Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಮಾ.10-12ರವರೆಗೆ ಬೆಂಗಳೂರಿನಲ್ಲಿ ಪ್ರಥಮ...

ಮಾ.10-12ರವರೆಗೆ ಬೆಂಗಳೂರಿನಲ್ಲಿ ಪ್ರಥಮ ಅಂತರ್ ರಾಷ್ಟ್ರೀಯ ಕ್ಯಾಲಿಗ್ರಫಿ ಪ್ರದರ್ಶನ, ವಿಚಾರಗೋಷ್ಠಿ: ಸೈಯದ್ ಬ್ಯಾರಿ

8 March 2023 8:51 AM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಮಾ.10-12ರವರೆಗೆ ಬೆಂಗಳೂರಿನಲ್ಲಿ ಪ್ರಥಮ ಅಂತರ್ ರಾಷ್ಟ್ರೀಯ ಕ್ಯಾಲಿಗ್ರಫಿ ಪ್ರದರ್ಶನ, ವಿಚಾರಗೋಷ್ಠಿ: ಸೈಯದ್ ಬ್ಯಾರಿ

ಬೆಂಗಳೂರು, ಮಾ.8: ಉದ್ಯಾನ ನಗರಿ ಬೆಂಗಳೂರಿನಲ್ಲಿ ದೇಶದಲ್ಲೇ ಪ್ರಥಮ ಬಾರಿ ಮಾ.10 ರಿಂದ 12ರವರೆಗೆ ಮೂರು ದಿನಗಳ ಅಂತರ್ ರಾಷ್ಟ್ರೀಯ ಬಹುಭಾಷಾ ಕ್ಯಾಲಿಗ್ರಫಿ ಪ್ರದರ್ಶನ ಹಾಗೂ ವಿಚಾರಗೋಷ್ಠಿಯನ್ನು ಆಯೋಜಿಸಲಾಗಿದೆ ಎಂದು ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ತಿಳಿಸಿದ್ದಾರೆ.

ನಗರದ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬ್ಯಾರೀಸ್ ಗ್ರೂಪ್ ಪ್ರಾಯೋಜಕತ್ವದಲ್ಲಿ ಇನ್ಸ್ಟಿಟ್ಯೂಟ್ ಆಫ್ ಇಂಡೊ ಇಸ್ಲಾಮಿಕ್ ಆರ್ಟ್ ಆ್ಯಂಡ್ ಕಲ್ಚರ್ ಸಂಘಟಿಸಿರುವ ಈ ಕಾರ್ಯಕ್ರಮವು ಬೃಂಟನ್ ರಸ್ತೆಯಲ್ಲಿರುವ ಪ್ರೆಸ್ಟೀಜ್ ಫಾಲ್ಕನ್ ಟವರ್ಸ್ ನ ದಿ ಫಾಲ್ಕನ್ ಡೆನ್ ಸಭಾಂಗಣದಲ್ಲಿ ಜರುಗಲಿದೆ ಎಂದರು.

ದೇಶ, ವಿದೇಶದ ಸುಮಾರು 50 ಕಲಾವಿದರು, ಕ್ಯಾಲಿಗ್ರಫಿ ತಜ್ಞರು ಇದರಲ್ಲಿ ಭಾಗವಹಿಸಲಿದ್ದಾರೆ. ಕ್ಯಾಲಿಗ್ರಫಿ ಒಂದು ವಿಶಿಷ್ಟವಾದ ಕಲೆ. ದೇಹ, ಮನಸ್ಸು, ಆಲೋಚನೆ ಒಂದು ಕಡೆ ಕೇಂದ್ರೀಕೃತವಾಗುವಂತೆ ಅದು ಮಾಡುತ್ತದೆ. ನರರೋಗ ತಜ್ಞರು ಏಕಾಗ್ರತೆಗಾಗಿ ಈ ಕಲೆಯನ್ನು ಕಲಿಯುತ್ತಾರೆ ಎಂದು ಸೈಯದ್ ಬ್ಯಾರಿ ಹೇಳಿದರು.

