ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಅರಿವು ನೆರವು ಸಂಕಲ್ಪ ಕಾರ್ಯಕ್ರಮ

ಮಂಗಳೂರು, ಮಾ.4: ಮುಡಿಪು ಜನಶಿಕ್ಷಣ ಟ್ರಸ್ಟ್ ವತಿಯಿಂದ ಚಿತ್ತಾರ ಬಳಗ ಹಾಗೂ ಸ್ವಾತಿ ಸಂಗೀತ ಸಂಗಮ ಸಹಯೋಗದಲ್ಲಿ ವಿಶ್ವ ಮಹಿಳಾ ದಿನ ಪ್ರಯುಕ್ತ ಶನಿವಾರ ಜನಶಿಕ್ಷಣ ಟ್ರಸ್ಟ್ ನಲ್ಲಿ ನಡೆದ ಅರಿವು ನೆರವು-ಸಂವಾದ ಸಂಕಲ್ಪ ಕಾರ್ಯಕ್ರಮ ನಡೆಯಿತು.
ಅಣಬೆ ಕೃಷಿಯಿಂದ ಸೋಲುವ ಭಯವಿಲ್ಲ, ಅಣಬೆ ಸೇವನೆ ಆರೋಗ್ಯಕ್ಕೆ ಉತ್ತಮ. ಎಂದು ಅಣಬೆ ಕೃಷಿಯಲ್ಲಿ ಬದುಕು ಕಂಡುಕೊಂಡ ಟಿ.ಎಚ್.ಅಬ್ದುಲ್ ರಝಾಕ್ ತಿಳಿಸಿದ್ದಾರೆ.
ಜನಶಿಕ್ಷಣ ಟ್ರಸ್ಟ್ ನಲ್ಲಿ ಅಣಬೆ ತರಬೇತಿ ನೀಡುವ ಜೊತೆ ಅಣಬೆ ಬೆಳೆಸಿ ಖರ್ಚು ವೆಚ್ಚ ಭರಿಸುವ ಬಗ್ಗೆ ಸಂಕಲ್ಪ ಕೈಗೊಳ್ಳಲಾಯಿತು. ಲಯನ್ಸ್ ಕ್ಲಬ್ ಪ್ರಾಂತೀಯ ಸಲಹೆಗಾರ ಉದ್ಯಮಿ ರಾಧಾಕೃಷ್ಣ ರೈ ಉಮಿಯ, ಉದ್ಯಮಿ ರಮೇಶ್ ಶೇಣವ, ಹೈನೋದ್ಯಮಿಗಳಾದ ಮೈಮೂನ ರಾಜ್ ಕಮಲ್, ರಂಝೀನಾ, ಮರ್ಝೀನಾ, ಅಝ್ವೀನಾ, ಸಾಹಿತಿಗಳಾದ ಶಿವಪ್ರಸಾದ್ ಆಳ್ವ ನಡಿಗುತ್ತು, ಚಂದ್ರಶೇಖರ ಪಾತೂರು, ಚಂದ್ರಹಾಸ ಕಣಂತೂರು, ಶಿಕ್ಷಣ ಪ್ರೇಮಿ ಇಬ್ರಾಹಿಂ, ಸ್ವಚ್ಚತಾ ಸೇನಾನಿ ಇಸ್ಮಾಯಿಲ್ ಬಾಳೆಪುಣಿ, ಪರಿಸರ ಪ್ರೇಮಿ ಅಬೂಬಕ್ಕರ್ ಜಲ್ಲಿ, ಅಣಬೆ ಕೃಷಿಕ ಅಬ್ದುಲ್ ರಝಾಕ್, ಬಾಳೆಪುಣಿ ಗ್ರಾಮ ಪಂಚಾಯಿತಿ ಸದಸ್ಯೆ ಸಮೀಮಾ, ಚಿತ್ತಾರ ಬಳಗದ ಸತೀಶ್ ಇರಾ, ಪ್ರಶಾಂತ್, ಹರೇಕಳ ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ಸತ್ತಾರ್ ಬಾವಲಿಗುರಿ ಮೊದಲಾದವರು ಉಪಸ್ಥಿತರಿದ್ದರು.
ನರೇಗಾದ ಮಾಜಿ ಒಂಬುಡ್ಸ್ ಮೆನ್ ಶೀನ ಶೆಟ್ಟಿ ಹಾಗೂ ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ ಕಾರ್ಯಕ್ರಮ ನಿರ್ವಹಿಸಿದರು.





