ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ನಿಯಂತ್ರಣ ವ್ಯವಸ್ಥೆಗೆ ಅಮೆರಿಕದಿಂದ ಅಡ್ಡಿ: ಉ.ಕೊರಿಯಾ

ಪ್ಯೋಂಗ್ಯಾಂಗ್, ಮಾ.4: ಅಂತರಾಷ್ಟ್ರೀಯ ಶಸ್ತ್ರಾಸ್ತ್ರ ನಿಯಂತ್ರಣ ವ್ಯವಸ್ಥೆ ಕುಸಿದುಬೀಳಲು ಅಮೆರಿಕ ಕಾರಣವಾಗಿದೆ ಎಂದು ಆರೋಪಿಸಿರುವ ಉತ್ತರ ಕೊರಿಯಾ, ತನ್ನ ಪರಮಾಣು ಆಯುಧಗಳು ಈ ವಲಯದಲ್ಲಿ ಶಕ್ತಿಯ ಸಮತೋಲನವನ್ನು ಖಚಿತಪಡಿಸುವ ಪ್ರಕ್ರಿಯೆಯ ಭಾಗವಾಗಿದೆ ಎಂದಿದೆ.
ಅಮೆರಿಕ ಮತ್ತದರ ಮಿತ್ರದೇಶಗಳ ಮಿಲಿಟರಿ ವಿಸ್ತರಣೆ ಕಾರ್ಯಕ್ರಮದಿಂದಾಗಿ ಕೊರಿಯಾ ಪರ್ಯಾಯದ್ವೀಪವು ವಿಶ್ವದ ಅತೀದೊಡ್ಡ ಟೈಮ್ಬಾಂಬ್ ಮತ್ತು ಯುದ್ಧಾಭ್ಯಾಸ ಕ್ಷೇತ್ರವಾಗಿ ಬದಲಾಗಿದೆ. ಜಪಾನ್ ಮತ್ತು ದಕ್ಷಿಣ ಕೊರಿಯಾದ ಇತ್ತೀಚಿನ ಕ್ರಮಗಳು, ಅಮೆರಿಕದ ಸಮರಾಭ್ಯಾಸವು ಅಪಾಯದ ಕೆಂಪುಗೆರೆಯನ್ನು ಮೀರುವ ಸೂಚನೆಯಾಗಿದ್ದು ಇದನ್ನು ಎಷ್ಟುಮಾತ್ರಕ್ಕೂ ಸಹಿಸಲಾಗದು ಎಂದು ಉತ್ತರಕೊರಿಯಾದ ವಿದೇಶಾಂಗ ಇಲಾಖೆಯ ಹೇಳಿಕೆ ತಿಳಿಸಿದೆ.
ಮಾರ್ಚ್ 13ರಿಂದ 23ರವರೆಗೆ ದಕ್ಷಿಣ ಕೊರಿಯಾದ ಜತೆ ಕೊರಿಯಾ ಪರ್ಯಾಯ ದ್ವೀಪದ ಬಳಿ ಜಂಟಿ ಸಮರಾಭ್ಯಾಸ ನಡೆಸುವುದಾಗಿ ಅಮೆರಿಕ ಘೋಷಿಸಿದೆ.
Next Story