Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ‘40 ಪರ್ಸೆಂಟ್ ಸರಕಾರ’ದ ನಿಜವಾದ...

‘40 ಪರ್ಸೆಂಟ್ ಸರಕಾರ’ದ ನಿಜವಾದ ಫಲಾನುಭವಿಗಳು ಬಿಜೆಪಿಯವರೇ: ಕಾಂಗ್ರೆಸ್ ಲೇವಡಿ

4 March 2023 9:17 PM IST
share
‘40 ಪರ್ಸೆಂಟ್ ಸರಕಾರ’ದ ನಿಜವಾದ ಫಲಾನುಭವಿಗಳು ಬಿಜೆಪಿಯವರೇ: ಕಾಂಗ್ರೆಸ್ ಲೇವಡಿ

ಬೆಂಗಳೂರು: ಸರಕಾರದ ಹಣದಲ್ಲಿ ಚುನಾವಣೆ ಪ್ರಚಾರದ ಸಮಾವೇಶ ಆಯೋಜಿಸಿದ ಬಿಜೆಪಿ ನೈತಿಕ ಅಧಃಪತನಕ್ಕೆ ಇಳಿದಿದೆ. ‘40 ಪರ್ಸೆಂಟ್ ಸರಕಾರ’ದಲ್ಲಿ ಭ್ರಷ್ಟಾಚಾರದ ಫಲಾನುಭವಿಗಳಿದ್ದಾರೆಯೇ ಹೊರತು ಯೋಜನೆಗಳ ಫಲಾನುಭವಿಗಳಲ್ಲ. ಬಿಜೆಪಿಯ ಶೇ.40ರಷ್ಟು ಕಮಿಷನ್ ಫಲಾನುಭವಿಗಳಿಂದ ರಾಜ್ಯ ನಲುಗುತ್ತಿದೆ. ಜನರಿಗೆ ಯಾವ ಫಲವೂ ಇಲ್ಲದಿರುವಾಗ ಫಲಾನುಭವಿಗಳಾಗುವುದು ಹೇಗೆ!? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಶನಿವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ’40 ಪರ್ಸೆಂಟ್ ಸರಕಾರ’ದ ನಿಜವಾದ ಫಲಾನುಭವಿಗಳು ಬಿಜೆಪಿಯವರೇ. ಜನತೆ-ಸಂತ್ರಸ್ತರು ಮಾತ್ರ! ಬಿಟ್ ಕಾಯಿನ್ ಹಗರಣದ ಫಲಾನುಭವಿ ನಳಿನ್ ಕುಮಾರ್ ಕಟೀಲ್ ಅವರೇ, ಹೇಳಿ, ತಾವು ಈ ಹಗರಣದಲ್ಲಿ ಎಷ್ಟು ಫಲ ಪಡೆದಿದ್ದೀರಿ? ಶ್ರೀಕಿ ಯಾನೆ ಶ್ರೀಕೃಷ್ಣ ಎಲ್ಲಿ ಹೋದ? ಬಿಟ್ ಕಾಯಿನ್ ತನಿಖೆ ಹಳ್ಳ ಹಿಡಿದಿದ್ದೇಕೆ? ಹಗರಣವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಿದ್ದೇಕೆ?’ ಎಂದು ವಾಗ್ದಾಳಿ ನಡೆಸಿದೆ.

‘40 ಪರ್ಸೆಂಟ್ ಸರಕಾರ’ದ ಮುಖ್ಯ ಫಲಾನುಭವಿ ಬಸವರಾಜ ಬೊಮ್ಮಾಯಿ ಅವರು. ಹಗರಣಗಳಿಗೆ ಶ್ರೀರಕ್ಷೆ ನೀಡುವುದೇ ಇವರ ಕೆಲಸ! -ಬಿಟ್ ಕಾಯಿನ್ ಹಗರಣ, ಪಿಎಸ್ಸೈ ಹಗರಣ, ಶೇ.40ರಷ್ಟು ಕಮಿಷನ್, ನೇಮಕಾತಿ ಅಕ್ರಮಗಳು, ಮಾಡಾಳ್ ಹಗರಣ, ಗಂಗಾ ಕಲ್ಯಾಣ, ನೀರಾವರಿ, ಕಾಕಂಬಿ, ಟೂಲ್‍ಕಿಟ್ ಹಗರಣ ಎಲ್ಲವೂ ಇವರದ್ದೇ ಸಾಧನೆಗಳು!’ ಎಂದು ಕಾಂಗ್ರೆಸ್ ಟೀಕಿಸಿದೆ.

