ಮಾ.4: ಖ್ಯಾತ ವಾಗ್ಮಿ, ಆರ್ಥಿಕ ತಜ್ಞ ಮುಫ್ತಿ ಮುಹಮ್ಮದ್ ಸಲ್ಮಾನ್ ಮಝಾಹಿರಿರಿಂದ ವಿಚಾರ ಸಂಕಿರಣ
ಬ್ಯಾರಿ ಮೇಳ ಕಾರ್ಯಕ್ರಮ

ಮಂಗಳೂರು: ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಇದರ ವತಿಯಿಂದ ಮಂಗಳೂರು ಪುರಭವನದಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ ಬ್ಯಾರಿ ಮೇಳ ಕಾರ್ಯಕ್ರಮದ ಎರಡನೇ ದಿನವಾದ ಮಾ.4ರಂದು ಅಪರಾಹ್ನ 4:30ಕ್ಕೆ ಖ್ಯಾತ ವಾಗ್ಮಿ ಹಾಗೂ ಆರ್ಥಿಕ ತಜ್ಞ ಮುಫ್ತಿ ಮುಹಮ್ಮದ್ ಸಲ್ಮಾನ್ ಮಝಾಹಿರಿ (ಸಿಇಒ - ಸೆಂಟರ್ ಫಾರ್ ಇಸ್ಲಾಮಿಕ್ ಇಕನಾಮಿಕ್ಸ್ MIFP, INCEIF ಮಲೇಷ್ಯಾ-ಇಂಡಿಯಾ) ಇವರು ಪ್ರವಚನ ನೀಡಲಿದ್ದಾರೆ.
ಉದ್ಯಮಗಳ ಅಭಿವೃದ್ಧಿ ಇಸ್ಲಾಮೀ ಮಾನದಂಡಗಳ ತಳಹದಿಯಲ್ಲಿ ಮತ್ತು ಕೌಟುಂಬಿಕ ಉದ್ದಿಮೆ (ವ್ಯಾಪಾರ) ನಿರ್ವಹಣೆ ಹಾಗೂ ಇಸ್ಲಾಮೀ ದೃಷ್ಟಿಕೋನ ಅಲ್ಲದೆ ಆರ್ಥಿಕತೆಗೆ ಕುಟುಂಬ ವ್ಯವಹಾರದ ಪ್ರಾಮುಖ್ಯತೆ ಮತ್ತು ಪ್ರಾಬಲ್ಯ ಎಂಬಿತ್ಯಾದಿ ಆರ್ಥಿಕ ವಿಷಯಗಳಲ್ಲಿ ಪ್ರವಚನ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ವಿದ್ವಾಂಸರು, ವ್ಯಾಪಾರ ಸಮುದಾಯ ಮತ್ತು ವೃತ್ತಿಪರನ್ನೊಳಗೊಂಡಂತೆ, ವಿದ್ಯಾರ್ಥಿ ಸಮುದಾಯವು ಸೇರಿದಂತೆ ಸಮುದಾಯದ ಎಲ್ಲಾ ಜನರೂ ಮಾತ್ರವಲ್ಲದೆ ವಿಶೇಷವಾಗಿ ಆರ್ಥಿಕ ವಿಷಯಗಳಲ್ಲಿ ಉನ್ನತ ಮಟ್ಟದ ವಿದ್ಯಾಭ್ಯಾಸ ಅಥವಾ ಅವುಗಳಲ್ಲಿನ ಸಂಶೋಧನ ಅಧ್ಯಯನ ಕೈಗೊಂಡಿರುವ ವಿದ್ಯಾರ್ಥಿಗಳು ಕೂಡ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಬ್ಯಾರಿ ಮೇಳದ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.