ಲೈಂಗಿಕ ಕಿರುಕುಳ ಆರೋಪ: ಜುವೆಲ್ಲರಿಯೊಂದರ ಮ್ಯಾನೇಜರ್ ಬಂಧನ

ಮಂಗಳೂರು, ಮಾ.8: ಲೈಂಗಿಕ ಕಿರುಕುಳ ಹಾಗೂ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದ ಆರೋಪದಲ್ಲಿ ಕೇರಳ ಮೂಲದ ಜುವೆಲ್ಲರಿ ಸಂಸ್ಥೆಯೊಂದರ ಮ್ಯಾನೇಜರ್ ನನ್ನು ಕದ್ರಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಕಾಸರಗೋಡಿನ ಮೊಗ್ರಾಲ್ ಟಿವಿಎಸ್ ರೋಡ್ ನಿವಾಸಿ ಮುಹಮ್ಮದ್ ಕುಂಞಿ(52) ಬಂಧಿತ ಆರೋಪಿ. ಈತ ಕಾಸರಗೋಡಿನಲ್ಲಿ ಜುವೆಲ್ಲರಿ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿದ್ದಾನೆ. ಆರೋಪಿಯನ್ನು ಕಾಸರಗೋಡಿನಿಂದ ಬಂಧಿಸಿ ಕರೆ ತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





