ಉಡುಪಿ: ಸಾಲ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ

ಉಡುಪಿ, ಮಾ.7: ಸಾಲ ನೀಡುವುದಾಗಿ ನಂಬಿಸಿ ಆನ್‌ಲೈನ್ ಮೂಲಕ ಲಕ್ಷಾಂತರ ರೂ. ಹಣ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಿರೀಶ್ ಆಚಾರ್ಯ ಎಂಬವರು ಹಣದ ಅವಶ್ಯಕತೆಗಾಗಿ ಫೇಸ್‌ಬುಕ್‌ನಲ್ಲಿ ಕಂಡುಬಂದ ಬಜಾಜ್ ಲೋನ್ ಎಂಬ ಜಾಹಿರಾತಿನಲ್ಲಿ ಲೋನ್ ಪಡೆಯಲು ದಾಖಲೆಗಳನ್ನು ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡಿದ್ದರು. ಫೆ.27 ರಂದು ಬಜಾಜ್ ಫೈನಾನ್ಸ್ ನಿಂದ ಎಂಬುದಾಗಿ ಹೇಳಿಕೊಂಡು ಕರೆ ಮಾಡಿದ ಅಪರಿಚಿತ ವ್ಯಕ್ತಿ, ಲೋನ್ ನೀಡುವುದಾಗಿ ನಂಬಿಸಿ, ಗಿರೀಶ್ ಆಚಾರ್ಯ ಅವರಿಂದ ಮಾ.1ರಿಂದ ಮಾ.3ರ ಮಧ್ಯಾವಧಿಯಲ್ಲಿ ಹಂತ ಹಂತವಾಗಿ ಒಟ್ಟು 4,09,167ರೂ. ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿಸಿಕೊಂಡು ಮೋಸಮಾಡಿರುವುದಾಗಿ ದೂರಲಾಗಿದೆ.
Next Story





