WPL: 11ರ ಬಳಗದಲ್ಲಿ 4 ವಿದೇಶಿಯರಿಗೆ ಮಾತ್ರ ಅವಕಾಶವಿದ್ದರೂ ಐವರು ವಿದೇಶಿ ಆಟಗಾರ್ತಿಯರನ್ನು ಕಣಕ್ಕಿಳಿಸಿದ ಡೆಲ್ಲಿ!
ಕಾರಣ ಇಲ್ಲಿದೆ

ಮುಂಬೈ: ಈಗ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಐವರು ವಿದೇಶಿ ಆಟಗಾರ್ತಿಯರೊಂದಿಗೆ ಮೈದಾನಕ್ಕಿಳಿದಿದೆ.
ಪ್ರಸ್ತುತ ನಡೆಯುತ್ತಿರುವ WPL ನಲ್ಲಿ ಒಂದು ತಂಡವು ಗರಿಷ್ಠ ನಾಲ್ಕು ಸಾಗರೋತ್ತರ ಆಟಗಾರ್ತಿಯರನ್ನು ಕಣಕ್ಕಿಳಿಸಬಹುದು, ಐದನೇ ವಿದೇಶಿ ಆಟಗಾರ್ತಿ ಅಸೋಸಿಯೇಟ್ ರಾಷ್ಟ್ರದಿಂದ ಬಂದವರಾಗಿದ್ದರೆ ತಂಡವು ಐದು ವಿದೇಶಿ ಆಟಗಾರ್ತಿಯರನ್ನು ಕಣಕ್ಕಿಳಿಸಬಹುದು.
ಈಗ ಡೆಲ್ಲಿ ಅಸೋಸಿಯೇಟ್ ರಾಷ್ಟ್ರದ ಆಟಗಾರ್ತಿಯನ್ನು ಹೊಂದಿರುವ ಏಕೈಕ ಫ್ರಾಂಚೈಸಿ ಆಗಿದೆ. ಹೀಗಾಗಿ ಅದು RCB ವಿರುದ್ಧ ಐವರು ವಿದೇಶಿಯರನ್ನು ಕಣಕ್ಕಿಳಿಸುವ ಅಪೂರ್ವ ಅವಕಾಶ ಪಡೆದಿದೆ. ಅಮೆರಿಕದ ಆಟಗಾರ್ತಿ ಟಾರಾ ನಾರಿಸ್ ಅವರು ಆರ್ ಸಿಬಿ ವಿರುದ್ಧ ಪಂದ್ಯದಲ್ಲಿ 5ನೇ ವಿದೇಶಿ ಆಟಗಾರ್ತಿಯಾಗಿ ಆಡಲು ಸಾಧ್ಯವಾಯಿತು. ನಾರಿಸ್ 5 ವಿಕೆಟ್ ಗೊಂಚಲು ಪಡೆದು ಮಿಂಚಿದರು.
ಫ್ರಾಂಚೈಸಿಯು ನಾಲ್ಕು ವಿದೇಶಿ ಆಟಗಾರ್ತಿಯರಾದ ಮೆಗ್ ಲ್ಯಾನಿಂಗ್, ಮರಿಝನ್ನೆ ಕಾಪ್, ಆಲಿಸ್ ಕ್ಯಾಪ್ಸೆ ಹಾಗೂ ಜೆಸ್ ಜೊನಾಸ್ಸೆನ್‌ರನ್ನು ಕಣಕ್ಕಿಸಿತು ಹಾಗೂ ನಾರಿಸ್ ಐದನೇ ಆಟಗಾರ್ತಿಯಾಗಿದ್ದರು. ಬೆಂಗಳೂರು ತಂಡದಲ್ಲಿ ಆಡಿರುವ ವಿದೇಶಿ ಆಟಗಾರ್ತಿಯರೆಂದರೆ: ಸೋಫಿ ಡಿವೈನ್, ಹೀದರ್ ನೈಟ್, ಎಲ್ಲಿಸ್ ಪೆರಿ ಹಾಗೂ ಮೇಗನ್ ಶುಟ್.





