ಚೀನಾ-ಭಾರತ ಬಾಂಧವ್ಯದಲ್ಲಿ ಗಡಿ ಸಮಸ್ಯೆಗೆ ಸೂಕ್ತ ಗಮನ ಅಗತ್ಯ: ಚೀನಾ

ಬೀಜಿಂಗ್, ಮಾ.3: ಭಾರತ ಮತ್ತು ಚೀನಾಗಳು ದ್ವಿಪಕ್ಷೀಯ ಬಾಂಧವ್ಯದಲ್ಲಿ ಗಡಿ ಸಮಸ್ಯೆಗೆ ಸೂಕ್ತ ಗಮನ ನೀಡಬೇಕು ಮತ್ತು ಸಾಧ್ಯವಾದಷ್ಟು ಬೇಗ ತಮ್ಮ ಗಡಿಗಳಲ್ಲಿನ ಪರಿಸ್ಥಿತಿಯನ್ನು ಸಾಮಾನ್ಯ ಸ್ಥಿತಿಗೆ ತರುವಲ್ಲಿ ಜತೆಯಾಗಿ ಕೆಲಸ ಮಾಡಬೇಕು ಎಂದು ಚೀನಾದ ವಿದೇಶಾಂಗ ಸಚಿವ ಕ್ವಿನ್ ಗಾಂಗ್ ಭಾರತಕ್ಕೆ ಸ್ಪಷ್ಟಪಡಿಸಿದ್ದಾರೆ ಎಂದು ಚೀನಾದ ವಿದೇಶಾಂಗ ಇಲಾಖೆಯ ಹೇಳಿಕೆ ತಿಳಿಸಿದೆ.
ಉಭಯ ದೇಶಗಳ ನಾಯಕರ ಮಹತ್ವದ ಒಮ್ಮತದ ನಿರ್ಧಾರವನ್ನು ಎರಡೂ ಕಡೆಯವರು ಕಾರ್ಯಗತಗೊಳಿಸಬೇಕು. ಸಂವಾದ, ಮಾತುಕತೆಯ ಮೂಲಕ ವಿವಾದಗಳನ್ನು ಸರಿಯಾಗಿ ನಿರ್ವಹಿಸಬೇಕು. ದ್ವಿಪಕ್ಷೀಯ ಸಂಬಂಧಗಳ ಸುಧಾರಣೆ ಮತ್ತು ಸ್ಥಿರ ನಿರ್ವಹಣೆಗೆ ಆದ್ಯತೆ ನೀಡಬೇಕು ಎಂದು ಕ್ವಿನ್ಗಾಂಗ್ ಹೇಳಿರುವುದಾಗಿ ವಿದೇಶಾಂಗ ಇಲಾಖೆಯ ಅಧಿಕೃತ ಪತ್ರಿಕಾ ಪ್ರಕಟಣೆ ತಿಳಿಸಿದೆ.
Next Story