ಮಕ್ಕಳ ಸಾವಿನ ಪ್ರಕರಣಗಳ ಹೆಚ್ಚಳ: ಪಶ್ಚಿಮ ಬಂಗಾಳದ ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗಳ ರಜೆ ರದ್ದು

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ತೀವ್ರವಾದ ಉಸಿರಾಟದ (ಎಆರ್‌ಐ) ಸೋಂಕಿನಿಂದ ಮಕ್ಕಳ ಸಾವಿನ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ, ರಾಜ್ಯದ ಆರೋಗ್ಯ ಇಲಾಖೆಯು ತನ್ನ ಎಲ್ಲಾ ಸಿಬ್ಬಂದಿಗಳ ರಜೆಯನ್ನು ರದ್ದುಗೊಳಿಸಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
“ರಾಜ್ಯದ ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ ಎಲ್ಲರೂ ಅವರವರ ಠಾಣೆಗಳಲ್ಲಿ ಹಾಜರಿರಬೇಕು. ಚಿಕಿತ್ಸಾಲಯಗಳು 24X7 ಆಧಾರದ ಮೇಲೆ ಕಾರ್ಯನಿರ್ವಹಿಸಬೇಕು.” ಎಂದು ಇಲಾಖೆಯು ಅಧಿಸೂಚನೆಯಲ್ಲಿ ಹೇಳಿದೆ.
ಅಡೆನೊವೈರಸ್ ಸೋಂಕಿಗೆ ಒಳಗಾದ ಆರು ಮಕ್ಕಳು ಸೇರಿದಂತೆ ಎಆರ್‌ಐನಿಂದ ಇದುವರೆಗೆ 19 ಜನರು ಸಾವನ್ನಪ್ಪಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಹೇಳಿದ್ದಾರೆ. ಪರಿಸ್ಥಿತಿಯನ್ನು ಎದುರಿಸಲು ಮತ್ತೆ ಮುಖಗವಸುಗಳನ್ನು ಬಳಸಲು ಪ್ರಾರಂಭಿಸುವಂತೆ ಅವರು ಜನರನ್ನು ಕೇಳಿಕೊಂಡಿದ್ದಾರೆ.
Next Story





