ಮಂಗಳೂರು: ಅಡುಗೆ ಅನಿಲ ದರ ಏರಿಕೆ ಖಂಡಿಸಿ ಪ್ರತಿಭಟನೆ
ಸ್ಟೌವ್-ಕಟ್ಟಿಗೆ ಬಳಸಿ ಚಪಾತಿ ತಯಾರಿಸಿದ ಮಹಿಳೆಯರು

ಮಂಗಳೂರು, ಮಾ.4: ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಅಡುಗೆ ಅನಿಲ ದರವನ್ನು ಏರಿಕೆ ಮಾಡಿರುವ ಕ್ರಮವನ್ನು ಖಂಡಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಹಂಪನಕಟ್ಟೆಯಲ್ಲಿರುವ ವಿಧಾನ ಸೌಧದ ಮುಂದೆ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭ ಪಕ್ಷದ ಕಾರ್ಯಕರ್ತೆಯರು ಸ್ಟೌವ್-ಕಟ್ಟಿಗೆ ಬಳಸಿ ಚಪಾತಿ ತಯಾರಿಸಿ ಬಿಜೆಪಿ ಸರಕಾರಕ್ಕೆ ಧಿಕ್ಕಾರ ಕೂಗಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಚಪಾತಿ ಮತ್ತು ಗೃಹ ಸಚಿವ ಅಮಿತ್ ಶಾಗೆ ಕಟ್ಟಿಗೆಯನ್ನು ಕಳುಹಿಸಿಕೊಡುವ ಕಾಲ ಬಂದಿದೆ ಎಂದು ವ್ಯಂಗ್ಯವಾಡಿದರು.
ರಾಜ್ಯ ಸರಕಾರವು ಶೇ.40 ಭ್ರಷ್ಟಾಚಾರದಲ್ಲಿ ಮುಳುಗಿದೆ. ಮಹಿಳೆಯರ ಸಹಿತ ಜನಸಾಮಾನ್ಯರ ಕಷ್ಟಗಳು ಆಡಳಿತಗಾರರಿಗೆ ಅರ್ಥವಾಗುವುದಿಲ್ಲ. ಕೇಂದ್ರದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 50 ರೂ. ಗ್ಯಾಸ್ ದರ ಏರಿಸಿದಾಗ ಬೀದಿಗಿಳಿದ ಬಿಜೆಪಿ ನಾಯಕರು ಈಗ ಎಲ್ಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಐವನ್ ಡಿಸೋಜ, ಜೆ.ಆರ್.ಲೋಬೊ, ಮೊಯ್ದಿನ್ ಬಾವ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಇನಾಯತ್ ಅಲಿ, ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಮಾಜಿ ಉಪ ಮೇಯರ್ ಮುಹಮ್ಮದ್ ಕುಂಜತ್ತಬೈಲ್, ಸದಾಶಿವ ಉಳ್ಳಾಲ್, ವಿಶ್ವಾಸ್ ಕುಮಾರ್ ದಾಸ್, ಮೋಹನ್ ಕೋಟ್ಯಾನ್, ಸುರೇಂದ್ರ ಕಾಂಬ್ಳಿ, ವಿವೇಕ್ ರಾಜ್ ಪೂಜಾರಿ, ಸವಾದ್ ಸುಳ್ಯ, ವಸಂತ್ ಬೆರ್ನಾಡ್, ಆರ್.ಕೆ.ಪೃಥ್ವಿರಾಜ್, ಕಾರ್ಪೊರೇಟರ್‌ಗಳಾದ ಸಂಶುದ್ದೀನ್ ಕುದ್ರೋಳಿ, ಅಶ್ರಫ್ ಕೆ.ಇ, ಝೀನತ್ ಸಂಶುದ್ದೀನ್ ಬಂದರ್, ಮುಹಮ್ಮದ್ ಮೋನು, ಪದ್ಮನಾಭ ನರಿಂಗಾನ, ಆಶಿತ್ ಪಿರೇರಾ, ಸಬಿತಾ ಮಿಸ್ಕಿತ್, ಸುರೇಖ ಚಂದ್ರಹಾಸ, ಶಾಂತಲಾ ಗಟ್ಟಿ, ಚಂದ್ರಕಲಾ ಜೋಗಿ, ನಮಿತಾ ಡಿ. ರಾವ್, ಚಂದ್ರಕಲಾ ಡಿ. ರಾವ್, ರಮಾನಂದ ಪೂಜಾರಿ, ಸೌಹಾನ್ ಎಸ್.ಕೆ, ಸುಹಾನ್ ಆಳ್ವ, ತನ್ವೀರ್ ಷಾ, ಕವಿತಾ ವಾಸು, ವಿಜಯಲಕ್ಷ್ಮಿ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ವಹಾಬ್ ಕುದ್ರೋಳಿ, ದಿನೇಶ್ ಕುಂಪಲ, ಅಬ್ದುಲ್ ರಹ್ಮಾನ್ ಕೋಡಿಜಾಲ್, ಪ್ರೇಮ್ ಬಲ್ಲಾಳ್‌ಬಾಗ್, ಸಲೀಂ ಪಾಂಡೇಶ್ವರ, ನಝೀರ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.







