ವ್ಯಕ್ತಿ ಕಾಣೆ

ಮಂಗಳೂರು,ಮಾ.4: ನೀರುಮಾರ್ಗ ಗ್ರಾಮದ ಪೆದೆಮಲೆ ನಿವಾಸಿ ಕರುಣಾಕರ (48) ಎಂಬವರು ಫೆ.27ರಿಂದ ಕಾಣೆಯಾಗಿರುವ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
5.4 ಅಡಿ ಎತ್ತರದ, ಎಣ್ಣೆ ಕಪ್ಪುಮೈಬಣ್ಣದ, ಸಪೂರ ಶರೀರದ, ಕನ್ನಡ, ತುಳು, ಹಿಂದಿ ಮಾತನಾಡುವ ಇವರು ಗುಲಾಬಿ ಬಣ್ಣದ ಉದ್ದ ತೋಳಿನ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.
ಇವರು ಪತ್ತೆಯಾದಲ್ಲಿ 0824-2220800/0824-2220535/9480805330ನ್ನು ಸಂಪರ್ಕಿಸಬಹುದು ಎಂದು ಠಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story