ಅಮೆರಿಕ: ನ್ಯಾಯಾಂಗದ ಪ್ರಮುಖ ಹುದ್ದೆಗೆ ಭಾರತೀಯ ಮೂಲದ ಮಹಿಳೆ ನೇಮಕ
ವಾಷಿಂಗ್ಟನ್, ಮಾ.6: ಅಮೆರಿಕದ ಮಸಷುಚೆಟ್ಸ್ ರಾಜ್ಯದ ಜಿಲ್ಲಾ ನ್ಯಾಯಾಲಯದ ಪ್ರಥಮ ನ್ಯಾಯಾಧೀಶೆಯಾಗಿ ಭಾರತೀಯ ಅಮೆರಿಕನ್ ಮಹಿಳೆ ತೇಜಲ್ ಮೆಹ್ತಾರನ್ನು ನೇಮಕಗೊಳಿಸಿರುವುದಾಗಿ ವರದಿಯಾಗಿದೆ.
ಅಯೇರ್ ಜಿಲ್ಲಾನ್ಯಾಯಾಲದ ಪ್ರಥಮ ನ್ಯಾಯಾಧೀಶೆಯಾಗಿ ಅವರು ಕಾರ್ಯನಿರ್ವಹಿಸಲಿದ್ದಾರೆ. ಇದೇ ನ್ಯಾಯಾಲಯದಲ್ಲಿ ಸಹಾಯಕ ನ್ಯಾಯಾಧೀಶೆಯಾಗಿ ಕಾರ್ಯನಿರ್ವಹಿಸಿದ್ದ ತೇಜಲ್‍ರ ಪದೋನ್ನತಿಗೆ ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಗಿದೆ. ಗುರುವಾರ ಅವರ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ ಎಂದು ಉನ್ನತ ಮೂಲಗಳು ಹೇಳಿವೆ.
ತೇಜಲ್ ಮೆಹ್ತಾ ಅಮೆರಿಕದ ಜಿಲ್ಲಾನ್ಯಾಯಾಲಯದ ನ್ಯಾಯಾಧೀಶೆಯಾಗಿ ನೇಮಕಗೊಂಡ ಪ್ರಪ್ರಥಮ ಭಾರತೀಯ ಅಮೆರಿಕನ್ ನ್ಯಾಯಾಧೀಶೆಯಾಗಿದ್ದಾರೆ.
Next Story