ಕ್ಯಾಲಿಗ್ರಫಿ ಅನ್ನೋದು ಸುಂದರ ಬರಹ. ಮೂಲತಃ ಅರೆಬಿಕ್ ಭಾಷೆಯಲ್ಲಿ ಕ್ಯಾಲಿಗ್ರಫಿ ಬಳಕೆ ಹೆಚ್ಚಾಗಿ ಕಾಣುತ್ತದೆ. ಅದರ ಜೊತೆಗೆ ಚೀನಾ, ಜಪಾನ್ ಭಾಷೆಯ ಮೇಲೂ ಕ್ಯಾಲಿಗ್ರಫಿ ಪ್ರಭಾವ ಕಂಡುಬರುತ್ತದೆ. ನಮ್ಮ ದೇಶದ ಎಲ್ಲ ರಾಜ್ಯಗಳ ಭಾಷೆಗಳು ಕ್ಯಾಲಿಗ್ರಫಿಯನ್ನು ಅಳವಡಿಸಿಕೊಂಡಿರುವುದು ಕಾಣಬಹುದು ಎಂದು ಅವರು ಹೇಳಿದರು.

ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ಟರ್ಕಿ, ಜಪಾನ್, ಸುಡಾನ್,  ಮಧ್ಯಪ್ರಾಚ್ಯ ಸೇರಿದಂತೆ ಹತ್ತಕ್ಕೂ ಹೆಚ್ಚು ದೇಶಗಳ ಕ್ಯಾಲಿಗ್ರಫಿ ತಜ್ಞರು ಮತ್ತು ಉರ್ದು, ಮಲಯಾಳಂ, ಕನ್ನಡ, ತಮಿಳು, ಮರಾಠಿ ಸೇರಿ ಹತ್ತಾರು ಭಾರತೀಯ ಭಾಷೆಗಳ ಕ್ಯಾಲಿಗ್ರಫಿ ತಜ್ಞರು ಭಾಗವಹಿಸಿ ವಿಷಯ ಮಂಡನೆ ಮಾಡಲಿದ್ದಾರೆ ಎಂದು ಸೈಯದ್ ಮುಹಮ್ಮದ್ ಬ್ಯಾರಿ ಹೇಳಿದರು.

ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಕ್ಯಾಲಿಗ್ರಫಿ ಕಲೆಗಳ ಪ್ರದರ್ಶನ ಮತ್ತು ಕ್ಯಾಲಿಗ್ರಫಿಗೆ ಸಂಬಂಧಿಸಿದ ಹಲವು ವಿಷಯಗಳು ಹಾಗೂ ಆಯಾಮಗಳ ಬಗ್ಗೆ ವಿಚಾರ ಗೋಷ್ಠಿ, ಸಂವಾದ, ಕಾರ್ಯಾಗಾರ ಇತ್ಯಾದಿಗಳು ನಡೆಯಲಿವೆ. ಭಾರತದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿ ನಡೆಯುತ್ತಿರುವ ಅಪರೂಪದ ಕಾರ್ಯಕ್ರಮ ಇದಾಗಿದೆ ಎಂದು ಅವರು ತಿಳಿಸಿದರು.

