ಕೃಷಿ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಸಹಾಯಧನ: ಅರ್ಜಿ ಆಹ್ವಾನ

ಉಡುಪಿ: ಕೃಷಿ ಇಲಾಖೆಯ ವತಿಯಿಂದ ದಾಲ್ ಪ್ರೊಸೆಸರ್, ಫ್ಲೋರ್ ಮಿಲ್, ಮಿನಿ ರೈಸ್ ಮಿಲ್, ರಾಗಿ ಕ್ಲೀನಿಂಗ್ ಮೆಷಿನ್, ರವಾ/ ಕ್ಯಾಟಲ್ ಫೀಡ್ ಮೆಷಿನ್, ಚಿಲ್ಲಿ ಪೌಡರಿಂಗ್ ಮೆಷಿನ್, ಶಾವಿಗೆ ಮೆಷಿನ್, ಶುಗರ್ ಕೇನ್ ಜ್ಯೂಸ್ ಮೇಕಿಂಗ್ ಮೆಷಿನ್ ಹಾಗೂ ಇನ್ನಿತರ ಕೃಷಿ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಸಹಾಯಧನ ಪಡೆಯಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ರೈತರು ಭಾವಚಿತ್ರ, ಆಧಾರ್ ಪ್ರತಿ, ಬ್ಯಾಂಕ್ ಪಾಸ್‌ಪುಸ್ತಕ ಪ್ರತಿ, ಪಹಣಿ, ಛಾಪಾ ಕಾಗದ, ಕೆ.ಇ.ಬಿ.ಯ ವಿದ್ಯುತ್ ಸಂಪರ್ಕ ಸರ್ಟಿಫಿಕೇಟ್, ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರು ಜಾತಿ ಪ್ರಮಾಣ ಪತ್ರದೊಂದಿಗೆ ಸಮೀಪದ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





