ಬೆಂಗಳೂರು | ನೈಸ್ ರಸ್ತೆಯಲ್ಲಿ ಮಹಿಳಾ ಬೈಕ್ ಸವಾರರಿಗೆ ಕಿರುಕುಳ: ದೂರು-ಪ್ರತಿದೂರು

ಬೆಂಗಳೂರು, ಮಾ.6: ನಗರದ ಹೊರವಲಯದ ನೈಸ್ ರಸ್ತೆಯಲ್ಲಿ ಬೈಕ್ ನಿಲ್ಲಿಸಿ ನೀರು ಕುಡಿಯುತ್ತಿದ್ದ ಮಹಿಳಾ ಬೈಕ್ ರೈಡರ್ ಗಳ ಮೇಲೆ ವ್ಯಕ್ತಿಯೊರ್ವ ಅಸಭ್ಯವಾಗಿ ವರ್ತನೆ ಮಾಡಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಎರಡೂ ಕಡೆಗಳಿಂದಲೂ ದೂರು ಪ್ರತಿದೂರು ದಾಖಲಾಗಿವೆ.
ರವಿವಾರ ಮಧ್ಯಾಹ್ನ ಸುಮಾರಿಗೆ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ನೈಸ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯೊಬ್ಬರು ಬೈಕ್‍ನಲ್ಲಿ ರೈಡಿಂಗ್ ಮುಗಿಸಿಕೊಂಡು ವಾಪಸ್ ತೆರಳುತ್ತಿದ್ದಾಗ ಕೋಣನಕುಂಟೆ ಠಾಣೆ ವ್ಯಾಪ್ತಿಯ ನೈಸ್ ರಸ್ತೆ ಬಳಿ ನೀರು ಕುಡಿಯಲು ಗಾಡಿ ನಿಲ್ಲಿಸಿದ್ದಾರೆ.
ಆ ವೇಳೆ ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಯುವತಿಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಆನಂತರ ಅನುಚಿತವಾಗಿ ವರ್ತಿಸಿ, ರಸ್ತೆಯಿಂದ ಬೈಕ್ ತೆಗೆಯುವಂತೆ ಒತ್ತಾಯಿಸಿದ್ದಾನೆ. ಬೈಕ್ ತೆಗೆಯದೇ ಇದ್ದಾಗ ಬೈಕ್‍ನ ಕೀ ಕಿತ್ತುಕೊಂಡು ಹೋಗಿದ್ದಾನೆ.ಈ ಸಂಬಂಧ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಸಂಬಂಧ ಇಬ್ಬರು ದೂರು ಪ್ರತಿದೂರು ನೀಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.
Goondaism by a so called advocate on women bike riders. This guy is so damn cheap
— Madhu (@Sudhana2302) March 5, 2023
See how he manhandels and her hand and takes of the keys.. #Bangalore pic.twitter.com/UvPe5e0anF







