ಮಹಿಳೆಯರು ವೈದ್ಯಕೀಯ,ಶಿಕ್ಷಣ ಸಹಿತ ಹಲವು ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ: ಅಸ್ಮಾ ಮೊಹಮ್ಮದ್ ಅಸಫ್
ಬ್ಯಾರಿ ಮೇಳದಲ್ಲಿ ಮಹಿಳಾ ಉದ್ಯಮಿಗಳ ಸಮಾವೇಶ

ಮಂಗಳೂರು: ಭಾರತದಲ್ಲಿ ಮಹಿಳಾ ಉದ್ಯಮಿಗಳ ಸಂಖ್ಯೆ ಹೆಚ್ಚುತ್ತಿದೆ, ವ್ಯಾಪಾರದಲ್ಲಿ ಮಹಿಳೆಯರು ಹೊಂದಾಣಿಕೆ ಮಾಡಲು ಸಮರ್ಥರಾಗಿದ್ದಾರೆ ಎಂದು ತೋರಿಸಿದ್ದು, ಮಹಿಳೆಯರಿಗೆ ಉದ್ಯಮ ಕ್ಷೇತ್ರ ಕೇವಲ ಸವಾಲಿನದ್ದಾಗಿದೆ ಎಂದು ಪಂಪ್‌ವೆಲ್‌ನ ತಖ್ವಾ ಪಬ್ಲಿಕ್ ಸ್ಕೂಲ್‌ನ ಆಡಳಿತಾಧಿಕಾರಿ ಅಸ್ಮಾ ಮೊಹಮ್ಮದ್ ಅಸಫ್ ಹೇಳಿದ್ದಾರೆ.
ಇಲ್ಲಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯುತ್ತಿರುವ ಬ್ಯಾರಿ ಮೇಳದ ಎರಡನೇ ದಿನವಾಗಿರುವ ಶನಿವಾರ ಮಹಿಳಾ ಉದ್ಯಮಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ಕರಾವಳಿ ಕರ್ನಾಟಕದ ಬ್ಯಾರಿ ಸಮುದಾಯವು ಅಂತರ್‌ರಾಷ್ಟ್ರೀಯ ವ್ಯಾಪಾರ, ಶಿಕ್ಷಣ, ವೈದ್ಯಕೀಯ ಮತ್ತು ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದೆ ಎಂದರು.
ಡಾ. ಅಂಜುಮ್ ಬಗ್ಗೆ ಜಾಗತಿಕವಾಗಿ ಅತ್ಯಾಧುನಿಕ ರೋಬೋಟಿಕ್ ಶಸ್ತ್ರಚಿಕಿತ್ಸೆಯನ್ನು ನಡೆಸಲು ನಮ್ಮಲ್ಲಿ ಪರಿಣತಿ ಪಡೆದಿರುವ ಪ್ರಪ್ರಥಮ ಮಹಿಳಾ ರೋಬೋಟಿಕ್ ಸರ್ಜನ್ ಆಗಿದ್ದಾರೆ. ಅವರು ನಿಜವಾದ ಚಾಂಪಿಯನ್ ಎಂದು ಬಣ್ಣಿಸಿದರು.
ಬ್ಯಾರಿ ಮೇಳವು ಸಮಾಜದ ಎಲ್ಲಾ ವರ್ಗದವರನ್ನು ಒಟ್ಟಿಗೆ ತರುತ್ತಿದೆ, ಅವರ ನಡುವಿನ ಬಾಂಧವ್ಯವನ್ನು ಬಲಪಡಿಸುತ್ತಿದೆ ಎಂದು ಹೇಳಲು ನನಗೆ ಸಂತೋಷವಾಗಿದೆ ಎಂದರು.
ಉದ್ಯಮಿ ಎಂಬ ಪದವು ಲಿಂಗ ತಟಸ್ಥ ಪದವಾಗಿದ್ದರೂ, ಇದು ಬಹಳ ಹಿಂದಿನಿಂದಲೂ ಪುರುಷರಿಗಾಗಿ ಕಾಯ್ದಿರಿಸಲಾಗಿದೆ. ಆದರೆ ಕಾಲ ಬದಲಾಗಿದೆ. ಮಹಿಳೆಯರಿಗೆ ಉದ್ಯಮದಲ್ಲಿ ಮುಂದುವರಿಯಲು ಪ್ರೋತ್ಸಾಹ ನೀಡುತ್ತಿರುವ ಬಿಸಿಸಿಐಗೆ ತಾನು ಆಭಾರಿಯಾಗಿದ್ದೇನೆ ಎಂದು ಅವರು ಹೇಳಿದರು.
ಬ್ಯಾರಿ ಮೇಳವು ಸಮಾಜದ ಎಲ್ಲಾ ವರ್ಗದವರನ್ನು ಒಟ್ಟಿಗೆ ತರುತ್ತಿದೆ, ಅವರ ನಡುವಿನ ಬಾಂಧವ್ಯವನ್ನು ಬಲಪಡಿಸುತ್ತಿದೆ ಎಂದು ಹೇಳಲು ನನಗೆ ಸಂತೋಷವಾಗುತ್ತದೆ ಎಂದು ನುಡಿದರು.
ಆರೋಗ್ಯದ ಜಾಗೃತಿ ಬಗ್ಗೆ ಮಾತನಾಡಿದ ಸ್ತ್ರೀ ರೋಗ ತಜ್ಞೆ, ಆಂಕೊಲಾಜಿಸ್ಟ್ ಡಾ. ಮರಿಯಮ್ ಅಂಜುಮ್ ಇಫ್ತಿಕರ್ ಅವರು ಮಹಿಳೆಯರನ್ನು ಬಾಧಿಸುವ ಕ್ಯಾನ್ಸರ್ ರೋಗಗಳ ಬಗ್ಗೆ ಮಾಹಿತಿ ನೀಡಿ ತಡೆಗಟ್ಟುವ ವಿಧಾನದ ಬಗ್ಗೆ ವಿವರಿಸಿದರು.
ಜಾಗತಿಕವಾಗಿ ಉದ್ಯಮ ವಿಸ್ತರಣೆ ಬಗ್ಗೆ ಕುನಾಫ ವರ್ಲ್ಡ್‌ನ ಸಹ ಸಂಸ್ಥಾಪಕಿ ರೂಹಿ ಝಮ್ಝೀರ್, ಹೊಸ ಉದ್ಯಮ ಅವಕಾಶಗಳ ಬಗ್ಗೆ ಹಮ್ದ್ ಫುಡ್ಸ್‌ನ ಸ್ಥಾಪಕಿ ಶಾಹಿದಾ, ಕೌಟುಂಬಿಕ ಬದುಕು ಮತ್ತು ಕರ್ತವ್ಯ ನಿರ್ವಹಣೆ ಬಗ್ಗೆ ಅಲಿಘಡ ಮುಸ್ಲಿಂ ವಿವಿಯ ರೂಬಾ ಫಾತಿಮಾ ವಿಚಾರ ಮಂಡಿಸಿದರು.
450ಕ್ಕೂ ಅಧಿಕ ಮಹಿಳೆಯರು ಈ ಸಮಾವೇಶದಲ್ಲಿ ಭಾಗವಹಿಸಿದ್ದರು.
ಝಾಕಿಯಾ ಕಾರ್ಯಕ್ರಮ ನಿರೂಪಿಸಿದರು.