ಮಣಿಪಾಲ : ಎಂಐಟಿ ವಿದ್ಯಾರ್ಥಿ ನಾಪತ್ತೆ

ಮಣಿಪಾಲ : ಮೊಬೈಲ್‌ನಲ್ಲಿ ಆನ್‌ಲೈನ್ ಆಟ ಆಡುವ ಚಟ ಹೊಂದಿದ್ದ ಮಣಿಪಾಲ ಎಂಐಟಿ ವಿದ್ಯಾರ್ಥಿಯೊಬ್ಬರು ನಾಪತ್ತೆಯಾಗಿರುವ ಘಟನೆ ಮಣಿಪಾಲದ ಈಶ್ವರನಗರ ಎಂಬಲ್ಲಿ ನಡೆದಿದೆ.
ನಾಪತ್ತೆಯಾದವರನ್ನು ಎಂಐಟಿ ಕಾಲೇಜಿನ 3ನೇ ವರ್ಷದ ವಿದ್ಯಾರ್ಥಿ, ಹೈದರಬಾದ್ ಮೂಲದ ಆದಿತ್ಯ ಪಾಂಡೆ (20) ಎಂದು ಗುರುತಿಸಲಾಗಿದೆ. ಇವರಿಗೆ ಮೊಬೈಲ್‌ನಲ್ಲಿ ಆನ್‌ಲೈನ್ ಆಟ ಆಡುವ ಅಭ್ಯಾಸವಿದ್ದು ಇದೇ ವಿಷಯದಲ್ಲಿ ಮಾನಸಿಕ ಕಿನ್ನತೆಗೊಳಗಾಗಿದ್ದರು. ಮಾ.1ರಂದು ರಾತ್ರಿ ರೂಮಿನಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story