13ರ ಬಾಲಕನ ಜತೆ ಲೈಂಗಿಕ ಸಂಪರ್ಕದಿಂದ ಮಗು ಪಡೆದ 31ರ ಮಹಿಳೆ ಜೈಲುಶಿಕ್ಷೆಯಿಂದ ಪಾರು!

ವಾಷಿಂಗ್ಟನ್: ಅಮೆರಿಕದ ಕೊಲರೊಡೊ ರಾಜ್ಯದ 31 ವರ್ಷ ವಯಸ್ಸಿನ ಮಹಿಳೆಯೊಬ್ಬರು 13 ವರ್ಷದ ಬಾಲಕನ ಜತೆಗಿನ ಲೈಂಗಿಕ ಸಂಪರ್ಕದಿಂದ ಮಗು ಪಡೆದಿರುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ ಮಹಿಳೆ ಇದೀಗ ಜೈಲು ಶಿಕ್ಷೆಯಿಂದ ಬಚಾವ್ ಆಗಿದ್ದಾರೆ.
ಆ್ಯಂಡ್ರಿಯಾ ಸೆರ್ರಾನೊ ಎಂಬ ಮಹಿಳೆಯ ವಿರುದ್ಧ ಫೌಂಟೇನ್ ಪೊಲೀಸರು, ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಹೊರಿಸಿದ್ದರು. 2022ರಲ್ಲಿ ಬಂಧನಕ್ಕೆ ಒಳಗಾದ ಮಹಿಳೆ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿದ್ದರು. ಆದರೆ ಅವರ ಪರ ವಕೀಲರು ಸರ್ಕಾರಿ ವಕೀಲರ ಜತೆ ಒಡಂಬಡಿಕೆ ಮಾಡಿಕೊಂಡು, ಆಕೆಯನ್ನು ಲೈಂಗಿಕ ಆರೋಪಿ ಎಂದು ನೋಂದಾಯಿಸಿ ಬಂಧಮುಕ್ತಗೊಳಿಸಿದ್ದರು. ಈ ಒಪ್ಪಂದವನ್ನು ಆ್ಯಂಡ್ರಿಯಾ ಒಪ್ಪಿಕೊಂಡಿದ್ದಾರೆ.
ಬಾಲಕನ ಜತೆಗಿನ ಲೈಂಗಿಕ ಸಂಪರ್ಕದಿಂದ ಗರ್ಭಿಣಿಯಾಗಿದ್ದ ಮಹಿಳೆ, ಬಂಧನದ ಬಳಿಕ ಮಗುವಿಗೆ ಜನ್ಮ ನೀಡಿದ್ದಳು. ಅದರೆ ಸಂತ್ರಸ್ತ ಬಾಲಕನ ತಾಯಿ ಈ ಒಡಂಬಡಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಒಡಂಬಡಿಕೆಯ ಹೊರತಾಗಿಯೂ ಮಹಿಲೆಗೆ 10 ವರ್ಷಗಳಿಂದ ಜೀವಾವಧಿ ವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ ಎಂದು ವರದಿಗಗಳು ಹೇಳಿವೆ. ಇದು ಮೇ ತಿಂಗಳಲ್ಲಿ ನಡೆಯುವ ವಿಚಾರಣೆಯ ವೇಳೆ ನಿರ್ಧಾರವಾಗಲಿದೆ.