ಲೋಕ ಮಾನ್ಯ ತಿಲಕ್ ಗರೀಬ್ ರಥ ರೈಲು ಬೈಂದೂರಿನಲ್ಲಿ ನಿಲುಗಡೆ

ಬೈಂದೂರು, ಮಾ.5: ಬೈಂದೂರು ಮೂಕಾಂಬಿಕಾ ರೋಡ್ ರೈಲ್ವೇ ನಿಲ್ದಾಣದಲ್ಲಿ ಮುಂಬೈ ಲೋಕಮಾನ್ಯ ತಿಲಕ್ ಕೊಚುವೆಲಿ ಮುಂಬೈ ಲೋಕ ಮಾನ್ಯ ತಿಲಕ್ ಗರೀಬ್ ರಥ( ರೈಲು ಸಂಖ್ಯೆ 12201/12202) ರೈಲು ವಾರದ ನಾಲ್ಕು ದಿನ ನಿಲುಗಡೆಗೆ ಇಲಾಖೆ ಆದೇಶಿಸಿದೆ ಎಂದು ಬೈಂದೂರು ಮೂಕಾಂಬಿಕಾ ರೈಲ್ವೆ ಯಾತ್ರಿ ಸಂಘ ತಿಳಿಸಿದೆ.
ಗರೀಬ್ ರಥ ರೈಲು ಬೈಂದೂರಿನಲ್ಲಿ ನಿಲುಗಡೆಗೆ ಶ್ರಮವಹಿಸಿದ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಸಹಕರಿಸಿದ ಕೇಂದ್ರ ರೈಲ್ವೆ ಮಂತ್ರಿ ಅಶ್ವಿನಿ ವೈಶ್ಣವ್ ಅವರಿಗೆ ಮೂಕಾಂಬಿಕಾ ರೈಲ್ವೆ ಯಾತ್ರಿ ಸಂಘ ಬೈಂದೂರು ವತಿಯಿಂದ ಅಭಿನಂದನೆ ಸಲ್ಲಿಸಿದೆ. ಮುಂಬೈ ಹಾಗೂ ಕೇರಳ ಪ್ರವಾಸ ಮಾಡುವ ಬೈಂದೂರು ತಾಲೂಕಿನ ಪ್ರಯಾಣಿಕರು ಹವಾನಿಯಂತ್ರಿತ ಗರೀಬ್ ರಥ ರೈಲಿನ ಪ್ರಯೋಜನ ಪಡೆದುಕೊಳ್ಳಲಿದ್ದಾರೆ.
ಬೈಂದೂರು ಮೂಕಾಂಬಿಕಾ ರೋಡ್ ನಿಲ್ದಾಣದಲ್ಲಿ ದಾದರ್ ಸೆಂಟ್ರಲ್ ತಿರುನವಲ್ಲಿ ಎಕ್ಸೆಪ್ರೆಸ್, ಎರುನಾಕುಲಂ ಹಜರತ್ ನಿಜಾಮುದ್ದೀನ್ ಎಕ್ಸಪ್ರೆಸ್ ರೈಲು, ಬೆಂಗಳೂರು-ಮೈಸೂರು-ಮಂಗಳೂರು-ಮುರುಡೇಶ್ವರ ರೈಲು ಹಾಗೂ ಇನ್ನಿತರ ರೈಲು ನಿಲುಗಡೆಗೆ ಈಗಾಗಾಲೇ ಸಂಸದರು ಪ್ರಸ್ತಾವನೆ ಸಲ್ಲಿಸಿದ್ದು ಅತೀ ಶೀಘ್ರದಲ್ಲಿ ರೈಲ್ವೇ ಇಲಾಖೆಯಿಂದ ಆದೇಶವಾಗುವ ನಿರೀಕ್ಷೆಯಿದೆ.
ಮೂಕಾಂಬಿಕಾ ರೋಡ್ ರೈಲ್ವೆ ನಿಲ್ದಾಣದ ಸಂಪರ್ಕ ರಸ್ತೆಗಳನ್ನು ಸಹ ಅಭಿವೃದ್ದಿಯಾಗುತ್ತಿದೆ. ಯಡ್ತರೆ ಗ್ರಾಮದ ಬಂಕೇಶ್ವರ ರಸ್ತೆಯಿಂದ ರೈಲ್ವೆ ನಿಲ್ದಾಣದ ಸಂಪರ್ಕ ರಸ್ತೆ, ಗಂಗನಾಡು ರಸ್ತೆಯಿಂದ ರೈಲ್ವೆ ನಿಲ್ದಾಣ ರಸ್ತೆ, ಮದ್ದೋಡಿ ರಸ್ತೆಯಿಂದ ಹಳೇ ಸ್ಟೇಷನ್ ರಸ್ತೆ ಹಾಗೂ ವಿದ್ಯಾನಗರದಿಂದ ರೈಲ್ವೆ ನಿಲ್ದಾಣ ರಸ್ತೆಯ ಅಂಡರ್ ಪಾಸ್ ಅಭಿವೃದ್ದಿಗೆ ಸುಮಾರು ರೂ 1.75 ಕೋಟಿ ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.