ಬೆಂಕಿಯಿಂದ ನಾಶವಾಗಿದ್ದ ಬ್ರಿಟನ್ ನ ಅತೀದೊಡ್ಡ ಮಸೀದಿ ಪುನರಾರಂಭ

ಲಂಡನ್, ಮಾ.4: 2015ರಲ್ಲಿ ಭೀಕರ ಅಗ್ನಿದುರಂತದಲ್ಲಿ ಹಾನಿಗೊಂಡಿದ್ದ ಬ್ರಿಟನ್ ನ ಅತೀ ದೊಡ್ಡ ಮಸೀದಿಯನ್ನು ಮರುನಿರ್ಮಾಣ ಮಾಡಲಾಗಿದ್ದು ನವೀಕೃತ ಮಸೀದಿಯನ್ನು ಶನಿವಾರದಿಂದ ಪೂರ್ಣಪ್ರಮಾಣದಲ್ಲಿ ಮತ್ತೆ ತೆರೆಯಲಾಗಿದೆ ಎಂದು ವರದಿಯಾಗಿದೆ.
ದಕ್ಷಿಣ ಲಂಡನ್ ನ ಮಾರ್ಡನ್ ಜಿಲ್ಲೆಯಲ್ಲಿರುವ ಅಹ್ಮದೀಯ ಸಮುದಾಯದ ಬೈತುಲ್ ಫುತುಹ್ ಮಸೀದಿಯಲ್ಲಿನ ಬೃಹತ್ ಪ್ರಾರ್ಥನಾ ಸಭಾಂಗಣದಲ್ಲಿ ಏಕಕಾಲಕ್ಕೆ 13,000 ಮಂದಿ ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ. ಬೆಂಕಿ ಅನಾಹುತದಲ್ಲಿ ಪ್ರಾರ್ಥನಾ ಸಭಾಂಗಣಕ್ಕೆ ಹಾನಿಯಾಗಿರದಿದ್ದರೂ ಆಡಳಿತಾತ್ಮಕ ಕಚೇರಿ ಇರುವ ಕಟ್ಟಡ ಹಾನಿಗೊಂಡಿತ್ತು. ಪೋರ್ಚುಗಲ್ ನಿಂದ ಆಮದು ಮಾಡಿಕೊಂಡ ತಿಳಿಬಣ್ಣದ ಕಲ್ಲುಗಳನ್ನು ಬಳಸಿ 24 ದಶಲಕ್ಷ ಡಾಲರ್ ವೆಚ್ಚದಲ್ಲಿ ಮಸೀದಿಯನ್ನು ಮರುನಿರ್ಮಾಣ ಮಾಡಿದ್ದು ಇದರ ವೆಚ್ಚವನ್ನು ಸಮುದಾಯದ ಸದಸ್ಯರೇ ಭರಿಸಿದ್ದಾರೆ ಎಂದು ಮಸೀದಿಯ ಆಡಳಿತ ಸಮಿತಿ ಹೇಳಿದೆ.
Next Story