ಜೆಸಿಐನಿಂದ ಮಹಿಳೆಯರಿಗೆ ಮಿನಿ ಮ್ಯಾರಥ್ಯಾನ್

ಮಂಗಳೂರು: ಜೆಸಿಐ ಮಂಗಳಗಂಗೋತ್ರಿ ಕೊಣಾಜೆ, ವಲಯ 15 ವತಿಯಿಂದ ಇತ್ತೀಚೆಗೆ ಬೆಲ್ಮಸೋತ್ಸವ, ಬೆಲ್ಮ ಇವರ ಸಹಯೋಗದಲ್ಲಿ ಮಹಿಳೆಯರಿಗೆ ಮಿನಿ ಮ್ಯಾರಥ್ಯಾನ್ ಏರ್ಪಡಿಸಲಾಗಿತ್ತು. ಮ್ಯಾರಥ್ಯಾನ್ ಓಟವನ್ನು ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂಚಲಾಕ್ಷ್ಮಿ ಉದ್ಘಾಟನೆ ಮಾಡಿ ಶುಭಾಶಯ ಕೋರಿದರು.
ಕರ್ನಾಟಕ ರಾಜ್ಯ ಅಲೆಮಾರಿ ನಿಗಮದ ಮಾಜಿ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೋಟ್ಟು ಕ್ರೀಡಾಕೂಟ ಭಾಗವಸಿ ಜೆಸಿಐ ಕಾರ್ಯಾಚಟುವಟಿಕೆಗಳನ್ನು ಶ್ಲಾಘಿಸಿದರು. ಬೆಲ್ಮ ಉತ್ಸವದ ಆಯೋಜಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜೆಸಿಐ ಮಂಗಳಗಂಗೋತ್ರಿ ಕೊಣಾಜೆ ಅಧ್ಯಕ್ಷ ಡಾ. ನರಸಿಂಹಯ್ಯ ಎನ್, ಕಾರ್ಯದರ್ಶಿ ಆರೀಫ್ ಕಲ್ಕಟ್ಟ, ಜೆಸಿಐ ಸ್ಥಾಪಕ ಅಧ್ಯಕ್ಷ ತ್ಯಾಗಮ ಹರೇಕಳ, ಮೋಹನ್ ಶೀರ್ಲಾಲ್ ಭಾಗವಹಿಸಿ ಕಾರ್ಯಕ್ರಮ ನಿರ್ವಹಿಸಿದರು. ಎಲ್ಲ ಸದಸ್ಯರು ಭಾಗವಸಿದ್ದರು. ವಿಜೇತರಿಗೆ ನಗದು ಬಹುಮಾನ ವಿತರಿಸಲಾಯಿತು.
Next Story