ಬೆಳ್ಳಾರೆ: ಆಸ್ಪತ್ರೆಯ ಹಳೆ ಕಟ್ಟಡ ಕೆಡವುವ ವೇಳೆ ಗೋಡೆ ಕುಸಿದು ಕಾರ್ಮಿಕ ಮೃತ್ಯು

ಬೆಳ್ಳಾರೆ: ಸರಕಾರಿ ಆಸ್ಪತ್ರೆಯ ಹಳೆ ಕಟ್ಟಡ ಕೆಡವುತ್ತಿರುವ ವೇಳೆ ಗೋಡೆ ಕುಸಿದು ಕಾರ್ಮಿಕ ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದೆ.
ಮೃತರನ್ನು ಮಂಜುನಾಥ (23) ಎಂದು ಗುರುತಿಸಲಾಗಿದೆ.
ಬೆಳ್ಳಾರೆ ಸರಕಾರಿ ಆಸ್ಪತ್ರೆಗೆ ಹೊಸ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು, ಹಳೆ ಕಟ್ಟಡ ಕೆಡವುವ ಕಾರ್ಯ ನಡೆಯುತ್ತಿತ್ತು. ಇದರ ಗುತ್ತಿಗೆ ತೆಗೆದುಕೊಂಡವರು ತಮ್ಮ ಕಾರ್ಮಿಕರ ಮುಖಾಂತರ ಗೋಡೆ ಕೆಡವುವ ಕಾರ್ಯ ಮಾಡುತ್ತಿದ್ದರು. ಊಟದ ವಿರಾಮದ ನಂತರ ಗೋಡೆ ಕೆಡವುತ್ತಿದ್ದಾಗ ಕಾರ್ಮಿಕ ಮಂಜುನಾಥರ ಮೇಲೆ ಬಿತ್ತು. ಕಲ್ಲುಗಳ ಅಡಿಗೆ ಸಿಲುಕಿದ ಅವರನ್ನು ಇತರ ಕಾರ್ಮಿಕರು ಹೊರತೆಗೆದು ಸುಳ್ಯ ಆಸ್ಪತ್ರೆಗೆ ಕೊಂಡೊಯ್ದರಾದರೂ ಆ ವೇಳೆಗಾಗಲೇ ಅವರು ಕೊನೆಯುಸಿರೆಳೆದಿದ್ದರು ಎಂದು ತಿಳಿದುಬಂದಿದೆ.
ಮಂಜುನಾಥ ವಿಜಯಪುರ ಜಿಲ್ಲೆಯ ನೆರೆಬೊಮ್ಮನಹಳ್ಳಿ ನಿವಾಸಿ. ಇವರು ಹಾಗೂ ಇವರ ಸಂಬಂಧಿಕರು ಎರಡು ತಿಂಗಳ ಹಿಂದೆ ಬೆಳ್ಳಾರೆಗೆ ಆಗಮಿಸಿದ್ದು, ಇಲ್ಲಿ ಕೆಲಸ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Next Story





