ರಾಷ್ಟ್ರೀಯ ಮಟ್ಟದ ನೃತ್ಯ ಸ್ಪರ್ಧೆ: ವೆಲ್‌ನೋನ್ ಸ್ಟ್ರೇರ್ಸ್ ಪ್ರಥಮ

ಉಡುಪಿ, ಮಾ.6: ವ್ಯೋಮಾ ಡ್ಯಾನ್ಸ್ ಅಕಾಡೆಮಿ ಮಾಲಕ ಮತ್ತು ತರಬೇತುದಾರ ಅವಿನಾಶ್ ಬಂಗೇರಾ ನೇತೃತ್ವದಲ್ಲಿ ಕಿನ್ನಿಮುಲ್ಕಿಯ ಗಣಪತಿ ಮೈದಾನದಲ್ಲಿ ಶನಿವಾರ ನಡೆದ ನೃತ್ಯಂ-2023 ರಾಷ್ಟ್ರೀಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ವೆಲ್‌ನೋನ್ ಸ್ಟ್ರೇರ್ಸ್ ತಂಡ 50,000 ನಗದು ಮತ್ತು ಟ್ರೋಫಿಯೊಂದಿಗೆ ಪ್ರಥಮ ಪ್ರಶಸ್ತಿ ಗೆದ್ದುಕೊಂಡಿತು.
ಮಣಿಪಾಲದ ಬ್ಲಿಟ್ಜ್‌ಕ್ರೇಗ್ 25,000ರೂ. ನಗದು ಮತ್ತು ಟ್ರೋಫಿಯೊಂದಿಗೆ ದ್ವಿತೀಯ ಸ್ಥಾನ ಹಾಗೂ ಉಡುಪಿಯ ಫೈ ಫೈರ್ಸ್ ತಂಡ 15,000ರೂ. ನಗದು ಮತ್ತು ಟ್ರೋಫಿ ಜೊತೆ ತೃತೀಯ ಸ್ಥಾನ ಪಡೆದುಕೊಂಡಿತು.
ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ವಿಧಾನಸಭಾ ಕ್ಷೇತ್ರ ಪ್ರಚಾರ ಸಮಿತಿಯ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಆಚಾರ್ಯ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್‌ನ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಶುಭ ಹಾರೈಸಿದರು.
ಉದ್ಯಮಿ ಯೋಗೀಶ್ ಪೂಜಾರಿ, ಯ್ಯೂಟ್ಯೂಬರ್ ಸಚಿನ್ ಶೆಟ್ಟಿ, ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಮಲ್ಪೆ, ದೇಹಧಾರ್ಡ್ಯ ಪಟು ಉಮೇಶ್ ಮಟ್ಟು, ಸಂಸ್ಥೆಯ ಗೌರವಾಧ್ಯಕ್ಷ ಮಿಥುನ್ ಪಿ. ಶೆಟ್ಟಿ, ಹಿತೈಷಿಗಳಾದ ಸುಜಿತ್‌ಗಾಣಿಗ, ಸಚಿನ್ ಸುವರ್ಣ ಪಿತ್ರೋಡಿ, ತೀರ್ಪುಗಾರರಾದ ಪ್ರಶಾಂತ್ ಶಿಂದೆ, ತಾರಕ್ ಕ್ಷೇವಿಯರ್ ಮತ್ತು ಪೂಜಾ ಸಚಿನ್ ಉಪಸ್ಥಿತರಿದ್ದರು.
ಕಾರ್ಯಕ್ರಮ ನಿರೂಪಕರಾಗಿ ಸಾಹಿಲ್ ರೈ ನಿರ್ವಹಿಸಿದರು. ಸಿನೇಮಾ ಟೋಗ್ರಫರ್ ಭುವನೇಶ್ ಪ್ರಭು ಹಿರೇಬೆಟ್ಟು ಸಹಕರಿಸಿದರು. ತಂಡದ ಸದಸ್ಯರಾದ ಮಮತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.