಂಬೇಡ್ಕರ್ ಅವರು ‘ಸಿಇಸಿ ಮತ್ತು ಇಸಿ ನೇಮಕಗಳನ್ನು ರಾಷ್ಟ್ರಪತಿಗಳು ತತ್ಸಂಬಂಧ ಸಂಸತ್ತಿನ ಯಾವುದೇ ಕಾನೂನಿನ ನಿಬಂಧನೆಗಳಿಗೊಳಪಟ್ಟು ಮಾಡಬೇಕು’ ಎಂದು ಸೇರಿಸಲು ತಿದ್ದುಪಡಿಯನ್ನು ಮಂಡಿಸಿದ್ದರು.

ಆಗಿನಿಂದ ಹೇಗೆ ನಡೆದುಕೊಂಡು ಬಂದಿದೆ?
ಈ ಎಲ್ಲ ವರ್ಷಗಳಲ್ಲಿ, ಚುನಾವಣಾ ಆಯೋಗದ ಹುದ್ದೆಗಳಿಗೆ ನೇಮಕಗೊಂಡವರು ನಿವೃತ್ತ ಹಿರಿಯ ಅಧಿಕಾರಿಗಳಾಗಿದ್ದಾರೆ ಎನ್ನುವುದನ್ನು ಪರಿಗಣಿಸಿದರೆ ಕಾರ್ಯಾಂಗದಿಂದ ಚುನಾವಣಾ ಆಯೋಗದ ಸ್ವಾತಂತ್ರದ ಪ್ರಶ್ನೆಯು ಹಲವಾರು ಸಲ ಉದ್ಭವಿಸಿದೆ.
ಸಿಇಸಿ ಮತ್ತು ಇಸಿಗಳ ನೇಮಕಾತಿಗಳಿಗೆ ಸಂಬಂಧಿಸಿದಂತೆ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಲು ಪ್ರಧಾನಿ ನೇತೃತ್ವದ ಮತ್ತು ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ, ಕಾನೂನು ಸಚಿವರು ಮತ್ತು ರಾಜ್ಯಸಭೆಯ ಉಪಸಭಾಪತಿಗಳನ್ನು ಒಳಗೊಂಡ ಕೊಲಿಜಿಯಂ ಅನ್ನು ರಚಿಸಬೇಕು ಎಂದು ಜನವರಿ 2007ರಲ್ಲಿ ಯುಪಿಎ ಅಧಿಕಾರಾವಧಿಯಲ್ಲಿ ದ್ವಿತೀಯ ಆಡಳಿತಾತ್ಮಕ ಸುಧಾರಣೆಗಳ ಸಮಿತಿಯು ತನ್ನ ವರದಿಯಲ್ಲಿ ಶಿಫಾರಸು ಮಾಡಿತ್ತು.
ಸಿಇಸಿ ಮತ್ತು ಇಸಿಗಳ ನೇಮಕಾತಿಯ ಪ್ರಸಕ್ತ ಕಾರ್ಯವಿಧಾನವನ್ನು ಸಂವಿಧಾನದ ವಿಧಿ 324 (2)ರಲ್ಲಿ ನಿಗದಿಗೊಳಿಸಲಾಗಿದೆ ಮತ್ತು ಪ್ರಧಾನಿಯ ಸಲಹೆಯ ಮೇರೆಗೆ ರಾಷ್ಟ್ರಪತಿಗಳು ಈ ನೇಮಕಗಳನ್ನು ಮಾಡಬೇಕು ಎಂಬ ಷರತ್ತನ್ನು ವಿಧಿಸಲಾಗಿದೆ.

