ಬ್ಯಾರಿ ಮೇಳ: ಎಫ್ ಸಿ ಗ್ಲೋಬಲ್ ವೆಂಚರ್ಸ್‌ನ ಎಫ್ ಸಿ ಗ್ಲೋಬಲ್ ಪ್ಲೈ ಲೋಗೊ, ವೆಬ್ ಸೈಟ್ ಅನಾವರಣ

ಮಂಗಳೂರು: ನಗರದ ಪುರಭವನದಲ್ಲಿ ನಡೆಯುತ್ತಿರುವ ಬ್ಯಾರಿ ಮೇಳದಲ್ಲಿ ಯುವ ಉದ್ಯಮಿ ಮೂಸಾ ಫಾಝಿಲ್ ಅವರ ಎಫ್ ಸಿ ಗ್ಲೋಬಲ್ ವೆಂಚರ್ಸ್ ಹೆಸರಿನ ನೂತನ ಉದ್ಯಮ ಸಂಸ್ಥೆ ಹಾಗು ಅದರ ಉತ್ಪನ್ನ ಎಫ್ ಸಿ ಗ್ಲೋಬಲ್ ಪ್ಲೈ ಇದರ ಲೋಗೊ ಹಾಗು ವೆಬ್ ಸೈಟ್ fcglobalply.com ಅನ್ನು ಅನಾವರಣಗೊಳಿಸಲಾಯಿತು.
ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಬಿಸಿಸಿಐ)ಯ ಅಧ್ಯಕ್ಷ ಎಸ್ ಎಂ ರಶೀದ್ ಹಾಜಿ ಅವರು ಎಫ್ ಸಿ ಗ್ಲೋಬಲ್ ಪ್ಲೈ ಲೋಗೊ ಬಿಡುಗಡೆ ಮಾಡಿದರು. ಬ್ಲೂ ಲೈನ್ ಫುಡ್ಸ್ ಪ್ರೈ.ಲಿ. ನ ಆಡಳಿತ ನಿರ್ದೇಶಕ ಹಾಗು ಬಿಸಿಸಿಐ ಕಾರ್ಯಕಾರಿ ಸಮಿತಿ ಸದಸ್ಯ ಶೌಕತ್ ಶೌರಿ ಅವರು ವೆಬ್ ಸೈಟ್ ಅನ್ನು ಅನಾವರಣಗೊಳಿಸಿದರು.
ಈ ಸಂದರ್ಭ ಉದ್ಯಮಿ ಎ.ಎಚ್. ಮಹಮೂದ್, ಹೋಮ್ ಪ್ಲಸ್ ನ ಆಸಿಫ್ ಸೂಫಿಖಾನ್, ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇಮ್ತಿಯಾಝ್, ಹಜ್ಜಾಜ್ ಗ್ರೂಪ್ ನ ಅಬ್ದುಲ್ ರಝಾಕ್ ಗೋಳ್ತಮಜಲು, ನಿಸಾರ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದು, ಹೊಸ ಉದ್ಯಮಕ್ಕೆ ಶುಭ ಕೋರಿದರು.
ವಿದ್ಯಾರ್ಥಿಯಾಗಿರುವಾಗಲೇ ಉದ್ಯಮ ರಂಗಕ್ಕೆ ಇಳಿದ ಮೂಸಾ ಫಾಝಿಲ್, ಫಾಝಿಲ್ಸ್ ಕ್ರಿಯೇಷನ್ಸ್ ಎಂಬ ಕಂಪೆನಿ ಸ್ಥಾಪಿಸಿ ಗ್ರಾಫಿಕ್ ಡಿಸೈನಿಂಗ್, ಬ್ರಾಂಡಿಂಗ್, ಡಿಜಿಟಲ್ ಮಾರ್ಕೆಟಿಂಗ್, ವೆಬ್ ಸೈಟ್ ಡಿಸೈನಿಂಗ್ ಹಾಗು ಡೆವಲಪಿಂಗ್, ಇ ಆರ್ ಪಿ , ಆನ್ಲೈನ್ ಮಾರಾಟ ಇತ್ಯಾದಿ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಎಫ್ ಸಿ ಗ್ಲೋಬಲ್ ವೆಂಚರ್ಸ್ ಸಿಇಒ ಮೂಸಾ ಫಾಝಿಲ್ ಸ್ವಾಗತಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.