ಇನ್ಸ್ಟಿಟ್ಯೂಟ್ ಆಫ್ ಇಂಡೊ ಇಸ್ಲಾಮಿಕ್ ಆರ್ಟ್ ಆ್ಯಂಡ್ ಕಲ್ಚರ್(ಐಐಐಎಸಿ)ನ ಪ್ರಾಂಶುಪಾಲ ಮುಖ್ತಾರ್ ಅಹ್ಮದ್ ಮಾತನಾಡಿ, ಶುಕ್ರವಾರ ( ಮಾ. 10) ಬೆಳಗ್ಗೆ 10. 30 ಕ್ಕೆ ಪ್ರೆಸ್ಟೀಜ್ ಗ್ರೂಪ್ ನ ಅಧ್ಯಕ್ಷರು ಹಾಗು ಆಡಳಿತ ನಿರ್ದೇಶಕ ಇರ್ಫಾನ್ ರಝಾಕ್ ಅವರು ಕ್ಯಾಲಿಗ್ರಫಿ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 3.30 ಕ್ಕೆ ರಾಜ್ಯದ ಅಮೀರೆ ಶರೀಯತ್ ಹಾಗು ದಾರುಲ್ ಉಲೂಮ್ ಸಬೀಲುರ್ ರಷಾದ್ ನ ಪ್ರಾಂಶುಪಾಲರಾದ  ಮೌಲಾನಾ ಮುಫ್ತಿ ಸಗೀರ್ ಅಹ್ಮದ್ ಸಾಹೇಬ್ ಅವರು ವಿಚಾರಗೋಷ್ಠಿಯನ್ನು ಉದ್ಘಾಟಿಸಲಿದ್ದಾರೆ. ಇಂಡಿಯಾ ಬಿಲ್ಡರ್ಸ್ ಕಾರ್ಪೊರೇಷನ್ ಅಧ್ಯಕ್ಷ ಝಿಯಾವುಲ್ಲಾ ಶರೀಫ್ , ಪ್ರೆಸ್ಟೀಜ್ ಗ್ರೂಪ್ ನ ಅಧ್ಯಕ್ಷರು ಹಾಗು ಆಡಳಿತ ನಿರ್ದೇಶಕ ಇರ್ಫಾನ್ ರಝಾಕ್ , ಬೆಂಗಳೂರಿನಲ್ಲಿ ಟ್ಯುನೀಷಿಯಾ ಕಾನ್ಸುಲ್ ಶಬೀನಾ ಸುಲ್ತಾನಾ ಹಾಗು ಕಲಾವಿದೆ, ಲೇಖಕಿ ಪುಷ್ಪಮಾಲಾ ಎನ್ ಅವರು ಗೌರವ ಅತಿಥಿಗಳಾಗಿ ಭಾಗವಹಿಸುತ್ತಾರೆ. ಬ್ಯಾರೀಸ್ ಗ್ರೂಪ್ ಹಾಗು ಐಐಐಎಸಿ ಅಧ್ಯಕ್ಷ ಸೈಯದ್ ಮೊಹಮ್ಮದ್ ಬ್ಯಾರಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಮೂರು ದಿನಗಳ ಕಾರ್ಯಕ್ರಮದ ಮಾಹಿತಿ ಇಂತಿವೆ...

* ಮಾ.10ರಂದು ಬೆಳಗ್ಗೆ 10:30ರಿಂದ 6:30ರವರೆಗೆ ಕ್ಯಾಲಿಗ್ರಫಿ ಕಲೆಗಳ ಪ್ರದರ್ಶನ.

* ಅಪರಾಹ್ನ 3:30ರಿಂದ 6.30ರವರೆಗೆ ವಿಚಾರಗೋಷ್ಠಿ. ಇದರಲ್ಲಿ ಅಂತರ್ ರಾಷ್ಟ್ರೀಯ ಮತ್ತು ರಾಷ್ಟ್ರೀಯ ಕ್ಯಾಲಿಗ್ರಫಿ ತಜ್ಞರಿಂದ ಉಪನ್ಯಾಸ

* ಮಾ.11ರಂದು ಬೆಳಗ್ಗೆ 10:30ರಿಂದ ಮಧ್ಯಾಹ್ನ 12ರವರೆಗೆ ಯುಎಇ ನ ನರ್ಜೆಸ್ ನೂರುದ್ದೀನ್ ಹಾಗೂ ಸಾರಾ ಆಬಿದಿ ಅವರಿಂದ ಖತ್ ದಿವಾನಿ ಲಿಪಿ ಬಗ್ಗೆ ಕಾರ್ಯಾಗಾರ.