ಸಂವಿಧಾನ ಸಭೆಯಲ್ಲಿ ನೇಮಕಾತಿ ಕಾರ್ಯವಿಧಾನ ಕುರಿತು ಚರ್ಚೆಗಳ ಸಂದರ್ಭದಲ್ಲಿ,ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕಗೊಂಡ ವ್ಯಕ್ತಿಯು ಎಲ್ಲ ಪಕ್ಷಗಳ ವಿಶ್ವಾಸವನ್ನು ಗಳಿಸಿರಬೇಕು, ಆದ್ದರಿಂದ ಅವರ ನೇಮಕವು ಉಭಯ ಸದನಗಳಲ್ಲಿ ಮೂರನೇ ಎರಡರಷ್ಟು ಬಹುಮತದೊಂದಿಗೆ ದೃಢೀಕರಿಸಲ್ಪಡಬೇಕು ಎಂಬ ಸಲಹೆಗಳು ವ್ಯಕ್ತವಾಗಿದ್ದವು. ಹೀಗೆ ಆ ಸಮಯದಲ್ಲಿಯೂ ಸಿಇಸಿ ನೇಮಕಾತಿಯು ಎಲ್ಲ ಪಕ್ಷಪಾತ ಪರಿಗಣನೆಗಳನ್ನು ಮೀರಿರಬೇಕು ಮತ್ತು ವಿಶಾಲ ತಳಹದಿಯದ್ದಾಗಿರಬೇಕು ಎಂಬ ಅಭಿಪ್ರಾಯವಿತ್ತು ಎಂದು ಸುಧಾರಣಾ ಸಮಿತಿಯು ತನ್ನ ವರದಿಯಲ್ಲಿ ಹೇಳಿತ್ತು.

ಈ ವಿಷಯದಲ್ಲಿ ಬಿಜೆಪಿ ಏನು ಹೇಳಿತ್ತು?
2012,ಜೂ.2ರಂದು ಆಗಿನ ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಬರೆದಿದ್ದ ಪತ್ರದಲ್ಲಿ ಆಗಿನ ಬಿಜೆಪಿ ಸಂಸದೀಯ ಪಕ್ಷದ ಅಧ್ಯಕ್ಷ ಎಲ್.ಕೆ. ಅಡ್ವಾಣಿಯವರು ಸುಧಾರಣಾ ಸಮಿತಿಯ ವರದಿಯನ್ನೂ ಉಲ್ಲೇಖಿಸಿದ್ದರು. ಅವರು ಪ್ರಧಾನಿ ಅಧ್ಯಕ್ಷತೆಯಲ್ಲಿ ಭಾರತದ ಮುಖ್ಯ ನ್ಯಾಯಾಧೀಶರು, ಕಾನೂನು ಸಚಿವರು, ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಪ್ರತಿಪಕ್ಷ ನಾಯಕರನ್ನು ಸದಸ್ಯರನ್ನಾಗಿ ಒಳಗೊಂಡಿರುವ ಕೊಲಿಜಿಯಂ ರಚನೆಗೆ ಶಿಫಾರಸು ಮಾಡಿದ್ದರು. ಆಗ ಬಿಜೆಪಿ ಪ್ರತಿಪಕ್ಷವಾಗಿತ್ತು.

ಕೇವಲ ಪ್ರಧಾನಿಯವರ ಸಲಹೆಯ ಮೇರೆಗೆ ರಾಷ್ಟ್ರಪತಿಗಳು ಚುನಾವಣಾ ಆಯೋಗದ ಸದಸ್ಯರನ್ನು ನೇಮಕಗೊಳಿಸುವ ಪ್ರಸಕ್ತ ವ್ಯವಸ್ಥೆಯು ಜನರಲ್ಲಿ ವಿಶ್ವಾಸವನ್ನು ಮೂಡಿಸುವುದಿಲ್ಲ. ಈ ಪ್ರಮುಖ ನಿರ್ಧಾರಗಳನ್ನು ಆಡಳಿತ ಪಕ್ಷದ ವಿಶೇಷ ಅಧಿಕಾರವನ್ನಾಗಿ ಇಟ್ಟುಕೊಳ್ಳುವುದು ಆಯ್ಕೆ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮತ್ತು ಪಕ್ಷಪಾತಕ್ಕೆ ಅವಕಾಶವನ್ನು ನೀಡುತ್ತದೆ ಎಂದು ಬರೆದಿದ್ದ ಅಡ್ವಾಣಿ, ಈ ಕಾರ್ಯವಿಧಾನಕ್ಕೆ ತಿದ್ದುಪಡಿಯನ್ನು ತರಲು ಇದು ಸಕಾಲವಾಗಿದೆ ಎಂದು ಹೇಳಿದ್ದರು.

ಕೃಪೆ : indianexpress.com

share
Next Story
X