ಉಳ್ಳಾಲ: ದರ್ಗಾ ಆವರಣದಲ್ಲಿ ಯಾತ್ರೀ ನಿವಾಸ ಉದ್ಘಾಟನೆ

ಮಂಗಳೂರು: ಪ್ರವಾಸಿಗರಿಗೆ ಆಶ್ರಯ ಕಲ್ಪಿಸುವ ನಿಟ್ಟಿನಲ್ಲಿ ಸರಕಾರದ ಯೋಜನೆಯಾಗಿರುವ ಉಳ್ಳಾಲ ದರ್ಗಾ ವಠಾರದಲ್ಲಿ ನಿರ್ಮಿಸಲಾದ ಯಾತ್ರೀ ನಿವಾಸ ಶಾಸಕ ಯು.ಟಿ.ಖಾದರ್ ಅವರು ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕ ಯು.ಟಿ.ಖಾದರ್, ರಾಜ್ಯ ಸರಕಾರ ಸೂಕ್ತ ಸಮಯದಲ್ಲಿ ಅನುದಾನ ಬಿಡುಗಡೆಗೊಳಿಸದ ಕಾರಣ ಕಾಮಗಾರಿಗಳಿಗೆ ಗುತ್ತಿಗೆದಾರರು ಮುಂದಾಗುತ್ತಿಲ್ಲ, ದರ್ಗಾ ವಠಾರದಲ್ಲೂ ಯಾತ್ರೀ ನಿವಾಸ ನಿರ್ಮಾಣವಾಗಲು ಸರಕಾರದ ನಿರ್ಲಕ್ಷ್ಯ ಧೋರಣೆ ಕಾರಣ ಎಂದು ತಿಳಿಸಿದರು.
ಅಬ್ದುಲ್ ರಶೀದ್ ಹಾಜಿ ಮಾತನಾಡಿ, ಕಳೆದ 15 ದಿನಗಳಿಂದ ಇಂಜಿನಿಯರ್‌ರನ್ನು ಸಂಪರ್ಕಿಸಲು ಪ್ರಯತ್ನಿಸಲಾಗಿದ್ದು ಕರೆಯನ್ನೇ ಸ್ವೀಕರಿಸಿಲ್ಲ. ಕಾಮಗಾರಿ ಅಸ್ತವ್ಯಸ್ತವಾಗಿದ್ದು ಈ ಹಿನ್ನೆಲೆಯಲ್ಲಿ ಆಗಬೇಕಿರುವ ಕೆಲಸ ಮಾಡಿಸಲು ಹಾಗೂ ಮೇಲಂತಸ್ತು ನಿರ್ಮಾಣ ಆಗಲು ಶಾಸಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಕಾರ್ಯದರ್ಶಿ ತ್ವಾಹಾ ಮಹಮ್ಮದ್, ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ದರ್ಗಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ತ್ವಾಹ, ಉಪಾಧ್ಯಕ್ಷರಾದ ಮೋನು ಇಸ್ಮಾಯಿಲ್, ಬಾವ ಮೊಹಮ್ಮದ್, ಲೆಕ್ಕ ಪರಿಶೋಧಕ ಇಲ್ಯಾಸ್ ಯು.ಟಿ., ಕೋಶಾಧಿಕಾರಿ ಅಬ್ಬಾಸ್ ಹಾಜಿ, ವಕ್ತಾರ ಫಾರೂಕ್ ಉಳ್ಳಾಲ್, ಅರೆಬಿಕ್ ಟ್ರಸ್ಟ್ ಜತೆಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ, ದರ್ಗಾ ಸಮಿತಿಯ ಸದಸ್ಯರಾದ ಹಸನಬ್ಬ ಕಡಪ್ಪರ, ಅಲಿಮೋನು, ಇಬ್ರಾಹಿಂ ಯು.ಕೆ., ಸೋಲಾರ್ ಹನೀಫ್, ಇಬ್ರಾಹಿಂ ಇನ್ನಿತರರು ಉಪಸ್ಥಿತರಿದ್ದರು.