UNHRC ಕಾರ್ಯಾಲಯದ ಬಳಿ ಭಾರತ ವಿರೋಧಿ ಪೋಸ್ಟರ್ಗಳು ಪ್ರತ್ಯಕ್ಷ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಹೊಸದಿಲ್ಲಿ, ಮಾ.4: ಭಾರತದಲ್ಲಿ ಮಹಿಳೆಯರನ್ನು ಗುಲಾಮರಂತೆ ನಡೆಸಿಕೊಳ್ಳಲಾಗುತ್ತಿದೆ ಹಾಗೂ ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ ಎಂಬಿತ್ಯಾದಿ ಘೋಷಣೆಗಳಿರುವ ಬೃಹತ್ ಭಿತ್ತಿಪತ್ರಗಳನ್ನು ಸ್ವಿಟ್ಜರ್ಲ್ಯಾಂಡ್ನ ಜಿನೇವಾದಲ್ಲಿರುವ ವಿಶ್ವಸಂಸ್ಥೆಯ ಮಾನವಹಕ್ಕುಗಳ ಆಯೋಗ (ಯುಎನ್ಎಚ್ಆರ್ಸಿ) ಹಾಗೂ ಇತರ ಪ್ರಮುಖ ಕಚೇರಿಗಳ ಮುಂದೆ ಪ್ರದರ್ಶಿಸಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಈ ವಿಡಿಯೋವನ್ನು ಭಾರತೀಯ ವಿದ್ಯಾರ್ಥಿಯೊಬ್ಬರು ಚಿತ್ರೀಕರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ್ದಾರೆ. ಈ ಪೋಸ್ಟರ್ಗಳ ಪೈಕಿ ಒಂದರಲ್ಲಿ, ‘ಭಾರತೀಯ ಕ್ರೈಸ್ತರು ಸರಕಾರಿ ಪ್ರಾಯೋಜಿತ ಭಯೋತ್ಪಾದನೆಯನ್ನು ಎದುರಿಸುತ್ತಿದ್ದಾರೆ’’ ಎಂದು ಬರೆಯಲಾಗಿದ್ದರೆ, ಇನ್ನೊಂದರಲ್ಲಿ ಮಹಿಳೆಯರನ್ನು ಭಾರತದಲ್ಲಿ ಗುಲಾಮರಂತೆ ನಡೆಸಿಕೊಳ್ಳಲಾಗುತ್ತಿದೆ’’ ಎಂದು ಹೇಳಿದೆ.
ಭಾರತೀಯ ಕ್ರೈಸ್ತರನ್ನು ಕೇಂದ್ರೀಕರಿಸಿದ ಹಲವಾರು ಪೋಸ್ಟರ್ಗಳನ್ನು ಪ್ರದರ್ಶಿಸಲಾಗಿದ್ದು, ಅದರಲ್ಲಿ ಒಂದರಲ್ಲಿ ದೇಶದಲ್ಲಿ ಚರ್ಚುಗಳನ್ನು ಸುಟ್ಟುಹಾಕಲಾಗುತ್ತಿದೆ ಎಂದು ಹೇಳಿದೆ. ಇನ್ನೊಂದು ಪೋಸ್ಚರ್ನಲ್ಲಿ ಭಾರತದಲ್ಲಿ ಬಾಲ್ಯವಿವಾಹ ವ್ಯಾಪಕವಾಗಿದ್ದು, ಇದು ಮಕ್ಕಳ ಹಕ್ಕುಗಳ ಗಂಭೀರ ಉಲ್ಲಂಘನೆಯೆಂದು ಹೇಳಿದೆ.
ಈ ವಾರದ ಆರಂಭದಲ್ಲಿ ಭಾರತವು ವಿಶ್ವಸಂಸ್ಥೆಯ ಭಯೋತ್ಪಾದನಾ ವಿರೋಧಿ ಕಾರ್ಯಾಲಯದಲ್ಲಿ ನಡೆದ ರಾಯಭಾರಿ ಮಟ್ಟದ ತ್ರೈಮಾಸಿಕ ಸಭೆಯಲ್ಲಿ ಆಪ್ರಿಕ ಹಾಗೂ ಏಶ್ಯ ಪ್ರಾಂತಗಳಲ್ಲಿ ಭಯೋತ್ಪಾದನೆಯ ಹಾವಳಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ಕೆಲವೇ ದಿನಗಳ ಬಳಿಕ ಈ ಪೋಸ್ಟರ್ಗಳು ಯುಎನ್ಎಚ್ಆರ್ಸಿ ಕಾರ್ಯಾಲಯದ ಮುಂದೆ ಕಾಣಿಸಿಕೊಂಡಿರುವುದು ಗಮನಾರ್ಹವಾಗಿದೆ.
ಜಿನಿವಾದಲ್ಲಿ ಭಾರತ ವಿರೋಧಿ ಪೋಸ್ಟರ್ ಸ್ವಿಸ್ ರಾಯಭಾರಿಯನ್ನು ಕರೆಸಿ ಪ್ರತಿಭಟನೆ ದಾಖಲಿಸಿದ ಭಾರತ
ಭಾರತ ಸರಕಾರವು ರವಿವಾರ ಸ್ವಿಸ್ ರಾಯಭಾರಿಯನ್ನು ಕರೆಸಿಕೊಂಡು ಜಿನಿವಾದಲ್ಲಿನ ವಿಶ್ವಸಂಸ್ಥೆ ಕಟ್ಟಡದ ಎದುರು ‘ದುರುದ್ದೇಶಪೂರಿತ ಭಾರತ ವಿರೋಧಿ ’ಪೋಸ್ಟರ್‌ಗಳ ಕುರಿತು ಪ್ರತಿಭಟನೆಯನ್ನು ದಾಖಲಿಸಿದೆ.
ಭಾರತದ ಕಳವಳವನ್ನು ಅದಕ್ಕೆ ಅರ್ಹವಾದ ಎಲ್ಲ ಗಂಭೀರತೆಗಳೊಂದಿಗೆ ತನ್ನ ದೇಶದ ಸರಕಾರಕ್ಕೆ ತಿಳಿಸುವುದಾಗಿ ಸ್ವಿಸ್ ರಾಯಭಾರಿ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಹೇಳಿದರು.
ಜಿನಿವಾದಲ್ಲಿನ ಪೋಸ್ಟರ್‌ಗಳು ಎಲ್ಲರಿಗೂ ಒದಗಿಸಲಾಗಿರುವ ಜಾಗದ ಭಾಗವಾಗಿವೆ,ಆದರೆ ಅವುಗಳನ್ನು ಯಾವುದೇ ರೀತಿಯಲ್ಲಿಯೂ ಅನುಮೋದಿಸುವುದಿಲ್ಲ ಮತ್ತು ಅವು ಸ್ವಿಸ್ ಸರಕಾರದ ನಿಲುವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಸ್ವಿಸ್ ರಾಯಭಾರಿ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ತಿಳಿಸಿದರು.
Anti India posters appear outside UNHCR office at Geneva. Appalled to see that the govt of Switzerland openly allows such fake propaganda! You guys can work on your agenda! But stop complaining that India is aligning with #Russia ?#genevasummit2023pic.twitter.com/BUskxjVa7R
— Anand #IndianFromSouth (@Bharatiyan108) March 5, 2023