‘ಪಿಎಸ್ಸೈ ಹಗರಣದಲ್ಲಿ ನಂ1 ಫಲಾನುಭವಿ-ಡಾ.ಅಶ್ವತ್ಥ ನಾರಾಯಣ. ಸಂತ್ರಸ್ತರು-56 ಸಾವಿರ ಅಭ್ಯರ್ಥಿಗಳು! ‘40 ಪರ್ಸೆಂಟ್ ಸರಕಾರ’ಕ್ಕೆ ತಾಕತ್ತಿದ್ದರೆ ನೇಮಕಾತಿ ಹಗರಣಗಳ ಸಂತ್ರಸ್ತರ ಸಮಾವೇಶ ಮಾಡಲಿ, ಒಂದೇ ಒಂದು ಕುರ್ಚಿಯೂ ಖಾಲಿ ಇರುವುದಿಲ್ಲ, ಕುರ್ಚಿ ತುಂಬಿಸಲು ಶ್ರಮಪಡಬೇಕಾಗಿಲ್ಲ, 500 ರೂ.ಹಣ ನೀಡಬೇಕಾಗಿಯೂ ಇಲ್ಲ ಸಾಧ್ಯವೇ?’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

‘40 ಪರ್ಸೆಂಟ್ ಸರಕಾರ’ದ ಮತ್ತೊಬ್ಬ ಫಲಾನುಭವಿ ಕೆ.ಎಸ್.ಈಶ್ವರಪ್ಪ ಅವರು. ಸಂತ್ರಸ್ತ-ಗುತ್ತಿಗೆದಾರ ಸಂತೋಷ್ ಪಾಟೀಲ್. ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನೇ ನಡೆಸದೆ ಕ್ಲೀನ್ ಚಿಟ್ ನೀಡುವ ಮೂಲಕ ಭ್ರಷ್ಟಾಚಾರದ ರಕ್ಷಣೆಗೆ ತಾನು ಕಟಿಬದ್ದ ಎಂಬುದನ್ನು ಬಸವರಾಜ ಬೊಮ್ಮಾಯಿ ಅವರು ತೋರಿಸಿಕೊಟ್ಟಿದ್ದಾರೆ’ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

‘ಕೊರೋನಾದಿಂದ ಜನರೆಲ್ಲರೂ ಸಂತ್ರಸ್ತರು. ಆದರೆ ಫಲಾನುಭವಿ ಮಾತ್ರ- ಡಾ.ಸುಧಾಕರ್. ಕೋವಿಡ್ ಪರಿಕರಗಳ ಖರೀದಿ ಹಗರಣದಲ್ಲಿ ಭರ್ಜರಿ ಲೂಟಿ ಮಾಡಿದ ಆರೋಗ್ಯ ಸಚಿವರು ಬಳಕೆಯನ್ನೇ ಮಾಡದ ಕೋವಿಡ್ ಸೆಂಟರ್ ಹೆಸರಲ್ಲಿ ಮಾಡಿದ ಲೂಟಿ ಲೆಕ್ಕಕ್ಕೆ ಸಿಕ್ಕಿಲ್ಲ! ‘40 ಪರ್ಸೆಂಟ್ ಸರಕಾರ’ದಲ್ಲಿ ಅತಿ ಹೆಚ್ಚು ‘ಫಲ’ ಉಂಡಿರುವ ಫಲಾನುಭವಿ ಇವರು!!’ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಸರ್ಕಾರದ ಹಣದಲ್ಲಿ ಚುನಾವಣೆ ಪ್ರಚಾರದ ಸಮಾವೇಶ ಆಯೋಜಿಸಿದ @BJP4Karnataka ನೈತಿಕ ಅಧಃಪತನಕ್ಕೆ ಇಳಿದಿದೆ.#40PercentSarkara ದಲ್ಲಿ ಭ್ರಷ್ಟಾಚಾರದ ಫಲಾನುಭವಿಗಳಿದ್ದಾರೆಯೇ ಹೊರತು ಯೋಜನೆಗಳ ಫಲಾನುಭವಿಗಳಲ್ಲ.

ಬಿಜೆಪಿಯ 40% ಕಮಿಷನ್ ಫಲಾನುಭವಿಗಳಿಂದ ರಾಜ್ಯ ನಲುಗುತ್ತಿದೆ.

ಜನರಿಗೆ ಯಾವ ಫಲವೂ ಇಲ್ಲದಿರುವಾಗ ಫಲಾನುಭವಿಗಳಾಗುವುದು ಹೇಗೆ! pic.twitter.com/iZYeHHP51q

— Karnataka Congress (@INCKarnataka) March 4, 2023

#40PercentSarkara ದ ನಿಜವಾದ ಫಲಾನುಭವಿಗಳು ಬಿಜೆಪಿಯವರೇ.
ಜನತೆ - ಸಂತ್ರಸ್ತರು ಮಾತ್ರ!

ಬಿಟ್ ಕಾಯಿನ್ ಹಗರಣದ ಫಲಾನುಭವಿ @nalinkateel ಅವರೇ, ಹೇಳಿ, ತಾವು ಈ ಹಗರಣದಲ್ಲಿ ಎಷ್ಟು ಫಲ ಪಡೆದಿದ್ದೀರಿ?

ಶ್ರೀಕಿ ಎಲ್ಲಿ ಹೋದ? ಬಿಟ್ ಕಾಯಿನ್ ತನಿಖೆ ಹಳ್ಳ ಹಿಡಿದಿದ್ದೇಕೆ? ಹಗರಣವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಿದ್ದೇಕೆ? pic.twitter.com/T6hL6tYCop

— Karnataka Congress (@INCKarnataka) March 4, 2023
share
Next Story
X