ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ ಕರ್ನಾಟಕ ಪ್ರತಿನಿಧಿಯಾಗಿ ಡಾ.ಶಿವಶರಣ್ ಶೆಟ್ಟಿ ಆಯ್ಕೆ

ಸುರತ್ಕಲ್, ಮಾ.3: ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ(DCI) ಕರ್ನಾಟಕ ಪ್ರತಿನಿಧಿಯಾಗಿ ಡಾ.ಶಿವಶರಣ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಶುಕ್ರವಾರ ನಡೆದ ಮತ ಫಲಿತಾಂಶ ಎಣಿಕೆಯಲ್ಲಿ 5,126ರಲ್ಲಿ 4,535 ಮತಗಳನ್ನು ಪಡೆದು ಭರ್ಜರಿ ವಿಜಯ ಸಾಧಿಸಿದರು. ಡಿಸಿಐನಲ್ಲಿ ಇವರು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.
ಕರ್ನಾಟಕ ಕೌನ್ಸಿಲ್ ಗೆ ನಡೆದ ಚುನಾವಣೆಯಲ್ಲಿ ಡಾ. ಶಿವಶರಣ್ ಶೆಟ್ಟಿ ಹಾಗೂ ಇವರ ತಂಡದ ಡಾ.ರಂಗನಾಥ್, ಡಾ.ರವಿ ಎಂಜಿ, ಡಾ.ಶಶಿಕುಮಾರ್ ಹಾಗೂ ಗೆಲುವು ಸಾಧಿಸಿದ್ದಾರೆ. ಇಂಡಿಯನ್ ಡೆಂಟಲ್ ಅಸೋಸಿಯೇಶನ್ ರಾ. ಉಪಾಧ್ಯಕ್ಷರಾಗಿಯೂ
ಡಾ.ಶಿವಶರಣ್ ಶೆಟ್ಟಿ ಕಾರ್ಯನಿರ್ವಹಿಸುತ್ತಿದ್ದಾರೆ.
Next Story