WPL: ಮುಂಬೈ ವಿರುದ್ಧ ಆರ್‌ಸಿಬಿ 155 ರನ್ ಗೆ ಆಲೌಟ್

ಮುಂಬೈ, ಮಾ.6: ರಿಚಾ ಘೋಷ್(28 ರನ್)ನೇತೃತ್ವದ ಆಟಗಾರ್ತಿಯರ ಸಾಂಘಿಕ ಪ್ರದರ್ಶನದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ)ತಂಡ ಸೋಮವಾರ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಮಹಿಳಾ ಪ್ರೀಮಿಯರ್ ಲೀಗ್‌ನ 4ನೇ ಪಂದ್ಯದಲ್ಲಿ 18.4 ಓವರ್‌ಗಳಲ್ಲಿ 155 ರನ್ ಗಳಿಸಿ ಆಲೌಟಾಯಿತು.
ಆರ್‌ಸಿಬಿ ಪರ ರಿಚಾ ಘೋಷ್ ಸರ್ವಾಧಿಕ ಸ್ಕೋರರ್ ಗಳಿಸಿದರೆ, ನಾಯಕಿ ಸ್ಮೃತಿ ಮಂಧಾನ(23 ರನ್), ಶ್ರೇಯಾಂಕಾ ಪಾಟೀಲ್(23 ರನ್), ಕನಿಕಾ ಅಹುಜಾ(22 ರನ್), ಮೆಗಾನ್ ಶುಟ್(20 ರನ್) ಎರಡಂಕೆಯ ಸ್ಕೋರ್ ಗಳಿಸಿದರು.
ಮುಂಬೈ ಪರ ಹೇಲಿ ಮ್ಯಾಥ್ಯೂಸ್(3-28) ಯಶಸ್ವಿ ಬೌಲರ್ ಎನಿಸಿಕೊಂಡರು. ಸೈಕಾ ಇಶಾಕ್ (2-26) ಹಾಗೂ ಅಮೆಲಿಯ ಕೆರ್ರ್(2-30) ತಲಾ 2 ವಿಕೆಟ್‌ಗಳನ್ನು ಪಡೆದರು.
Next Story





