ಶ್ರೀ ದೇವಿ ಕಾಲೇಜ್‌ನ 3 ವಿದ್ಯಾರ್ಥಿಗಳಿಗೆ ರ‍್ಯಾಂಕ್
ಬಿ.ಎಸ್ಸಿ ಫುಡ್ ಟೆಕ್ನಾಲಜಿ ವಿಭಾಗದಲ್ಲಿ ಸಫೀನಗೆ 1ನೇ ರ‍್ಯಾಂಕ್

ಬಿ.ಎಸ್ಸಿ ಫುಡ್ ಟೆಕ್ನಾಲಜಿ ವಿಭಾಗದಲ್ಲಿ ಸಫೀನಗೆ 1ನೇ ರ‍್ಯಾಂಕ್
ಮಂಗಳೂರು, 4: ಮಂಗಳೂರು ವಿಶ್ವವಿದ್ಯಾಲಯವು 2022ನೇ ಸಾಲಿನಲ್ಲಿ ನಡೆಸಿದ ಪರೀಕ್ಷೆಯಲ್ಲಿ ಶ್ರೀ ದೇವಿ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್‌ನ ವಿದ್ಯಾರ್ಥಿಗಳು 3 ರ‍್ಯಾಂಕ್ ಪಡೆದು ಮೇಲುಗೈ ಸಾಧಿಸಿದ್ದಾರೆ.
ಬಿ.ಎಸ್ಸಿ ಫುಡ್ ಟೆಕ್ನಾಲಜಿ ವಿಭಾಗದಲ್ಲಿ ಮಂಗಳೂರಿನ ಸಫೀನ 1ನೇ ರ‍್ಯಾಂಕ್, ಕೊಡಗಿನ ಮೇಘನಾ ಜಿ.ಪಿ 2ನೇ ರ‍್ಯಾಂಕ್ ಮತ್ತು ಕಾಸರಗೋಡಿನ ಭಾವನಾ ಕೆ 3ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





