ಬಾಂಗ್ಲಾದೇಶ: ಆಮ್ಲಜನಕ ಸ್ಥಾವರದಲ್ಲಿ ಸ್ಫೋಟ; 6 ಮಂದಿ ಮೃತ್ಯು

ಢಾಕ, ಮಾ.4: ಆಗ್ನೇಯ ಬಾಂಗ್ಲಾದೇಶದಲ್ಲಿ ಆಮ್ಲಜನಕ ಸ್ಥಾವರದಲ್ಲಿ ಶನಿವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಟ 6 ಮಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಆಗ್ನೇಯ ಬಾಂಗ್ಲಾದ ಬಂದರುನಗರ ಚಿತ್ತಗಾಂಗ್ನ ಸಿತಾಕುಂಡ ಸ್ಥಾವರದಲ್ಲಿ ಸ್ಫೋಟ ಸಂಭವಿಸಿದ್ದು 6 ಮಂದಿಯ ಮೃತದೇಹ ಪತ್ತೆಯಾಗಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಸ್ಫೋಟಕ್ಕೆ ಕಾರಣವೇನು ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ ಎಂದು ಸ್ಥಳೀಯ ಅಧಿಕಾರಿ ಶಹಾದತ್ ಹುಸೇನ್ ರನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
Next Story