ಮಂಗಳೂರು: ತಂಡದಿಂದ ಹಲ್ಲೆ, ಚೂರಿ ತೋರಿಸಿ ಬೆದರಿಕೆ; ದೂರು ದಾಖಲು

ಮಂಗಳೂರು : ತಂಡವೊಂದು ಹಲ್ಲೆ ನಡೆಸಿದ್ದಲ್ಲದೆ ಚೂರಿ ತೋರಿಸಿ ಬೆದರಿಕೆ ಹಾಕಿರುವುದಾಗಿ ಮಹಿಳೆಯೋರ್ವರು ಕಾವೂರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ತನ್ನ ಪತಿ ಗಣೇಶ್ ಶೆಟ್ಟಿ ರವಿವಾರ ರಾತ್ರಿ ಕೂಳೂರಿನ ಹೊಟೇಲೊಂದರ ಮುಂದೆ ಪೋನ್‌ನಲ್ಲಿ ಮಾತನಾಡುತ್ತಿದ್ದಾಗ ಪರಿಚಯದ ಸುಧೀರ್ ಎಂಬಾತ ಅವಾಚ್ಯವಾಗಿ ಬೈದು ಕೈಯಿಂದ ದೂಡಿದ್ದಾನೆ. ಬಳಿಕ ಕೆಲವು ಮಂದಿ ಪತಿಯನ್ನು ಎಳೆದುಕೊಂಡು ಹೋದಾಗ ಬಿಡಿಸಲು ಯತ್ನಿಸಿದ ತನಗೆ ಮತ್ತು ಕೆಲಸದಾಳು ಚಂದ್ರಹಾಸ ಎಂಬವರ ಮೇಲೆ ಕೂಡ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಪತಿಗೆ ಆರೋಪಿ ಸುಧೀರ್ ಚೂರಿ ತೋರಿಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಬಬಿತಾ ಜಿ.ಶೆಟ್ಟಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
Next Story