ಮಂಗಳೂರು: ಎಚ್.ಐ.ಎಫ್ ಇಂಡಿಯಾ ಮೆಡಿಕಲ್ ಸೆಲ್ ವತಿಯಿಂದ ಆಂಬುಲೆನ್ಸ್ ಸೇವೆಗೆ ಚಾಲನೆ

ಮಂಗಳೂರು: ಎಚ್.ಐ.ಎಫ್ (ಹೈಲ್ಯಾಂಡ್ ಇಸ್ಲಾಮಿಕ್ ಫೋರಮ್) ಇಂಡಿಯಾ ಮೆಡಿಕಲ್ ಸೆಲ್ ವತಿಯಿಂದ ನೂತನ ಆಂಬುಲೆನ್ಸ್‌ನ್ನು ಇಂದೋರೋರಿನ ಉದ್ಯಮಿ ಮೊಹಮ್ಮದ್ ನಯೀಮ್ ಚಾರ, ಏ.ಕೆ. ಸಮೂಹದ ನಿರ್ದೇಶಕರಾದ ನಿಯಾಝ್ ಏ.ಕೆ., ಉದ್ಯಮಿ ಭಾಷಾ ಹಸನಬ್ಬ ಅವರು ಇಹ್ಸಾನ್ ಮಸೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಘಾಟಿಸಿದರು.
ಮತ್ತೋರ್ವ ಮುಖ್ಯ ಅತಿಥಿ ಬಾವ ವಿಷ್ಮಿಲ್ ನ ನಿರ್ದೇಶಕರಾದ ರಿಯಾಝ್ ಬಾವ ಅವರು ಮಾತನಾಡಿ, ಬಹಳ ವ್ಯವಸ್ಥಿತವಾದ ರೂಪದಲ್ಲಿ ಕೆಲಸ ಮಾಡುತ್ತಿರುವ ಎಚ್.ಐ.ಎಫ್ ಕಾರ್ಯ ನಿಜಕ್ಕೂ ಶ್ಲಾಘನೀಯ ಸಂಸ್ಥೆಯಿಂದ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳು ನಡೆಯಲಿ ಎಂದು ಹಾರೈಸಿದರು.
ಕಳೆದ 10 ವರ್ಷದಿಂದ ಸಮಾಜದ ನಾನಾ ವಿಭಾಗದಲ್ಲಿ ಸಮಾಜಮುಖಿ ಕೆಲಸ ಮಾಡುತ್ತಿರುವ ಎಚ್.ಐ.ಎಫ್ ಇಂಡಿಯಾ ಸಂಸ್ಥೆಯು ನೂತನ ಉಚಿತ ಆಂಬುಲೆನ್ಸ್ ಸೇವೆಯನ್ನು ಪ್ರಾರಂಭಿಸಿದೆ. ಸಂಸ್ಥೆಯ ವತಿಯಿಂದ ರೋಗಿಗಳಿಗೆ ವೀಲ್ ಚೇರ್, ವಾಕರ್, ಮೆಡಿಕೇಟೆಡ್ ಕೋಟ್ (ಮಂಚ), ಆಕ್ಸಿಜನ್ ಸಿಲಿಂಡರ್, ಆಕ್ಸಿಜನ್ ಕಾನ್ಸಂಟ್ರೇಟರ್, ಆಕ್ಸಿ ಮೀಟರ್ ಮುಂತಾದ ಮೆಡಿಕಲ್ ಉಪಕರಣಗಳನ್ನು ಉಪಯೋಗಿಸಿ ಹಿಂದಿರುಗಿಸುವಂತಹ ಯೋಜನೆ ಅಡಿಯಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ಇದಲ್ಲದೆ ವರ್ಷಕ್ಕೆ ಎರಡು ಬಾರಿ ರಕ್ತದಾನ ಶಿಬಿರ, ಅನಾಥ, ನಿರ್ಗತಿಕ ಮಕ್ಕಳಿಗೆ ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸುತ್ತಿದೆ.
ಆಂಬುಲೆನ್ಸ್ ಸೇವೆ ಮಂಗಳೂರನ್ನು ಕೇಂದ್ರವಾಗಿಟ್ಟು 50 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಎಚ್.ಐ.ಎಫ್ ಇಂಡಿಯಾದ ರಿಝ್ವಾನ್ ಪಾಂಡೇಶ್ವರ್ ತಿಳಿಸಿದರು.
ಎಚ್.ಐ.ಎಫ್ ಇಂಡಿಯಾ ಅಧ್ಯಕ್ಷ ನಝೀಮ್ ಏ.ಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಇಹ್ಸಾನ್ ಮಸೀದಿಯ ಖತೀಬ್ ಮೌಲಾನ ತ್ವಾಯಿಬ್ ಅವರು ದುಆ ನೆರವೇರಿಸಿದರು. ಇದೇ ಸಂದರ್ಭ ಮರ್ಹೂಮ್ ಎಸ್,ಎಂ ಬಶೀರ್ ಅವರ ಸೇವೆ ಮತ್ತು ಸಮುದಾಯ ಮೇಲಿರುವ ಕಾಳಜಿಯನ್ನು ನೆನಪಿಸಲಾಯಿತು.
ನಝೀಮ್ ಎಸ್ ಎಸ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.