ಗ್ಯಾಂಬಿಯಾದ ಮಕ್ಕಳ ಸಾವಿಗೆ ಭಾರತದಲ್ಲಿ ತಯಾರಿಸಿದ ಕೆಮ್ಮು ಸಿರಪ್‌ಗಳ ಸೇವನೆಯೇ ಕಾರಣ: ಸಿಡಿಸಿ ವರದಿ

ಹೊಸದಿಲ್ಲಿ: ಗ್ಯಾಂಬಿಯಾದಲ್ಲಿ ಅನೇಕ ಮಕ್ಕಳ ಸಾವಿಗೂ ಹಾಗೂ ಕಲುಷಿತವಾಗಿದೆ ಎಂದು ಹೇಳಲಾದ ಮೇಡ್ ಇನ್ ಇಂಡಿಯಾ ಕೆಮ್ಮು ಸಿರಪ್‌ಗಳ ಸೇವನೆಗೂ ಬಲವಾದ ಸಂಬಂಧವಿದೆ ಎಂದು ಅಮೆರಿಕ ಹಾಗೂ ಗ್ಯಾಂಬಿಯಾದ ಆರೋಗ್ಯ ಅಧಿಕಾರಿಗಳ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ (ಸಿಡಿಸಿ) ಜಂಟಿ ತನಿಖೆಯ ವರದಿ ಅಭಿಪ್ರಾಯಪಟ್ಟಿದೆ.
ಅಕ್ಟೋಬರ್‌ನಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಭಾರತ ಮೂಲದ ಮೇಡನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನಿಂದ ಗ್ಯಾಂಬಿಯಾಕ್ಕೆ ಸರಬರಾಜು ಮಾಡಲಾಗುತ್ತಿರುವ ನಾಲ್ಕು ಕೆಮ್ಮು ಸಿರಪ್‌ಗಳು ಕಳಪೆ ಗುಣಮಟ್ಟದ್ದಾಗಿವೆ ಹಾಗೂ ಅವು ಗ್ಯಾಂಬಿಯಾದಲ್ಲಿ ಅನೇಕ ಮಕ್ಕಳ ಸಾವಿಗೆ ಸಂಬಂಧಿಸಿವೆ ಎಂದು ತಿಳಿಸಿತ್ತು.
ಶುಕ್ರವಾರ ಬಿಡುಗಡೆಯಾದ CDC ವರದಿಯು, "ಗ್ಯಾಂಬಿಯಾಕ್ಕೆ ಆಮದು ಮಾಡಿಕೊಳ್ಳಲಾದ ಡೈಎಥಿಲೀನ್ ಗ್ಲೈಕಾಲ್ [DEG] ಅಥವಾ ಎಥಿಲೀನ್ ಗ್ಲೈಕಾಲ್ [EG] ನೊಂದಿಗೆ ಕಲುಷಿತಗೊಂಡ ಔಷಧಿಗಳು ಮಕ್ಕಳಲ್ಲಿ ಈ ತೀವ್ರವಾದ ಮೂತ್ರಪಿಂಡದ ಗಾಯದ (AKI) ಕ್ಲಸ್ಟರ್‌ಗೆ ಕಾರಣವಾಯಿತು ಎಂದು ಈ ತನಿಖೆಯು ಬಲವಾಗಿ ಅಭಿಪ್ರಾಯಪಟ್ಟಿದೆ.





