ನಿಟ್ಟೆಯಲ್ಲಿ ಜಪಾನೀಸ್ ಟೆಕ್ನೋ ಕಲ್ಚರಲ್ ಸೆಂಟರ್ ಉದ್ಘಾಟನೆ

ಮಂಗಳೂರು : ದೇಶದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ನಿಟ್ಟೆ ಡೀಮ್ಡ್ ವಿಶ್ವವಿದ್ಯಾನಿಲಯದೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡು ಭಾರತ ಹಾಗೂ ಜಪಾನ್ ದೇಶಗಳ ಸಾಂಸ್ಕೃತಿಕ, ಜಾಗತಿಕ, ಆಹಾರ ಪದ್ದತಿ ಮುಂತಾದ ವಿಷಯಗಳ ಬಗ್ಗೆ ಪರಸ್ಪರ ಮಾಹಿತಿ ಕಲೆಹಾಕುವ ಬೆಳವಣಿಗೆ ಸ್ವಾಗತಾರ್ಹವಾಗಿದೆ ಎಂದು ಬೆಂಗಳೂರಿನಲ್ಲಿ ನೇಮಿಸಲ್ಪಟ್ಟಿರುವ ಜಪಾನ್ ಕೌನ್ಸಿಲ್ ಜನರಲ್ ಸುಟೊಮೊ ನಕನೆ ಅಭಿಪ್ರಾಯಪಟ್ಟರು.
ಅವರು ಮಾ.2ರಂದು ನಿಟ್ಟೆ ಪರಿಗಣಿಸಲ್ಪಟ್ಟ ನಿಟ್ಟೆ ಡೀಮ್ಡ್ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸ್ಥಾಪಿಸಲಾದ ಜಪಾನೀಸ್ ಟೆಕ್ನೋ ಕಲ್ಚರಲ್ ಸೆಂಟರ್ ಉದ್ಘಾಟಿಸಿ ಮಾತನಾಡಿದರು.
ಜಪಾನ್ ದೇಶದಲ್ಲಿ ಅನುಸರಿಸಲಾಗುತ್ತಿರುವ ತಾಂತ್ರಿಕ ಶಿಕ್ಷಣ ಪದ್ದತಿಯನ್ನು ಹಾಗೂ ಅಲ್ಲಿ ದೊರೆಯುವ ಇಂಟರ್ನ್ಶಿಪ್ ಹಾಗೂ ಉದ್ಯೋಗಾವಕಾಶಗಳ ಬಗೆಗೆ ಅವರು ವಿವರಿಸಿದರು.
ಗೌರವ ಅತಿಥಿಯಾಗಿ ಭಾಗವಹಿಸಿದ ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ಪ್ರೊ-ಚಾನ್ಸೆಲರ್ ಡಾ.ಶಾಂತರಾಮ್ ಶೆಟ್ಟಿ ಮಾತನಾಡಿ, ಜಪಾನ್ ದೇಶದ ಸಂಸ್ಥೆಗಳೊಂದಿಗೆ ಉತ್ತಮ ಬಾಂಧವ್ಯ ಬೆಳೆದು ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರಬೇಕಿದೆ ಎಂದರು.
ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ ಮಾತನಾಡಿ, ಜಪಾನ್ ದೇಶದ ವಿವಿಧ ಅಭಿವೃಧ್ಧಿ ಕಾರ್ಯದ ಬಗ್ಗೆ ನಾವು ತಿಳಿಯುವುದರೊಂದಿಗೆ ಅವರ ಶಿಸ್ತಿನ ಜೀವನವನ್ನೂ ನಮ್ಮ ಜೀವನದಲ್ಲಿ ಅಳವಡಿಕೊಳ್ಳಬೇಕು ಎಂದರು.
ಈ ಸಂದರ್ಭ ಜಪಾನ್ ಕೌನ್ಸಿಲ್ ಜನರಲ್ ಸುಟೊಮೊ ನಕನೆಯ ಸಲಹೆಗಾರ ಕುಟಿನ್ಹ ಡಾಲ್ವಿನ್, ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ ಹೆಗ್ಡೆ, ಪ್ರೊ-ವೈಸ್ ಚಾನ್ಸಲರ್, ಡಾ.ಎಂ.ಎಸ್ ಮೂಡಿತ್ತಾಯ, ಕುಲಸಚಿವ ಡಾ.ಹರ್ಷ ಹಾಲಹಳ್ಳಿ ಉಪಸ್ಥಿತರಿದ್ದರು.
ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಫ್ಳೂಣ್ಕರ್ ಸ್ವಾಗತಿಸಿದರು. ವಿದ್ಯಾರ್ಥಿನಿ ಶೈವಿ ನಿರೂಪಿಸಿದರು. ಪ್ರೊ.ಹರಿಕೃಷ್ಣ ಭಟ್ ವಂದಿಸಿದರು. ಸಭಾ ಕಾರ್ಯಕ್ರಮದ ಅನಂತರ ತುಳುನಾಡಿನ ಸಾಂಸ್ಕೃತಿಕ ಶ್ರೀಮಂತಿಕೆ ಯನ್ನು ಪ್ರತಿಬಿಂಬಿಸುವ ತುಳುನಾಡ ವೈಭವ ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿಟ್ಟೆ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದರು.