ಬಾಂಗ್ಲಾದೇಶ: ಕಟ್ಟಡದಲ್ಲಿ ಸ್ಫೋಟ 15 ಮಂದಿ ಮೃತ್ಯು; 70ಕ್ಕೂ ಹೆಚ್ಚು ಮಂದಿಗೆ ಗಾಯ

ಢಾಕಾ, ಮಾ.7: ಬಾಂಗ್ಲಾದೇಶದ ರಾಜಧಾನಿ ಢಾಕಾದ ಜನನಿಬಿಡ ಮಾರುಕಟ್ಟೆಯ ಕಟ್ಟಡವೊಂದರಲ್ಲಿ ಮಂಗಳವಾರ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಟ 15 ಮಂದಿ ಮೃತಪಟ್ಟು 70ಕ್ಕೂ ಹೆಚ್ಚುಮಂದಿ ಗಾಯಗೊಂಡಿರುವುದಾಗಿ ಎಎಫ್‍ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.
ಢಾಕಾದ ಬಳಿಯ ಗುಲಿಸ್ತಾನ್ ನಗರದಲ್ಲಿರುವ ಪ್ರಮುಖ ಸಗಟು ಮಾರುಕಟ್ಟೆಯ 7 ಮಹಡಿಗಳ ಕಟ್ಟಡದಲ್ಲಿ ಸ್ಫೋಟ ಸಂಭವಿಸಿದ್ದು ಕನಿಷ್ಟ 15 ಮಂದಿ ಮೃತಪಟ್ಟಿದ್ದು 70ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ವರದಿ ಹೇಳಿದೆ.
ಸ್ಫೋಟದ ತೀವ್ರತೆಗೆ ಕಟ್ಟಡದ ನಾಲ್ಕು ಮತ್ತು ಐದನೇ ಮಹಡಿ ನಡುಗಿದೆ. ಕಟ್ಟಡದ ಎದುರುಗಡೆ ಇರುವ ಬಸ್ಸುನಿಲ್ದಾಣ ಕುಸಿದುಬಿದ್ದಿದೆ. ಸ್ಫೋಟಕ್ಕೆ ಕಾರಣ ತಿಳಿದುಬಂದಿಲ್ಲ. ಆದರೆ ಗಾಯಾಳುಗಳಲ್ಲಿ ಹಲವರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ. ಗಾಯಾಳುಗಳನ್ನು ಢಾಕಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಬಚ್ಚು ಮಿಯಾ ಹೇಳಿದ್ದಾರೆ.
Next Story