ಮಾನಹಾನಿ ಸುದ್ದಿ ಪ್ರಕಟಿಸದಂತೆ ಆದೇಶಿಸಿದ ಬೆನ್ನಲ್ಲೇ ಪ್ರತಿವಾದಿಯನ್ನಾಗಿಸಲು ಕೋರಿ ಎಚ್.ಎಂ.ವೆಂಕಟೇಶ್‍ರಿಂದ ಅರ್ಜಿ
ಪ್ರಶಾಂತ್ ಮಾಡಾಳ್ ಲಂಚ ಸ್ವೀಕಾರ ಪ್ರಕರಣ
ಬೆಂಗಳೂರು, ಮಾ.7: ಲಂಚ ಪ್ರಕರಣದಲ್ಲಿ ಆರೋಪಿಗಳಾಗಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ವಿರುದ್ಧ ಯಾವುದೇ ತೆರನಾದ ಮಾನಹಾನಿ ಸುದ್ದಿಗಳನ್ನು ಪ್ರಕಟಿಸದಂತೆ ನಗರದ ಸಿಟಿ ಸಿವಿಲ್ ನ್ಯಾಯಾಲಯವು ಮಾಧ್ಯಮ ಸಂಸ್ಥೆಗಳ ವಿರುದ್ಧ ಪ್ರತಿಬಂಧಕಾದೇಶ ಹೊರಡಿಸಿದ ಬೆನ್ನಲ್ಲೇ ಸಾಮಾಜಿಕ ಹೋರಾಟಗಾರರಾದ ಹೆಚ್.ಎಂ.ವೆಂಕಟೇಶ್ ಅವರು ಈ ಪ್ರಕರಣದಲ್ಲಿ ನಮ್ಮನ್ನು ವಿಚಾರಣೆ ನಡೆಸಿ ಮತ್ತು ನಮ್ಮನ್ನು ಪ್ರತಿವಾದಿಯನ್ನಾಗಿ ಮಾಡಿ ಎಂದು ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಸಿಟಿ ಸಿವಿಲ್ ಕೋರ್ಟ್‍ನಲ್ಲಿ ಎಚ್.ಎಂ.ವೆಂಕಟೇಶ್ ಸಲ್ಲಿಸಿದ ಅರ್ಜಿಗೆ ವಕೀಲರಾದ ರಮೇಶ್ ಬಾಬು ಮತ್ತು ಶಿವಪ್ರಕಾಶ್ ಅವರು ವಾದವನ್ನು ಮಂಡಿಸಿದ್ದಾರೆ. ಈ ಕುರಿತಂತೆ ನ್ಯಾಯಪೀಠವು ಅರ್ಜಿದಾರರು ತಮ್ಮ ಪ್ರತಿಕ್ರಿಯೆಯನ್ನು ನೀಡುವಂತೆ ಕಾಲಾವಕಾಶವನ್ನು ನೀಡಿ ವಿಚಾರಣೆಯನ್ನು ಮುಂದೂಡಿದೆ.
ಎಚ್.ಎಂ.ವೆಂಕಟೇಶ್ ಕರೆ: ಕೋರ್ಟ್‍ಗಳಲ್ಲಿ ಜನಪ್ರತಿನಿಧಿಗಳು ತರುವ ತಡೆಯಾಜ್ಞೆಯನ್ನು ಮಾಧ್ಯಮ ಕ್ಷೇತ್ರದಲ್ಲಿರುವವರು ತೆರವುಗೊಳಿಸಲು ಮುಂದಾಗಬೇಕೆಂದು ಸಾಮಾಜಿಕ ಹೋರಾಟಗಾರ ಎಚ್.ಎಂ.ವೆಂಕಟೇಶ್ ಅವರು ಕರೆ ನೀಡಿದ್ದಾರೆ.