ಬಾಹುಬಲಿ-2 ಸಿನಿಮಾದ ದಾಖಲೆಯನ್ನು ಮುರಿದ ಶಾರೂಖ್ ನಟನೆಯ ಪಠಾಣ್ ಚಿತ್ರ

ಮುಂಬೈ: ಶಾರೂಖ್ ಖಾನ್ ನಟನೆಯ ಬಹು ನಿರೀಕ್ಷಿತ ಪಠಾಣ್ ಸಿನಿಮಾದ ನಾಗಾಲೋಟಕ್ಕೆ ತಡೆಯಿಲ್ಲದಂತಾಗಿದೆ. ಬಾಕ್ಸ್ ಆಫೀಸ್ ನಲ್ಲಿನ ಪ್ರಮುಖ ದಾಖಲೆಗಳನ್ನು ಮುರಿದ ಪಠಾಣ್ ಇದೀಗ ಮತ್ತೊಂದು ದಾಖಲೆ ನಿರ್ಮಿಸಿದ್ದು, ಎಸ್‌ಎಸ್ ರಾಜಮೌಳಿ ನಿರ್ದೇಶನದ, ಪ್ರಭಾಸ್ ನಟನೆಯ ಬಾಹುಬಲಿ-2 ಹಿಂದಿ ಸಿನಿಮಾದ ದಾಖಲೆಯನ್ನು ಮುರಿದಿದೆ.
ಈ ಕುರಿತು ಅನಾಲಿಸ್ಟ್ ತರಣ್ ಆದರ್ಶ್ ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. ಬಾಹುಬಲಿ-2 ಹಿಂದಿ ಸಿನಿಮಾದ ಗಳಿಕೆಯನ್ನು ಐದನೇ ವಾರದಲ್ಲಿ ಮುರಿದ ಪಠಾಣ್ ಸಿನಿಮಾ ಒಟ್ಟು 510.65 ಕೋಟಿ ಗಳಿಕೆಯನ್ನು ದಾಟಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಬಾಹುಬಲಿ 2 ರ ಹಿಂದಿ ಜೀವಿತಾವಧಿಯ ಸಂಗ್ರಹವು 510.99 ಕೋಟಿ ರೂ. ಆಗಿದೆ. 'ಪಠಾಣ್' ಹಿಂದಿಯಲ್ಲಿ ಎಸ್ಎಸ್ ರಾಜಮೌಳಿ ಅವರ 'ಬಾಹುಬಲಿ' ಕಲೆಕ್ಷನ್ ಅನ್ನು ಹಿಂದಿಕ್ಕಿದ್ದಲ್ಲೆ ನಿರ್ದೇಶಕ ಸಿದ್ಧಾರ್ಥ್ ಆನಂದ್ ಟ್ವಿಟ್ಟರ್ನಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಪಠಾಣ್ ಹಿಂದಿಯಲ್ಲಿ #ಬಾಹುಬಲಿ 2 ರ ಜೀವಮಾನದ ಕಲೆಕ್ಷನ್‌ಗಳನ್ನು ದಾಟಿದೆ. ನನಗೆ ಹೆಮ್ಮೆಯ ಕ್ಷಣ. ಮತ್ತೊಮ್ಮೆ ನಮ್ಮ ಸಿನಿಮಾ ಪಠಾಣ್ ಅನ್ನು ಪ್ರೋತ್ಸಾಹಿಸಿದ ಎಲ್ಲಾ ಪ್ರೇಕ್ಷಕರಿಗೆ ಧನ್ಯವಾದಗಳು" ಎಂದು ಅವರು ಟ್ವೀಟ್ ಮಾಡಿದ್ದಾರೆ.