ವೇಶ್ಯಾವಾಟಿಕೆ: ಪ್ರಮುಖ ಆರೋಪಿ ಮಹಿಳೆಯ ಬಂಧನ

ಉಳ್ಳಾಲ, ಮಾ.8: ವೇಶ್ಯಾವಾಟಿಕೆ ಅಡ್ಡೆಯೊಂದಕ್ಕೆ ದಾಳಿ ನಡೆಸಿದ ಉಳ್ಳಾಲ ಪೊಲೀಸರು ಪ್ರಮುಖ ಆರೋಪಿಯಾಗಿರುವ ಮಹಿಳೆಯೊಬ್ಬರನ್ನು ಬಂಧಿಸಿದ ಘಟನೆ ಮಂಗಳವಾರ ರಾತ್ರಿ ಉಳ್ಳಾಲ ತಾಲೂಕಿನ ಪೆರ್ಮನ್ನೂರು ಗ್ರಾಮದ ಪಂಡಿತ್ ಹೌಸ್ ಎಂಬಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಬೊಳಂತೂರು ಗ್ರಾಮದ ವಿಟ್ಲಕೋಡಿ ನಿವಾಸಿ ರುಕಿಯಾ (50)ಬಂಧಿತ ಆರೋಪಿ. ಈ ವೇಳೆ ಪಿಂಪ್ ಲತೀಫ್ ಎಂಬಾತ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಚಿತ ಮಾಹಿತಿಯನ್ನು ಆಧರಿಸಿ ಈ ಕಾರ್ಯಾಚರಣೆ ನಡೆದಿದ್ದು, ಆರೋಪಿಗಳಿಗೆ ಸೇರಿದ 3 ದ್ವಿಚಕ್ರ ವಾಹನಗಳು, 9 ಮೊಬೈಲ್ ಫೋನ್ ಗಳು, 5,000 ನಗದು ಸೇರಿದಂತೆ ಒಟ್ಟು 1,76,580 ರೂ. ಮೌಲ್ಯದ ಸೊತ್ತನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





