ಗ್ಯಾಂಗ್ ಸ್ಟರ್ ಅತೀಕ್ ಜೊತೆಗೆ ಉತ್ತರಪ್ರದೇಶದ ಸಚಿವನ ಫೋಟೊ ಹಂಚಿಕೊಂಡು ಸಂಪುಟದಿಂದ ವಜಾಕ್ಕೆ ಆಗ್ರಹಿಸಿದ ಎಸ್ಪಿ

ಲಕ್ನೊ: ಸಮಾಜವಾದಿ ಪಕ್ಷದ ಮಾಧ್ಯಮ ವಿಭಾಗವು ಸೋಮವಾರ ಉತ್ತರ ಪ್ರದೇಶದ ಸಚಿವ ನಂದಗೋಪಾಲ್ ಗುಪ್ತಾ 'ನಂದಿ' ಗ್ಯಾಂಗ್ ಸ್ಟರ್ ಹಾಗೂ ರಾಜಕಾರಣಿ ಅತೀಕ್ ಅಹ್ಮದ್ ನೊಂದಿಗೆ ಇರುವ ಫೋಟೋಗಳನ್ನು ಹಂಚಿಕೊಂಡಿದೆ. ಉತ್ತರಪ್ರದೇಶದ ಸಚಿವರನ್ನು ಆದಿತ್ಯನಾಥ್ ಅವರ ಸಂಪುಟದಿಂದ ವಜಾಗೊಳಿಸುವಂತೆ ಸಮಾಜವಾದಿ ಪಕ್ಷವು ಒತ್ತಾಯಿಸಿದೆ.
ಆದಿತ್ಯನಾಥ್ ಸಂಪುಟದ ಮಂತ್ರಿ, ನಂದಗೋಪಾಲ್ ಗುಪ್ತಾ ‘ನಂದಿ’, ಸ್ವತಃ ಭ್ರಷ್ಟ, ಮಾಫಿಯಾ ಹಾಗೂ ಕ್ರಿಮಿನಲ್ ಮಾದರಿಯ ವ್ಯಕ್ತಿ. ಇಂದು ಪ್ರಯಾಗ್‌ರಾಜ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಗುಪ್ತಾ ವಿರುದ್ಧ 5 ಕೋಟಿ ರೂಪಾಯಿ ದುರುಪಯೋಗದ ಆರೋಪ ಕೇಳಿಬಂದಿತ್ತು. ಸಿಎಂ ಆದಿತ್ಯನಾಥ್ ಅವರೇ ನಿಮಗೇನಾದರೂ ನೈತಿಕತೆ ಇದ್ದರೆ ಗುಪ್ತಾರನ್ನು ಸಚಿವ ಸ್ಥಾನದಿಂದ ವಜಾ ಮಾಡಿ ಎಂದು ಸಮಾಜವಾದಿ ಪಕ್ಷ ಟ್ವೀಟಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಅತೀಕ್ ಅಹ್ಮದ್ ಅವರ ಸಹೋದರಿ ಆಯೇಷಾ ನೂರಿ ಅವರು ನಂದ್ ಗೋಪಾಲ್ ಗುಪ್ತಾ ನಂದಿ ಅವರು ಅತೀಕ್ ಅಹ್ಮದ್ ಅವರಿಂದ ಪಡೆದ 5 ಕೋಟಿ ರೂಪಾಯಿಯನ್ನು ಹಿಂದಿರುಗಿಸಿಲ್ಲ ಎಂದು ಆರೋಪಿಸಿದ್ದರು.
ತಮ್ಮ ವಿರುದ್ಧದ ಆರೋಪಗಳಿಗೆ ಹಿಂದಿಯಲ್ಲಿ ಟ್ವೀಟ್ ಮಾಡಿರುವ 'ನಂದಿ', "ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್-ಜಿ ನೇತೃತ್ವದಲ್ಲಿ ಕಾನೂನು ಆಡಳಿತವಿದೆ! ಆದಿತ್ಯನಾಥ್ ಸರಕಾರವು ಕ್ರಿಮಿನಲ್‌ಗಳು ಮತ್ತು ಮಾಫಿಯಾ ವಿಚಾರದಲ್ಲಿ ಶೂನ್ಯ ಸಹಿಷ್ಣುತೆಯ ನೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಉಮೇಶ್ ಪಾಲ್ ಕೊಲೆ ಪ್ರಕರಣದಲ್ಲಿಯೂ ಆರಂಭಿಸಿರುವ ಕ್ರಮವು ಈ ದಿಕ್ಕಿನಲ್ಲಿ ಸಾಗುತ್ತಿದೆ ಎಂದರು.
सूप बोले तो सूप वो चलनिया भी बोले जामे बहत्तर छेद?
— SamajwadiPartyMediaCell (@MediaCellSP) March 6, 2023
योगीजी का मंत्री @NandiGuptaBJP खुद एक बड़ा भ्रष्टाचारी ,माफिया और आपराधिक किस्म का आदमी है
आज प्रयागराज प्रेस कॉन्फ्रेंस में इसके द्वारा 5 करोड़ रुपए हड़पे जाने को लेकर आरोप लगे
योगीजी
तनिक भी नैतिकता हो तो इसे बर्खास्त करें https://t.co/mlUjwnrmEw pic.twitter.com/xxIN4btKJq







