ಅಗತ್ಯ ವಸ್ತುಗಳ ದರ ಏರಿಕೆ ವಿರೋಧಿಸಿ ಪ್ರತಿಭಟನೆ

ಉಳ್ಳಾಲ: ಇಂಧನ ಸಹಿತ ವಿವಿಧ ವಸ್ತುಗಳ ಬೆಲೆ ಏರಿಕೆ ಹಾಗೂ ಕೇಂದ್ರ ಸರ್ಕಾರದ ಜನವಿರೋಧಿ ನೀತಿ ವಿರೋಧಿಸಿ ವೆಲ್ ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಆಶ್ರಯದಲ್ಲಿ ತೊಕ್ಕೊಟ್ಟು ಜಂಕ್ಷನ್ ಬಳಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ಯನ್ನು ಉದ್ದೇಶಿಸಿ ರಾಜ್ಯ ಉಪಾಧ್ಯಕ್ಷ ಶ್ರೀಕಾಂತ್ ಸಾಲ್ಯಾನ್ ಮಾತನಾಡಿ, ದೇಶದ ಸುಧಾರಣೆ ತುಂಬಾ ಹಿಂದುಳಿದಿದೆ. ಬಿಜೆಪಿ ಯ ಅಧಿಕಾರಾವಧಿ ಯಲ್ಲಿ ಎಲ್ಲಾ ಇಲಾಖೆ ಗಳು ಮಾರಾಟ ಆಗುತ್ತಿದೆ.ಈಗ ಬೆಲೆ ಏರಿಕೆ ಯಿಂದ ದೇಶ ತತ್ತರಿಸಿ ಹೋಗಿದೆ.ಇದರಿಂದ ಜನಜೀವನಕ್ಕೆ ಕಷ್ಟಕರ ಪರಿಸ್ಥಿತಿ ಒದಗಿದೆ ಎಂದರು.
ಸದಸ್ಯ ರುಕ್ಸಾನ ಉಮರ್ ಮಾತನಾಡಿ ಬೆಲೆ ಏರಿಕೆ ಯನ್ನು ಶೀಘ್ರ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ದರು. ಪ್ರತಿಭಟನಾ ಸಭೆಯಲ್ಲಿ ಫೇರ್ ಪಾರ್ಟಿ ಆಫ್ ಇಂಡಿಯಾ ಉಳ್ಳಾಲ ವಲಯ ಅಧ್ಯಕ್ಷ ಸಲಾಂ ಸಿ.ಎಚ್, ಪ್ರಧಾನ ಕಾರ್ಯ ದರ್ಶಿ ಫಾರೂಕ್ ಅಳೇಕಲ, ಜಿಲ್ಲಾ ಉಪಾಧ್ಯಕ್ಷ ದಿವಾಕರ ರಾವ್, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಸೈಫು, ಉಳ್ಳಾಲ ನಗರ ಅಧ್ಯಕ್ಷ ಸಯ್ಯಾಫ್, ಜಿಲ್ಲಾ ವಕ್ತಾರರಾದ ಅರಫಾ ಮಂಚಿ ,ಮುತ್ತಲಿಬ್ ಮತ್ತಿತರರು ಉಪಸ್ಥಿತರಿದ್ದರು.