ಮಲ್ಪೆ: ಬೋಟಿನ ಫ್ಯಾನ್ ಕಳವು
ಮಲ್ಪೆ, ಮಾ. 8: ದುರಸ್ತಿಗಾಗಿ ಮಲ್ಪೆಯ ರಾಜೇಶ್ವರಿ ಇಂಜಿನಿಯರಿಂಗ್ ವರ್ಕ್‌ಶಾಪ್‌ನ ಹೊರಗಡೆ ಇಟ್ಟಿದ್ದ ಬೋಟಿನ ಹಳೆಯ ಫ್ಯಾನ್ ಕಳವಾಗಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದುರಸ್ತಿಗೆ ತಂದಿಟ್ಟಿದ್ದ ಮಲ್ಪೆ ಹನುಮಾನ್ ನಗರದ ಹರೀಶ್ ಎಂಬವರ ಶಿವಜ್ಯೋತಿ ಬೋಟಿನ ಹಳೆ ಫ್ಯಾನನ್ನು ತೆಗೆದು ವರ್ಕ್‌ಶಾಪ್‌ನ ಹೊರಗಡೆ ಇಡಲಾಗಿತ್ತು. ಇದನ್ನು ಕಳ್ಳರು ಫೆ.27ರಂದು ಮಧ್ಯರಾತ್ರಿ ಕಳ್ಳತನ ಮಾಡಿ ಒಂದು ವಾಹನದಲ್ಲಿ ಹಾಕಿಕೊಂಡು ಹೋಗಿರುವುದು ಸಿಸಿಟಿವಿಯಲ್ಲಿ ಕಂಡು ಬಂದಿದೆ. ಇದರ ಮೌಲ್ಯ 1,10,000ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story