ಚಾಕೊಲೇಟ್ ಕವರ್‌ನಿಂದ 'ಮ್ಯಾಟರ್‌ಹಾರ್ನ್ ಶಿಖರ' ತೆಗೆಯಲಿರುವ ಟೊಬ್ಲೆರೋನ್: ಕಾರಣ ಏನು ಗೊತ್ತೇ?

ವಿಶ್ವದ ಖ್ಯಾತ ಚಾಕೊಲೇಟ್ ಉತ್ಪಾದನಾ ಕಂಪನಿಯಾದ ಟೊಬ್ಲೆರೋನ್ ತನ್ನ ಚಾಕಲೇಟ್ ಕವರ್‌ಗಳ ಮೇಲೆ ರಾರಾಜಿಸುವ 'ಮ್ಯಾಟರ್‌ಹಾರ್ನ್ ಶಿಖರ'ದ (Matterhorn peak) ಚಿತ್ರವನ್ನು ತೆಗೆಯಲಿದೆ. ಕೆಲ ಚಾಕೊಲೇಟ್ ಉತ್ಪಾದನೆ ಸ್ವಿಡ್ಝರ್‌ಲೆಂಡ್‌ನಿಂದ ಸ್ಲೋವಾಕಿಯಾಗೆ ಸ್ಥಳಾಂತರವಾಗುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಿದೆ.
ಅಲ್ಪೈನ್ ಶಿಖರವನ್ನು ಬಿಂಬಿಸುವ ಪಿರಮಿಡ್ ಆಕೃತಿಯ ಬಾರ್‌ನ ಲೇಬಲಿಂಗ್ ಕೂಡಾ ಸಮಗ್ರ ಬದಲಾವಣೆಯಾಗಲಿದ್ದು, ಇದರ ಸಂಸ್ಥಾಪಕರ ಸಹಿಯೊಂದಿಗೆ ಮಾರುಕಟ್ಟೆಗೆ ಬರಲಿದೆ ಎಂದು ಕಂಪನಿ ಹೇಳಿದೆ.
4478 ಮೀಟರ್ ಅಂದರೆ 14692 ಅಡಿಯ ಈ ಶಿಖರದ ಚಿತ್ರದ ಬದಲು ಸಾಮಾನ್ಯ 'ಶೃಂಗ' ರ್ಯಾಪರ್‌ನಲ್ಲಿ ಇರಲಿದೆ. 2017ರ ಬಳಿಕ ಸ್ವಿಸ್‌ತನದ ಬಗ್ಗೆ ಕಟ್ಟುನಿಟ್ಟಿನ ನಿಯಮಾವಳಿಯನ್ನು ಅನುಸರಿಸಲಾಗುತ್ತಿದೆ ಎಂದು ಅಮೆರಿಕ ಮೂಲದ ಮಂಡೆಲೆರ್ ಕಂಪನಿ ಪ್ರಕಟಿಸಿದೆ.
ವಿಶೇಷವಾಗಿ ಸ್ವಿಡ್ಝರ್‌ಲೆಂಡ್ ಮಾತ್ರವಲ್ಲದೇ ಇತರೆಡೆಯೂ ತಯಾರಾಗುವ ಹಾಲು ಆಧರಿತ ಉತ್ಪನ್ನಗಳ ಪ್ರಚಾರಕ್ಕೆ ರಾಷ್ಟ್ರೀಯ ಲಾಂಛನವನ್ನು ಬಳಸುವಂತಿಲ್ಲ. ಇತರ ಕಚ್ಚಾ ಆಹಾರ ಪದಾರ್ಥಗಳಿಗೆ ಕನಿಷ್ಠಮಟ್ಟ ಶೇಕಡ 80ರಷ್ಟು ಇರಬೇಕಾಗುತ್ತದೆ.
ವಿಶ್ವಾದ್ಯಂತ ಇರುವ ಬೇಡಿಕೆಯನ್ನು ಪೂರೈಸಲು ಮತ್ತು ಭವಿಷ್ಯಕ್ಕಾಗಿ ಟೊಬ್ಲೆರೋನ್ ಬ್ರ್ಯಾಂಡ್ ಅನ್ನು ಬೆಳೆಸಲು ಸ್ವಲ್ಪಮಟ್ಟಿಗೆ ಉತ್ಪಾದನೆಯನ್ನು ದೇಶದ ಹೊರಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂದು ಮೊಂಡೆಲೆರ್ ಬಿಬಿಸಿಗೆ ನೀಡಿದ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ಇದನ್ನು ಓದಿ: ಭೂ ಹಗರಣ: ಬಿಹಾರ ಮಾಜಿ ಸಿಎಂ ರಾಬ್ರಿ ದೇವಿ ನಿವಾಸದ ಮೇಲೆ CBI ದಾಳಿ