* ಮಧ್ಯಾಹ್ನ 12:15ರಿಂದ 1:30ರವರೆಗೆ ಟರ್ಕಿ ದೇಶದ ಎಫ್ದೆಲಾದ್ದೀನ್ ಕಿಲಿಕ್ ಹಾಗೂ ಸುಡಾನ್ ದೇಶದ ತಗಲ್ಸಿರ್ ಹಸನ್ ಅವರಿಂದ ಖತ್ ತುಲುತ್ ಲಿಪಿ ಬಗ್ಗೆ ಕಾರ್ಯಾಗಾರ.

* ಅಪರಾಹ್ನ 3ರಿಂದ 4:45ರವರೆಗೆ ಕ್ಯಾಲಿಗ್ರಫಿ ಎಥಿಕ್ಸ್ ಹಾಗೂ ಈಸ್ತೆಟಿಕ್ ಕುರಿತು ವಿಚಾರಗೋಷ್ಠಿ ನಡೆಯಲಿದ್ದು, ಮರಾಠಿ, ಉರ್ದು, ತೆಲುಗು, ಮಲಯಾಳಂ, ತಮಿಳು ಹಾಗೂ ಅರೆಬಿಕ್ ಭಾಷಾ ತಜ್ಞರಿಂದ ವಿಚಾರ ಮಂಡನೆ.

* ಸಂಜೆ 5ರಿಂದ 6:30ರವರೆಗೆ ಭಾರತದಲ್ಲಿ ಬದಲಾಗಿರುವ ಕ್ಯಾಲಿಗ್ರಫಿ ಸ್ವರೂಪ ವಿಷಯದ ಕುರಿತು ನಡೆಯಲಿರುವ ವಿಚಾರಗೋಷ್ಠಿಯಲ್ಲಿ ಕನ್ನಡ, ಅರೆಬಿಕ್, ಉರ್ದು, ಹಿಂದಿ, ದೇವನಾಗರಿ ಲಿಪಿಗಳ ಬಗ್ಗೆ ವಿಷಯ ಮಂಡನೆ.

* ಮಾ.12ರಂದು ಆಧುನಿಕ ಅರೆಬಿಕ್ ಕ್ಯಾಲಿಗ್ರಫಿ ಕುರಿತು ಬಹರೈನ್ ನ ಮೊಹ್ಸಿನ್ ಘರೀಬ್ ಹಾಗೂ ಕುವೈತ್ ನ ಫರೀದ್ ಅಬ್ದುರ್ರಹೀಮ್ ಅಲ್ ಅಲಿಯವರಿಂದ ಕಾರ್ಯಾಗಾರ.

* ಮಧ್ಯಾಹ್ನ 12:15ರಿಂದ 1:30ರವರೆಗೆ ಭಾರತೀಯ ಭಾಷೆಗಳಲ್ಲಿ ಕ್ಯಾಲಿಗ್ರಫಿ ವಿಷಯದ ಕುರಿತು ಅಚ್ಯುತ್ ಪಲಾವ್(ಮರಾಠಿ) ಹಾಗೂ ನಾರಾಯಣ ಭಟ್ಟಾತಿರಿ( ಮಲಯಾಳಂ) ಅವರಿಂದ ವಿಷಯ ಮಂಡನೆ.

* ಅಪರಾಹ್ನ 2:30ರಿಂದ 3:30ರವರೆಗೆ ಗಲ್ಫ್ ರಾಷ್ಟ್ರಗಳಲ್ಲಿ ಕ್ಯಾಲಿಗ್ರಫಿ ವಿಷಯದ ಕುರಿತು ಟರ್ಕಿ, ಸೌದಿ ಅರೇಬಿಯಾ, ಇರಾನ್, ಬಹರೈನ್ ಹಾಗೂ ಯುಎಇ ದೇಶದ ತಜ್ಞರಿಂದ ವಿಷಯ ಮಂಡನೆ.

* ಅಪರಾಹ್ನ 3:30ರಿಂದ 5ರವರೆಗೆ ಸಮಾರೋಪ ಸಮಾರಂಭ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X