ಗೇಟ್ ಪರೀಕ್ಷೆ: ಮಾ.16ರಂದು ಫಲಿತಾಂಶ ಪ್ರಕಟ

ಬೆಂಗಳೂರು, ಮಾ.5: ಎಂಜಿನಿಯರಿಂಗ್ ಗ್ರಾಜುಯೇಟ್ಅಪ್ಟಿಟ್ಯೂಡ್ ಟೆಸ್ಟ್-2023(ಜಿಎಟಿಇ)ರ ಫಲಿತಾಂಶವು ಮಾರ್ಚ್ 16ರಂದು ಪ್ರಕಟವಾಗಲಿದೆ ಎಂದು ಪರೀಕ್ಷಾ ಸಂಸ್ಥೆ ತಿಳಿಸಿದೆ.
ಫಲಿತಾಂಶವನ್ನು ಅಭ್ಯರ್ಥಿಗಳು https://gate.iitk.ac.in/ ಲಿಂಕ್ ಬಳಸಿ ಪರಿಶೀಲಿಸಬಹುದಾಗಿದ್ದು, ಅನಂತರ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸುವ ಮೂಲಕ ಅರ್ಜಿದಾರರು ತಮ್ಮ ಅಂಕಪಟ್ಟಿಯನ್ನು ಮಾ.26ರಂದು ಆನ್ಲೈನ್ನಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದೆ.
‘ಗೇಟ್' ಎಂಬುದು ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿದ್ದು, ಇದನ್ನು ಕಾನ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಯೋಜಿಸುತ್ತದೆ. ಗೇಟ್-2023 ಪರೀಕ್ಷೆಗಳನ್ನು ಫೆಬ್ರವರಿ 4, 5, 11 ಮತ್ತು 12ರಂದು ನಡೆಸಲಾಗಿತ್ತು.
Next Story